Menu

ಕೇಂದ್ರ ತೆರಿಗೆ ಕುಟಿಲ ನೀತಿ ಮತ್ತು ಕರ್ನಾಟಕಕ್ಕೆ ಅನ್ಯಾಯ

ಇಡೀ ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿ ಮಾಡುವ ಎರಡನೆ ರಾಜ್ಯವಾದ ಕರ್ನಾಟಕ ಮತ್ತು ಕರ್ನಾಟಕ ಸರ್ಕಾರವನ್ನು ಈ ದಿಶೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅಥವಾ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಒಂದು ದಿನವಾದರೂ ಪ್ರಶಂಸೆ ಮಾಡಿದ್ದಾರೆಯೇ ? ಕೇವಲ ಬಿಜೆಪಿ ಮಿತ್ರ ರಾಜ್ಯಗಳನ್ನೇ ತಮ್ಮ ತಲೆ ಮೇಲೆ ಕುಳ್ಳಿರಿಸಿ ಕೊಂಡು ಮಹಾ ಪ್ರಶಂಸೆಗಳ ಸುರಿಮಳೆಗೈದು ಊರ ಮೆರವಣಿಗೆ ಮಾಡುವ ಕೇಂದ್ರ ಸರ್ಕಾರ ಮಂತ್ರಿ ಮಹೋದಯರ ಮನಸಿನಲ್ಲಿ ಯಾಕೆ ಈ ಮತ್ಸರ , ದ್ವೇಷಾಸೂಯೆ ಮತ್ತು ಪಕ್ಷಪಾತ ಭಾವ? ಒಕ್ಕೂಟ ವ್ಯವಸ್ಥೆಯ ಮೂಲ ಪರಿಕಲ್ಪನೆಂiನ್ನು ಆಪೋಶನ ತೆಗೆದುಕೊಳ್ಳುವ ಕೇಂದ್ರ ಕುಟಿಲ ತೆರಿಗೆ ನೀತಿ ಇನ್ನೂ ಎಷ್ಟು ದಿನ?

ಹೆಚ್ಚು ತೆರಿಗೆ ಪಾವತಿ ಮಾಡುವ ರಾಜ್ಯಕ್ಕೆ ಕೇಂದ್ರದಿಂದ ಕಡಿಮೆ ಅನುದಾನ! ತೆರಿಗೆಗಳನ್ನೇ ಸರಿಯಾಗಿ ಪಾವತಿ ಮಾಡದ ದೊಡ್ಡ ರಾಜ್ಯಗಳಿಗೆ ಹೆಚ್ಚು ಅನುದಾನ.. ! ಇದೆಂತಹ ಅನ್ಯಾಯ ಮತ್ತು ಅತಾರ್ಕಿಕ ನೀತಿ ? ಕೇಂದ್ರ ಸರ್ಕಾರದ ಈ ಪರಮ ಅನ್ಯಾಯದ ನೀತಿಯನ್ನು ಕೇಳುವ ಧೈರ್ಯ ಮಾಡಿರುವುದೆಂದರೆ ಅದು ಕರ್ನಾಟಕ. ಸಹಜ ನ್ಯಾಯವಾದರೂ ಈ ನೀತಿಯಲ್ಲಿ ಎಲ್ಲಿದೆ?
ಎರಡು ವರ್ಷಗಳ ಹಿಂದೆ ರಾಜ್ಯಕ್ಕೆ ದಕ್ಕಬೇಕಿದ್ದ ಜಿಎಸ್‌ಟಿ ಪಾಲಿನ ಬಗ್ಗೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರುವಂತಹ ಪರಿಸ್ಥಿತಿ ಬಂದಿತ್ತು. ರಾಜ್ಯ ಸರ್ಕಾರ ಅದೆಷ್ಟೇ ಗೋಗೆರೆದು ತನ್ನ ಕಷ್ಟವನ್ನು ಕೇಂದ್ರ ಸರ್ಕಾರದ ಮುಂದೆ ತೋಡಿಕೊಂಡರೂ ಹಣಕಾಸು ಸಚಿವರಾಗಲೀ. ಪ್ರಧಾನಿಗಳಾಗಲೀ ಇದಕ್ಕೆ ಕ್ಯಾರೇ ಎನ್ನಲಿಲ್ಲ . ಇನ್ನು ರಾಜ್ಯಕ್ಕೆ ಹೇಗೆ ನ್ಯಾಯ ದೊರಕಬೇಕು.

ಸುಪ್ರೀಂಕೋರ್ಟ್ ಮೆಟ್ಟಿಲೇರದೆ ರಾಜ್ಯವು ಇನ್ನೆಲ್ಲಿ ನ್ಯಾಯ ಕೋರಿ ಮೊರೆಯಿಡಲು ಸಾಧ್ಯ ? ಒಕ್ಕೂಟ ವ್ಯವಸ್ಥೆಯ ಪ್ರಜಾತಂತ್ರದಲ್ಲಿಂದು ಕರ್ನಾಟಕ ಒಂದರ್ಥದಲ್ಲಿ ದೆಹಲಿ ವಂದಿ ಮಾಗಧರಿಗೆ ಚಿನ್ನದ ಮೊಟ್ಟೆ ಇಡುವ ರಾಜ್ಯ ! ಅಲ್ಲದೆ ತಮ್ಮ ರಾಜಕೀಯ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲೆಂದು ಬೇಕಿರುವ ಬೆಂಗಳೂರು.. ! ಎಕೆಂದರೆ ಇಲ್ಲಿ ತಮಿಳುನಾಡು ಅಥವಾ ಆಂಧ್ರದಲ್ಲಿ ಡಿಎಂಕೆ ಅಥವಾ ತೆಲುಗುದೇಶಂ ಅಂತಹ ಪಕ್ಷಗಳು ಇಲ್ಲ. ಪ್ರಾಯಶಃ ಇದ್ದಿದ್ದರೆ ರಾಜ್ಯಕ್ಕೆ ಅತಿ ಹೆಚ್ಚು ಅನುದಾನ ರಿದು ಬರುತ್ತಿತ್ತೇನೋ.

ಭಾರತೀಯ ಸಂವಿಧಾನದಲ್ಲಿ ತಾರತಮ್ಯ ಎಂಬುದಕ್ಕೆ ಅತಿ ಮುಖ್ಯ ಸ್ಥಾನವಿದೆ. ಇದು ಕೇವಲ ಭಾರತೀಯ ಪ್ರಜೆಯ ಪ್ರಮುಖ ಹಕ್ಕೊಂದೇ ಅಲ್ಲ. ಕೇಂದ್ರದ ಪಕ್ಷಪಾತ ಮತ್ತು ಏಕಸಾಮ್ಯ ನೀತಿಯನ್ನು ಪ್ರಶ್ನಿಸಲು ನೊಂದ ಅಥವಾ ಶೋಷಿತ ರಾಜ್ಯಕ್ಕೆ ಸಂವಿಧಾನವೇ ನೀಡಿರುವ ಅಧಿಕಾರ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ ಎಂಬುದು ನಿಜ. ಇದು ಜನಾದೇಶ. ಇದನ್ನು ಗೌರವಿಸುವುದು ಕೇಂದ್ರ ಸರ್ಕಾರದ ಮೊದಲ ಕರ್ತವ್ಯ. ಆದರೆ ಈ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ ಎಂಬ ಮಾತ್ರಕ್ಕೆ ಸರ್ಕಾರಕ್ಕೆ ಕಿರಿಕಿರಿ ಉಂಟು ಮಾಡುವ ತೀರ್ಮಾನ ಬಾಲಿಶ ಎನ್ನದೆ ವಿಧಿಯಿಲ್ಲ.

ಇಡೀ ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿ ಮಾಡುವ ಎರಡನೆ ರಾಜ್ಯವಾದ ಕರ್ನಾಟಕ ಮತ್ತು ಕರ್ನಾಟಕ ಸರ್ಕಾರವನ್ನು ಒಂದು ದಿನವಾದರೂ ಈ ದಿಶೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅಥವಾ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಪ್ರಶಂಸೆ ಮಾಡಿದ್ದಾರೆಯೇ ? ಕೇವಲ ಬಿಜೆಪಿ ಮಿತ್ರ ರಾಜ್ಯಗಳನ್ನೇ ತಮ್ಮ ತಲೆ ಮೇಲೆ ಕುಳ್ಳಿರಿಸಿ ಕೊಂಡು ಮಹಾ ಪ್ರಶಂಸೆಗಳ ಸುರಿಮಳೆಗೈಯ್ಯುವ ಕೇಂದ್ರ ಸರ್ಕಾರ ಮಂತ್ರಿ ಮಹೋದಯರ ಮನಸಿನಲ್ಲಿ ಯಾಕೆ ಈ ಮತ್ಸರ ? ರಾಜ್ಯವೊಂದುಆರ್ಥಿಕ ಎಲ್ಲ ಶಿಸ್ತು ಪಾಲಿಸಿ ಇತ್ತ ರಾಜ್ಯ ಕ್ಕೂ ಅತ್ತ ದೇಶದ ಖಜಾನೆಗೂ ಉತ್ತಮ ಆದಾಯವನ್ನು ನೀಡುವ ರಾಜ್ಯವಾಗಿ ಕರ್ನಾಟಕ ಸಾಧನೆ ಮಾಡಿದ್ದರೂ ಇದನ್ನು ಬದಿಗಿರಿಸಿ ರಾಜಕೀಯವಾಗಿ ವ್ಯಾಖ್ಯಾನಿಸುವ ಕುತರ್ಕ ಮತ್ತು ಕೌರವ ಕುಟಿಲ ನೀತಿ ಏಕೆ ? ಇದು ತೆರಿಗೆ ಭಯೋತ್ಪಾದನೆಗೆ ಇದಕ್ಕಿಂತ ಬೇರೇನು ಬೇಕಿದೆ ?

Related Posts

Leave a Reply

Your email address will not be published. Required fields are marked *