Menu

ಎಲ್‌ಪಿಜಿ ವ್ಯತ್ಯಯ: ಮಲೆ ಮಹದೇಶ್ವರ ಸನ್ನಿಧಿಯಲ್ಲಿ ಯುಗಾದಿಗೆ ಅನ್ನದಾಸೋಹ, ಲಾಡು ಇಲ್ಲ?

ಇರಾನ್‌- ಇಸ್ರೇಲ್‌ ಬಿಕ್ಕಟ್ಟು  ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಯುದ್ಧದ ಬಿಸಿ ಜಾಗತಿಕವಾಗಿ ವ್ಯಾಪಿಸುತ್ತಿದೆ. ಮಧ್ಯಪ್ರಾಚ್ಯ ಪ್ರಕ್ಷುಬ್ಧಗೊಂಡು ಪೆಟ್ರೋಲ್‌ ಸೇರಿದಂತೆ ತೈಲ ಪೂರೈಕೆಯಲ್ಲಿ ವ್ಯತ್ಯಯಗೊಂಡಿದೆ. ಭಾರತದಲ್ಲೂ ಎಲ್‌ಪಿಜಿ ಬಿಕ್ಕಟ್ಟು ಸೃಷ್ಟಿಯಾಗಿದೆ. ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ಯುಗಾದಿ ಜಾತ್ರೆಗೆ ಅನ್ನದಾಸೋಹ ಮತ್ತು ಲಾಡು ಪ್ರಸಾದ ವಿತರಣೆಗೂ ತೊಂದರೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇಲ್ಲಿ ದಿನನಿತ್ಯ ಸಾವಿರಾರು ಭಕ್ತರು ಅನ್ನದಾಸೋಹ ಪ್ರಸಾದ ಸ್ವಿಕರಿಸುತ್ತಾರೆ. ಲಾಡು ಪ್ರಸಾದ ತಯಾರಿಕೆಗೆ ಒಂದು ದಿನಕ್ಕೆ 12ಕ್ಕೂ ಹೆಚ್ಚು ಸಿಲಿಂಡರ್​ಗಳನ್ನು ಬಳಸಲಾಗುತ್ತಿದೆ. ಒಂದು ವಾರದವರೆಗೆ ದಾಸೋಹಕ್ಕೆ ಯಾವುದೇ ಸಮಸ್ಯೆಯಿಲ್ಲ. ಪರಿಸ್ಥಿತಿ ಹೀಗೆ ಮುಂದವರಿದರೆ ಇವೆಲ್ಲವೂ ಬಂದ್‌ ಆಗಲಿದೆ.

ಪ್ರತಿ ವರ್ಷ ಮೂರು ಬಾರಿ ಮಾದಪ್ಪನ ಬೆಟ್ಟದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ವೇಳೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ಬರ್ತಾರೆ. ಲಕ್ಷಾಂತರ ಲಾಡು ಪ್ರಸಾದ ಮಾರಾಟವಾಗುತ್ತದೆ. ಅನ್ನದಾಸೋಹ ಪ್ರಸಾದ ಸೇವಿಸುತ್ತಾರೆ. ಜಾತ್ರೆಯ ವೇಳೆ ದಾಸೋಹಕ್ಕೆ ಒಂದು ದಿನಕ್ಕೆ 12 ರಿಂದ 15 ಸಿಲಿಂಡರ್ ಬೇಕಾಗುತ್ತದೆ. 2.50 ಲಕ್ಷ ಲಾಡು ತಯಾರಿ ಮಾಡಲು 20 ಕ್ಕೂ ಹೆಚ್ಚು ಸಿಲಿಂಡರ್​​ ಒಂದು ದಿನಕ್ಕೆ ಬಳಕೆ ಮಾಡಲಾಗುತ್ತದೆ. ಗ್ಯಾಸ್ ಸಿಲಿಂಡರ್ ಅಭಾವ ಹೀಗೆ ಮುಂದುವರಿದರೆ ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಲಾಡು ಪ್ರಸಾದ ಹಾಗೂ ಅನ್ನದಾಸೋಹಕ್ಕೆ ತೊಡಕಾಗಲಿದೆ. ಮಲೆ ಮಹದೇಶ್ವರ ಪ್ರಾಧಿಕಾರದ ಕಾರ್ಯದರ್ಶಿ ರಘು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.

ಎಲ್‌ಪಿಜಿ ಬಿಕ್ಕಟ್ಟಿನಿಂದ ಈಗಲೇ ದೇಶದ ಮಹಾನಗರಗಳಲ್ಲಿ ಹೋಟೆಲ್‌ ಉದ್ಯಮವು ತತ್ತರಿಸಿದೆ. ಬೆಂಗಳೂರು ಬನಶಂಕರಿ,  ದಿನದ ಮೂರು ಹೊತ್ಕುತು ಊಟ ಮತ್ಕ್ಕೆತು ಉಪಾಹಾರ ನೀಡುವ  ಸುಬ್ರಹ್ಮಣ್ಯ, ಕಟೀಲು ಸೇರಿದಂತೆ  ದೇವಸ್ಥಾನಗಳಲ್ಲೂ ಊಟದ  ವ್ಯವಸ್ಥೆಗೆ ತೊಂದರೆಯಾಗಿದೆ.  ಪಿಜಿಗಳು, ಹಾಸ್ಟೆಲ್‌ಗಳಲ್ಲೂ  ಊಟ ತಿಂಡಿ ಮೆನು ಬದಲಾಗಿವೆ.

Related Posts

Leave a Reply

Your email address will not be published. Required fields are marked *