Menu

ಕಾಂಗ್ರೆಸ್‌ನಿಂದ ದಾವಣಗೆರೆ ದಕ್ಷಿಣ ಕಿತ್ತುಕೊಳ್ಳಲು ಬಿಜೆಪಿ ರಣತಂತ್ರ

“ಈ ಬಾರಿ ದಕ್ಷಿಣದಲ್ಲಿ ಬಿಜೆಪಿ” ಎಂಬ ಘೋಷವಾಕ್ಯದೊಂದಿಗೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕೇಸರಿ ಪಡೆ ಭರ್ಜರಿ ತಯಾರಿ ನಡೆಸಿದೆ. ಅಭಿವೃದ್ಧಿ ಅಜೆಂಡಾ ಮತ್ತು ಬೂತ್ ಮಟ್ಟದ ಸಂಘಟನೆಯೊoದಿಗೆ ಕಣಕ್ಕಿಳಿಯಲು ಸಜ್ಜಾಗಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಈಗಾಗಲೇ ಪಕ್ಷದ ಸಂಘಟನಾ ಕಾರ್ಯ ಚುರುಕುಗೊಂಡಿದೆ. ಮತದಾರರನ್ನು ಸೆಳೆಯಲು ಬೂತ್ ಮಟ್ಟದಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಲಾಗಿದ್ದು, ಕಾರ್ಯಕರ್ತರು ಮನೆಮನೆಗೆ ತೆರಳಿ ಪ್ರಚಾರ ನಡೆಸಲಿದ್ದಾರೆ ಎಂದರು.

“ಕಾoಗ್ರೆಸ್‌ನಲ್ಲಿ ಒಡಕು ತಾರಕಕ್ಕೇರಿದೆ. ಇಷ್ಟು ವರ್ಷ ಆ ಪಕ್ಷಕ್ಕೆ ಬೆಂಬಲ ನೀಡಿದ್ದ ಅಲ್ಪಸಂಖ್ಯಾತ ಸಮುದಾಯ ಈಗ ಅಸಮಾಧಾನಗೊಂಡಿದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಉಂಟಾಗಿರುವ ಗೊಂದಲ ನಮಗೆ ವರದಾನವಾಗಲಿದೆ. ಜೊತೆಗೆ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತವಾಗಿದ್ದು, ರಾಜ್ಯ 20 ವರ್ಷಗಳಷ್ಟು ಹಿಂದೆ ಹೋಗಿದೆ. ಇದನ್ನು ಮತದಾರರು ಗಮನಿಸುತ್ತಿದ್ದಾರೆ” ಎಂದು ರಾಜಶೇಖರ್ ಟೀಕಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನಿರ್ದೇಶನದಂತೆ ಕ್ಷೇತ್ರಕ್ಕೆ ಪ್ರಮುಖ ನಾಯಕರ ತಂಡವೇ ಆಗಮಿಸಲಿದೆ. ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ನಳೀನ್ ಕುಮಾರ್ ಕಟೀಲ್ ಹಾಗೂ ಸಿ.ಟಿ. ರವಿ ಅವರನ್ನೊಳಗೊಂಡ ತಂಡ ಚುನಾವಣಾ ಕಾರ್ಯತಂತ್ರ ರೂಪಿಸಲಿದೆ ಎಂದರು.

ಕೇoದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಸಂಸದ ಯದುವೀರ್ ಒಡೆಯರ್, ಕೆ. ಅಣ್ಣಾಮಲೈ, ಆರ್. ಅಶೋಕ್, ಶ್ರೀರಾಮುಲು ಸೇರಿದಂತೆ ರಾಜ್ಯ ಹಾಗೂ ಕೇಂದ್ರದ ಪ್ರಮುಖ ನಾಯಕರು ಪ್ರಚಾರ ನಡೆಸಲಿದ್ದಾರೆ. ನಟಿ ಶೃತಿ, ಮಾಳವಿಕಾ ಅವಿನಾಶ್, ತಾರಾ ಅನುರಾಧಾ ಕೂಡಾ ಮತಯಾಚನೆ ಮಾಡಲಿದ್ದಾರೆ. ಅಲ್ಪಸಂಖ್ಯಾತ ನಾಯಕರಾದ ತಾರೀಫ್ ಮನ್ಸೂರಿ, ಅಜೀಂ ಸೇರಿದಂತೆ ಹಲವರು ಜಿಲ್ಲೆಗೆ ಆಗಮಿಸಿ ಮತದಾರರ ಮನವೊಲಿಸುವ ಕೆಲಸ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

Related Posts

Leave a Reply

Your email address will not be published. Required fields are marked *