Menu

ಭಾಲ್ಕಿಯಲ್ಲಿ ಸಿಡಿಲಿಗೆ ಯುವಕರಿಬ್ಬರು ಬಲಿ

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಾವದಗಿ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಯುವ ರೈತರು ಮೃತಪಟ್ಟಿದ್ದಾರೆ. ನಾವದಗಿ ಗ್ರಾಮದ ರೇವಣಸಿದ್ದ (28) ಮತ್ತು ಜೇವರ್ಗಿಯ ಯಲ್ಲಾಲಿಂಗ (28) ಸಿಡಿಲಿಗೆ ಬಲಿಯಾವರು.

ಗುರುವಾರ ಸಂಜೆ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ಮಳೆ ಶುರುವಾಗಿದೆ. ಹೀಗಾಗಿ ಇಬ್ಬರೂ ಜಮೀನಿನಲ್ಲಿದ್ದ ಮಾವಿನ ಮರದ ಕಳಗಡೆ ನಿಂತಿದ್ದರು. ಈ ವೇಳೆ ಮಾವಿನ ಮರಕ್ಕೆ ಸಿಡಿಲು ಅಪ್ಪಳಿಸಿದ್ದು, ಇಬ್ಬರು ಸ್ಥಳದಲ್ಲೇ ಅಸು ನೀಗಿದ್ದಾರೆ. ಖಟಕ್ ಚಿಂಚೋಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎರಡು ದಿನದ ಹಿಂದೆ ಮಳೆಯ ಅಬ್ಬರದ ನಡುವೆ ಸಿಡಿಲಿನ ಹೊಡೆತಕ್ಕೆ ಲಿಂಗಸೂಗೂರು ತಾಲೂಕಿನಲ್ಲಿ ರೈತ ಮಹಿಳೆ ಬಲಿಯಾಗಿದ್ದಾರೆ. ಲಿಂಗಸೂಗೂರು ತಾಲೂಕಿನ ಯರಜಂತಿ ಬಳಿಯ ಬಸವನ ಬಗಡಿ ದೊಡ್ಡಿಯಲ್ಲಿ ಈ ದುರಂತ ಸಂಭವಿಸಿದೆ.

ಮಳೆ ಬರುತ್ತಿದ್ದ ಕಾರಣ ಜಮೀನಿನಲ್ಲಿದ್ದ ಮೇವಿನ ಬಣವೆ ನೆನೆಯಬಾರದೆಂದು ಅದಕ್ಕೆ ತಾಡಪಾಲು ಹೊದಿಸಲು 40 ವರ್ಷದ ದುರುಗಮ್ಮ ತೆರಳಿದ್ದರು. ಆಗ ಬಡಿದ ಸಿಡಿಲಿಗೆ ಸ್ಥಳದಲ್ಲೇ ಅಸು ನೀಗಿದ್ದಾರೆ. ಮಾನ್ವಿ ತಾಲೂಕಿನ ಹಿರೇದಿನ್ನಿ ಗ್ರಾಮದಲ್ಲಿ ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ಹೊತ್ತಿ ಉರಿದಿದೆ.  ಸೋಮವಾರ ಸುರಿದ ಮಳೆಗೆ ಹಾಸನ ಜಿಲ್ಲೆಯಲ್ಲಿ ಮರದ ಕೆಳಗೆ ನಿಂತಿದ್ದ ವೃದ್ಧೆ ನೀಲಮ್ಮ ಸಿಡಿಲು ಬಡಿದು ಅಸು ನೀಗಿದ್ದಾರೆ.

Related Posts

Leave a Reply

Your email address will not be published. Required fields are marked *