ಬೆಂಗಳೂರು-ಇನ್ನು ಮುಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ದ ಅನಗತ್ಯವಾಗಿ ಟೀಕೆ ಮಾಡುವುದನ್ನು ಮುಂದುವರೆಸಿದರೆ ಯಾವುದೇ ಕಾರಣಕ್ಕೂ ನಾವು ಸಹಿಸುವುದಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತೆ ಶಾಸಕ ರಮೇಶ್ ಜಾರಕಿಹೊಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಅವರ ನಿವಾಸದಲ್ಲಿ ಮಾಜಿ ಶಾಸಕರಾದ ವೈ.ಸಂಪಂಗಿ, ಎಂ.ಡಿ.ಲಕ್ಷ್ಮೀನಾರಾಯಣ, ದೇವನಹಳ್ಳಿ ಚಂದ್ರಪ್ಪ, ಪಿಳ್ಳೆ ಮುನಿಶ್ಯಾಮಪ್ಪ ಸೇರಿದಂತೆ ಮತ್ತಿತರ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಪ್ರಮುಖರಲ್ಲ ಯಡಿಯೂರಪ್ಪ ಮೊದಲಿಗರು. ಅವರ ವಿರುದ್ಧ ರಮೇಶ್ ಜಾರಕಿಹೊಳಿ ಸೇರಿದಂತೆ ಯಾರೇ ಮಾತನಾಡಿದರೂ ನಾವುಸುಮ್ಮನಿರುವುದಿಲ್ಲ. ಇದೇ ಕೊನೆ ನಾಲಿಗೆ ಹರಿಬಿಟ್ಟರೆ ಹುಷಾರ್ ಎಂದರು.
ರಮೇಶ್ ಜಾರಕಿಹೊಳಿ ಎಂದೂ ಹಗುರವಾಗಿ ಮಾತನಾಡಿದವರಲ್ಲ. ಯಾರೋ ಅವರಿಗೆ ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಮಾತನಾಡಿ ಎಂದು ಹೇಳಿಕೊಟ್ಟಿರಬೇಕು. ಹೀಗಾಗಿ ಬಿಎಸ್‍ವೈ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ. ಇದೇ ರೀತಿ ಮಾತನಾಡಿದರೆ ನಾವು ಕೂಡ ಮಾತನಾಡಲೇಬೇಕಾಗುತ್ತದೆ.
ಬಿಜೆಪಿಗೆ ರಮೇಶ್ ಜಾರಕಿಹೊಳಿಯನ್ನು ಕರೆತಂದಿದ್ದು ಯಡಿಯೂರಪ್ಪ. ಅನಗತ್ಯವಾಗಿ ಅವರನ್ನು ಟೀಕೆ ಮಾಡಿದರೆ ನಾವು ಸಹಿಸುವುದಿಲ್ಲ. ಇನ್ನು ಮುಂದೆ ಯಡಿಯೂರಪ್ಪ ಅವರ ಬಗ್ಗೆ ಮಾತಾಡಿದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು.
ರಮೇಶ್ ಜಾರಕಿಹೊಳಿ ಅವರು ಎರಡು ಪಕ್ಷ ಸುತ್ತಿ ಬಿಜೆಪಿಗೆ ಬಂದಿದ್ದೀರಿ. ಯಡಿಯೂರಪ್ಪ ಬಗ್ಗೆ ಹಗುರವಾಗಿ ಮಾತಾಡಿರುವುದು ನಮಗೆ, ಕಾರ್ಯಕರ್ತರಿಗೆ ನೋವು ತಂದಿದೆ. ನಿಮ್ಮ ಹೋರಾಟ ಕಾಂಗ್ರೆಸ್ ವಿರುದ್ಧ ಇರಬೇಕು, ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಅಲ್ಲ. ನಿಮ್ಮ ಹೇಳಿಕೆ ವಿರುದ್ಧ ಶಿಸ್ತುಕ್ರಮ ಜರುಗಿಸಲು ಹೈಕಮಾಂಡ್‍ಗೂ ತಿಳಿಸುತ್ತೇವೆ. ಮುಂದಿನ ವಾರ ಮತ್ತೊಂದು ಸಭೆ ನಡೆಸಿ ಒಂದು ತೀರ್ಮಾನ ಮಾಡುತ್ತೇವೆ ಎಂದರು.
ರಾಜ್ಯದಲ್ಲಿ ಪಕ್ಷ ಕಟ್ಟಿದ ಮಹಾನ್ ನಾಯಕ ಯಡಿಯೂರಪ್ಪನವರು. ಅಂಬಾಸಿಡರ್ ಕಾರ್, ಕೆಎಸ್ ಆರ್ ಟಿಸಿ ಬಸ್, ಸೈಕಲ್‍ನಲ್ಲಿ ಓಡಾಡಿ ಪಕ್ಷವನ್ನು ಸಂಘಟಿಸಿದ್ದಾರೆ. 46 ನೇ ವಯಸ್ಸಿನಲ್ಲಿ ಯಡಿಯೂರಪ್ಪ ಅಧ್ಯಕ್ಷರಾದವರು. ಒಬ್ಬರೇ ಶಾಸಕರಿದ್ದರೂ ಪಕ್ಷ ಕಟ್ಟಲು ಹೋರಾಟ ನಡೆಸಿದ್ದಾರೆ.ಯಡಿಯೂರಪ್ಪ ಹಾಗೂ ಅನಂತಕುಮಾರ್ ನಡುವೆ ಮನಸ್ತಾಪ ಇದ್ದರೂ ಎಂದಿಗೂ ಬೀದಿಗೆ ತರಲಿಲ್ಲ. ಅದನ್ನ ಪಕ್ಷದೊಳಗೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿದ್ದರು. ಬಿಎಸ್‍ವೈ ಒಬ್ಬ ಪ್ರಶ್ನಾತೀತ ನಾಯಕ. ರಾಜ್ಯದ ಜನ ಬಯಸಿ ಸಿಎಂ ಮಾಡಿದ್ದರು ಎಂದು ತಿಳಿಸಿದರು.
ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದ ಕಾರಣ 66 ಕ್ಕೆ ಶಾಸಕರ ಸಂಖ್ಯೆ ಇಳಿಯಿತು. ಸಂಘಟನಾ ಚಾತುರ್ಯ ಇದೆ ಎಂದು ಯಡಿಯೂರಪ್ಪ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತ. ಕಾಂಗ್ರೆಸ್, ಜೆಡಿಎಸ್ ಶಾಸಕರು ಯಡಿಯೂರಪ್ಪ ಅವರನ್ನು ಬೆಂಬಲಿಸಿ ಬಂದರು.2014ರಲ್ಲಿ ಬಿಜೆಪಿ 40 ಸ್ಥಾನ ಬಂದಿದೆ. 2023 ರಲ್ಲಿ 66 ಸ್ಥಾನ ಪಡೆದಿದೆ. ಎರಡೂ ಬಾರಿ ಯಡಿಯೂರಪ್ಪ ಇಲ್ಲ ಎಂಬ ಕಾರಣಕ್ಕೆ ಸಂಖ್ಯೆ ಇಳಿಕೆಯಾಗಿತ್ತು. ನಾವು , ಕಾಂಗ್ರೆಸ್ ವಿರುದ್ದ ಹೋರಾಟ ಮಾಡಬೇಕಿತ್ತು. ದುರಂತವೆಂದರೆ ಕೆಲವರು ಯಡಿಯೂರಪ್ಪ ವಿರುದ್ದ ಕೆಲವರು ಮಾತಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಸಂಘಪರಿವಾರದ ಅಭಿಪ್ರಾಯದ ಮೇಲೆ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ. ಆದರೆ ಅವರ ಬಗ್ಗೆ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿರುವುದರಿಂದ ಅನಿವಾರ್ಯವಾಗಿ ನಾವು ಮಾತನಾಡುವಂತಾಗಿದೆ.ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು 17 ಜನ ಕರೆ ಮಾಡಿದ್ದರೆಂದು ಹೇಳಿದ್ದಾರೆ. ಅವರು ಯಾರು ಎಂದು ಹೆಸರುಗಳನ್ನು ಬಹಿರಂಗಪಡಿಸಬೇಕಿತ್ತು. ಸೋತವರು ಮತ್ತು ಗೆದ್ದವರ ಸಭೆ ಮಾಡಲು ವಿಜಯೇಂದ್ರ ಅವರಿಗೆ ಹಕ್ಕಿದೆ. ಅಧ್ಯಕ್ಷರು ಸಮರ್ಥರಿದ್ದಾರೆ, ದುರ್ಬಲರಲ್ಲ ಎಂದು ಸಮರ್ಥನೆ ಮಾಡಿಕೊಂಡರು.
ಪಕ್ಷದ ಸಂಘಟಿತ ದೃಷ್ಟಿಯಿಂದ ರಾಜ್ಯಧ್ಯಕ್ಷರು
150 ಕ್ಕೂ ಹೆಚ್ಚು ಮಾಜಿ ಶಾಸಕರ ಜೊತೆಗೆ ಸಭೆ ನಡೆಸಿದ್ದಾರೆ. ಅವರೊಬ್ಬ ರಾಜ್ಯಧ್ಯಕ್ಷರು. ಯಾರ ಜೊತೆಗೆ ಸಭೆ ನಡೆಸಬೇಕು ಎಂಬುದನ್ನು ಅವರೇ ತೀರ್ಮಾನಿಸುತ್ತಾರೆ. ಅದನ್ನು ಪ್ರಶ್ನೆ ಮಾಡಲು
ಇವರ್ಯಾರು ಎಂದು ಪರೋಕ್ಷವಾಗಿ ಯತ್ನಾಳ್ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.
ಪಕ್ಷದ ವರಿಷ್ಡರು ವಿಜಯೇಂದ್ರ ಅವರ ಮೇಲೆ ನಂಬಿಕೆಇಟ್ಡು ರಾಜ್ಯಧ್ಯಕ್ಷ ಸ್ಥಾನವನ್ನು ನೀಡಿದ್ದಾರೆ. ಅದನ್ನು ಪ್ರಶ್ನಿಸಲು ಇವರಾರು? ಯತ್ನಾಳ್ ಹೈ ಕಮಾಂಡ್ ನಿರ್ಧಾರವನ್ನು ಪ್ರಶ್ನೆಸುವ ಮಟ್ಟಕ್ಕೆ ಬೆಳುದು ಬಿಟ್ಟಿದ್ದಾರೆ ಎಂದು ಯತ್ನಳ್ ಹೆಸರು ಉಲ್ಲೇ ಳ
ರಮೇಶ್ ಜಾರಕಿಹೊಳಿ ಮತ್ತು ಬಸನಗೌಡ ಫಾಟೀಲ್ ಯತ್ನ ನನ್ನ ಸ್ನೇಹಿತರು. ಆದರೆ ಅನಗತ್ಯವಾಗಿ ಯಾಕೆ ಯಡಿಯೂರಪ್ಪ ಬಗ್ಗೆ ಟೀಕೆ ಳ್ ಮಾಡುತ್ತಾರೋ ಗೊತ್ತಿಲ್ಲ. ಇದರಿಂದಾಗಿ ಪಕ್ಷ ಮತ್ತು ವರಿಷ್ಠರಿಗೆ ಅಪಮಾನ ಮಾಡುತ್ತಿದ್ದಾರೆ. ಪಕ್ಷದ ನಿಯಮದಂತೆ ವಿಜಯೇಂದ್ರ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ ಎಂದು ಹೇಳಿದರು.
ರಾಜ್ಯದಲ್ಲಿ ಕೆಲವರು ಪಕ್ಷದ ಬಗ್ಗೆ, ಯಡಿಯೂರಪ್ಪ ಬಗ್ಗೆ ಮಾತನಾಡುತ್ತಾರೆ. ಕಾರ್ಯಕರ್ತರು ಇದನ್ಮ ಸಹಿಸಲು ಸಾಧ್ಯವಿಲ್ಲ. ಬೀದರ್ನಿಂದ ಚಾಮರಾಜನಗರದ ವರೆಗೆ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ. ಪಕ್ಷದೊಳಗೆ ಏನೇ ಇದ್ದರು ಚರ್ಚೆ ಮಾಡಲು ಹಲವು ವೇದಿಕೆಗಳಿವೆ. ಯಡಿಯೂರಪ್ಪನವರು ಹಲವು ವರ್ಷಗಳಿಂದ ಪಕ್ಷ ಕಟ್ಟಿದ್ದಾರೆ. ಅವರಿಗೆ ಅವಹೇಳನ ಮಾಡುವುದನ್ನ ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.
ನಿಮಗೆ ತಾಕತ್ ಇದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರನ್ನು ಕೆಳಗಿಳಿಸಿ ನೋಡಿ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸವಾಲ್ ಹಾಕಿದರು.
ಬಿ.ವೈ ವಿಜಯೇಂದ್ರರನ್ನು ಅಧ್ಯಕ್ಷ ಮಾಡಿದ್ದು ಕೇಂದ್ರದ ನಾಯಕರು. ವಿಜಯೇಂದ್ರ ರಾಜ್ಯಾಧ್ಯಕ್ಷ ಆದ ಮೇಲೆ ಬಿಜೆಪಿಗೆ ಹೊಸ ರೂಪ ಬಂದಿದೆ. ವಾಲ್ಮೀಕಿ ಹಗರಣ ಬಯಲಿಗೆ ಎಳಿದಿದ್ದೇ ವಿಜಯೇಂದ್ರ ಸಾರಥ್ಯದಲ್ಲಿ. ಮುಡಾ ಬಗ್ಗೆ ಹೋರಾಟ ಮಾಡಿದ್ರು, ವಕ್ಫ್ ಬಗ್ಗೆ ಹೋರಾಟ ಕ್ಕೆ ಕರೆ ಕೊಟ್ಟಿದ್ದಾರೆ. ಬಿಜೆಪಿ ಸಂಘಟನೆ ಆಗಿಲ್ವಾ? ಎಂದು ಪ್ರಶ್ನಿಸಿದ್ದಾರೆ.
ಯತ್ನಾಳ್ ಬಿಜೆಪಿಯಿಂದ ಉಚ್ಚಾಟನೆ ಆಗಿ JDS ಗೆ ಹೋಗಿದ್ರಿ. ಅಲ್ಲಿ ಟೀಪು ಸುಲ್ತಾನ್ ಡ್ರೆಸ್ ಹಾಕಿ, ಖಡ್ಗ ಹಿಡಿದಿದ್ದು ಮರ್ತಿದಿರಾ?. ಹಿಂದೂ ಹುಲಿ ಅಂತ ಇವರೆ ಲೇಬಲ್ ಹಾಕಿಕೊಂಡಿದ್ದಾರೆ ಅಂತ ಯತ್ನಾಳ್‌ರನ್ನ ರೇಣುಕಾಚಾರ್ಯ ತೀವ್ರ ತರಾಟೆಗೆ ತೆಗೆದುಕೊಂಡರು.
ಯಡಿಯೂರಪ್ಪ ಬಿಜೆಪಿ ಕಟ್ಟಿ, ಹೋರಾಟ ಮಾಡಿ ಪಾರ್ಟಿ ಕಟ್ಟದೆ ಇದ್ರೆ ನೀವು ಇವತ್ತು ಶಾಸಕರಾಗಿ ಇರ್ತಾ ಇರ್ಲಿಲ್ಲ. ಯಡಿಯೂರಪ್ಪ ಕೈ ಕಾಲು ಹಿಡಿದು ಬಿಜೆಪಿಗೆ ಬಂದಿದ್ದು. ನೀವು ಒಬ್ಬರು ಹೇಳಿದ್ರೆ ರಾಜೀನಾಮೆ ಕೋಡಬೇಕಾ. ನಿಮ್ಮನ ಸ್ಟಾರ್ ಮಾಡಿದ್ದೆ ಯಡಿಯೂರಪ್ಪ ಅದನ್ನು ಮರೆತುಬಿಟ್ಟಿರಾ?. ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಬಾರದು ಅಂತ ಈ ರೀತಿ ಮಾತ್ನಾಡ್ತಾರೆ. ಬಿಜೆಪಿ ಗೆದ್ದರೆ ವಿಜಯೇಂದ್ರಗೆ ಹೆಸರು ಬರುತ್ತೆ ಅಂತ ಹೇಳಿ ಕಾಂಗ್ರೆಸ್ ಜತೆ ಶಾಮಿಲಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಯಾವುದೇ ಪಕ್ಷ ನಿಷ್ಠೆ ಇಲ್ಲದವರು ನೀವು, ನೀವು ಐದಾರೂ ಜನ ಸೇರಿ ಸಭೆ ಮಾಡ್ತೀರಿ, ನಾವು ಉಪಚುನಾವಣೆ ಮುಗಿದ ಬಳಿಕ ಮಾಜಿ, ಹಾಲಿ, ಶಾಸಕರು ಸೇರಿ ಸಭೆ ಮಾಡ್ತಿವಿ. ಜಿಲ್ಲಾ ಮಟ್ಟದ ಎಲ್ಲಾ ನಾಯಕರ ಸಭೆ ಮಾಡ್ತಿವಿ ಕೇಂದ್ರ ನಾಯಕರ ಭೇಟಿ ಮಾಡ್ತಿವಿ. ವಿಜಯೇಂದ್ರ, ಯಡಿಯೂರಪ್ಪ ಬಗ್ಗೆ ಮಾತ್ನಾಡಿದ್ರೆ ನಾವು ಮುಂದಿನ ದಿನಗಳಲ್ಲಿ ಉತ್ತರ ಕೊಡ್ತಿವಿ ಎಂದ ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅವರು, ಯಾರೂ ಪತ್ರಿಕಾ ಹೇಳಿಕೆ ಕೊಡಬಾರದು ಎಂದು ಹೇಳಿದ್ದಾರೆ. ಆದಾಗ್ಯೂ ಕೆಲವರು ಮಾತನಾಡುತ್ತಿದ್ದಾರೆ. ಅವರ ಮೇಲೆ ಕ್ರಮ ಆಗಬೇಕು. ಹೈಕಮಾಂಡ್ ನಲ್ಲೂ ಈ ಬಗ್ಗೆ ಮನವಿ ಮಾಡಿz?ದÉ?ವೆ. ಯಾರಿಗೇ ಭಿನ್ನಾಭಿಪ್ರಾಯ ಇದ್ದರೂ ಪಕ್ಷದೊಳಗೆ ಚರ್ಚೆ ಮಾಡಿ. ಪಕ್ಷದ ಕಚೇರಿಗೆ ಬರದೇ ಎಲ್ಲೋ ಕುಳಿತು ಹೇಳಿಕೆ ನೀಡುವುದನ್ನು ಸಹಿಸುವುದಿಲ್ಲ. ಮುಂದೆ ಪತ್ರಿಕಾ ಹೇಳಿಕೆ ಬಂದರೆ ಎಚ್ಚರಿಕೆ ಮಾತನ್ನು ಈಗಲೇ ಕೊಡುತ್ತಿದ್ದೇವೆ ಎಂದು ಹೇಳಿದರು.