ತನ್ನ ವೈಫಲ್ಯಗಳನ್ನ, ಯಡವಟ್ಟುಗಳನ್ನ, ಭ್ರಷ್ಟಾಚಾರವನ್ನ ಮುಚ್ಚಿಟ್ಟುಕೊಳ್ಳುವ ಸಲುವಾಗಿ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ಹೊರಟಿರುವ @INCKarnataka ಸರ್ಕಾರ ತನ್ನ ಪ್ರಜಾಪ್ರಭುತ್ವ ವಿರೋಧಿ, ಸರ್ವಾಧಿಕಾರಿ ಧೋರಣೆಯನ್ನು ಮತ್ತೊಮ್ಮೆ ಪ್ರದರ್ಶನ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಟೀಕಿಸಿದ್ದಾರೆ.
ಸಿಎಂ @siddaramaiah ನವರೇ, ತಮ್ಮ ಸರ್ವೋಚ್ಛ ನಾಯಕ @RahulGandhi ಅವರು ಹೋದ ಬಂದಲ್ಲೆಲ್ಲ ಪ್ರದೇಶನ ಮಾಡುವ ಕೆಂಪು ಸಂವಿಧಾನದ ಪುಸ್ತಕದಲ್ಲಿ ಮಾಧ್ಯಮಗಳಿಗೆ ಪತ್ರಿಕಾ ಸ್ವಾತಂತ್ರ್ಯ ಇಲ್ಲವೇ? ಅಥವಾ ಇತ್ತೀಚೆಗೆ ಮಾಧ್ಯಮಗಳು ಬಯಲು ಮಾಡಿದ ತಮ್ಮ ಅತ್ಯಾಪ್ತ ಸಚಿವ @byrathi_suresh ಅವರ ಕಚೇರಿಯಲ್ಲಿ ನಡೆದ ಲಕ್ಷಾಂತರ ರೂಪಾಯಿ ಚಿನ್ನ, ನಗದು ಕಳ್ಳತನದಂತಹ ಪ್ರಕರಣಗಳು, ಅಕ್ರಮ ವ್ಯವಹಾರಗಳು ಇನ್ನಷ್ಟು ಬಯಲಾಗುತ್ತವೆ ಎನ್ನುವ ಭಯವೋ ಎಂದು ಪ್ರಶ್ನಿಸಿದ್ದಾರೆ.
ಎಮರ್ಜೆನ್ಸಿ ಇನ್ ಕರ್ನಾಟಕ !
ತನ್ನ ವೈಫಲ್ಯಗಳನ್ನ, ಯಡವಟ್ಟುಗಳನ್ನ, ಭ್ರಷ್ಟಾಚಾರವನ್ನ ಮುಚ್ಚಿಟ್ಟುಕೊಳ್ಳುವ ಸಲುವಾಗಿ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ಹೊರಟಿರುವ @INCKarnataka ಸರ್ಕಾರ ತನ್ನ ಪ್ರಜಾಪ್ರಭುತ್ವ ವಿರೋಧಿ, ಸರ್ವಾಧಿಕಾರಿ ಧೋರಣೆಯನ್ನು ಮತ್ತೊಮ್ಮೆ ಪ್ರದರ್ಶನ ಮಾಡಿದೆ.
ಸಿಎಂ @siddaramaiah ನವರೇ,
ತಮ್ಮ ಸರ್ವೋಚ್ಛ ನಾಯಕ… pic.twitter.com/fR3uAd6vZ6
— R. Ashoka (@RAshokaBJP) February 18, 2026
ವಿಧಾನಸೌಧ ನಿಮ್ಮ ಕಾಂಗ್ರೆಸ್ ಪಕ್ಷದ ಕಚೇರಿ ಅಲ್ಲ ಸ್ವಾಮಿ, ಅದು ಪ್ರಜಾಸೌಧ, ಏಳು ಕೋಟಿ ಕನ್ನಡಿಗರಿಗೆ ಸೇರಿದ ಶಕ್ತಿಸೌಧ. ಅಲ್ಲಿಗೆ ಮಾಧ್ಯಮದವರನ್ನು ಬರಬೇಡಿ ಎಂದು ನಿಯಂತ್ರಣ ಮಾಡಲು ಯಾರಿಗೂ ಅಧಿಕಾರವಿಲ್ಲ. ಮಾಧ್ಯಮದವರು ವಿಧಾನಸೌಧದ ನಿಗದಿತ ಸ್ಥಳದಲ್ಲಿ ಮಾತ್ರ ಸಂದರ್ಶನ ಮಾಡಬೇಕು ಎನ್ನುವ ಈ ಅಸಂವಿಧಾನಿಕ ಆದೇಶವನ್ನ ಈ ಕೂಡಲೇ ವಾಪಸ್ಸು ಪಡೆಯಬೇಕು ಮತ್ತು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮಾಧ್ಯಮಗಳು ಸ್ವತಂತ್ರವಾಗಿ ತಮ್ಮ ಕರ್ತವ್ಯ ನಿರ್ವಹಣೆ ಮಾಡಲು ಮುಕ್ತ ಅವಕಾಶ ಮಾಡಿಕೊಡಬೇಕು ಎಂದು ರಾಜ್ಯ ಸರ್ಕಾರವನ್ನ ಆಗ್ರಹಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಇದೊಂದು ನಾಲಾಯಕ್ ಸರ್ಕಾರ. ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧವನ್ನು ಬಿಜೆಪಿ ಖಂಡಿಸುತ್ತದೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಬೆಳಗಾವಿ ಅಧಿವೇಶನದಲ್ಲಿ ದ್ವೇಷ ಭಾಷಣ ಕಾಯ್ದೆ ತಂದರು, ಇದನ್ನೆಲ್ಲ ಗಮನಿಸಿದರೆ ಕಾಂಗ್ರೆಸ್ ಸರ್ಕಾರದ್ದು ಪ್ರಜಾಪ್ರಭುತ್ವ ಅಣಕಿಸುವ ನಡೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಮಾಡಿರೋ ಸರ್ಕಾರದ ನಡೆಯನ್ನ ಜೆಡಿಎಸ್ ಖಂಡಿಸಿದೆ. ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರೋ ಜೆಡಿಎಸ್, ಇದು ಸರ್ಕಾರದ ಹೇಡಿತನಕ್ಕೆ ಸಾಕ್ಷಿ ಎಂದು ಹೇಳಿದೆ.
ಆರೋಗ್ಯ ಸಚಿವ @dineshgrao ಅವರೇ,
₹880 ಕೋಟಿ ಮೌಲ್ಯದ 890 ವಿವಿಧ ಔಷಧಗಳನ್ನು ಖರೀದಿಸುವಂತೆ ಆರ್ಥಿಕ ಇಲಾಖೆ ಅನುಮೋದನೆ ಕೊಟ್ಟು 7 ತಿಂಗಳು ಕಳೆದರೂ ಇನ್ನೂ ಖರೀದಿ ಮಾಡಿಲ್ಲವಲ್ಲ ಸ್ವಾಮಿ.
ನಿಮ್ಮ ಕೈಯಲ್ಲಿ ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಅದು ಬಿಟ್ಟು ಬಡವರ ಜೀವದ ಜೊತೆ ಯಾಕೆ ಚೆಲ್ಲಾಟ ಆಡುತ್ತೀರಿ?
ಸಿಎಂ… pic.twitter.com/WiqyVQvHSp
— R. Ashoka (@RAshokaBJP) February 18, 2026
ಆರೋಗ್ಯ ಸಚಿವ @dineshgrao ಅವರೇ, ₹880 ಕೋಟಿ ಮೌಲ್ಯದ 890 ವಿವಿಧ ಔಷಧಗಳನ್ನು ಖರೀದಿಸುವಂತೆ ಆರ್ಥಿಕ ಇಲಾಖೆ ಅನುಮೋದನೆ ಕೊಟ್ಟು 7 ತಿಂಗಳು ಕಳೆದರೂ ಇನ್ನೂ ಖರೀದಿ ಮಾಡಿಲ್ಲವಲ್ಲ ಸ್ವಾಮಿ. ನಿಮ್ಮ ಕೈಯಲ್ಲಿ ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಅದು ಬಿಟ್ಟು ಬಡವರ ಜೀವದ ಜೊತೆ ಯಾಕೆ ಚೆಲ್ಲಾಟ ಆಡುತ್ತೀರಿ? ಸಿಎಂ @siddaramaiah ನವರೇ, ನಿಮ್ಮ @INCKarnataka ಸರ್ಕಾರಕ್ಕೆ ಕಿಂಚಿತ್ತಾದರೂ ನಾಚಿಕೆ, ಮಾನ, ಮರ್ಯಾದೆ ಇದ್ದರೆ ಈ ಕೂಡಲೇ ಆರೋಗ್ಯ ಸಚಿವರನ್ನ ಸಂಪುಟದಿಂದ ವಜಾ ಮಾಡಿ ಎಂದು ಮತ್ತೊಂದು ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಮುಖ್ಯಮಂತ್ರಿಗಳಿಗೆ ಸಚಿವರ ಮೇಲೆ ಹಿಡಿತವಿಲ್ಲ. ಕೆಪಿಸಿಸಿ ಅಧ್ಯಕ್ಷರಿಗೆ ಶಾಸಕರ ಮೇಲೆ ಹಿಡಿತವಿಲ್ಲ, ಸಚಿವರಿಗೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲ ಇಲ್ಲ. ಒಟ್ಟಿನಲ್ಲಿ ಈ ನಾಲಾಯಕ್ @INCKarnataka ಸರ್ಕಾರ ತೊಲಗುವವರೆಗೂ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ, ಕನ್ನಡಿಗರಿಗೆ ನೆಮ್ಮದಿ ಇಲ್ಲ ಎಂದೂ ಬರೆದುಕೊಂಡಿದ್ದಾರೆ.


