world news
ಸಿಡ್ನಿ ಬೀಚ್ ಶೂಟರ್ಸ್ ಹಣ್ಣಿನ ಅಂಗಡಿ ವ್ಯಾಪಾರಿ ಅಪ್ಪ, ನಿರುದ್ಯೋಗಿ ಮಗ!
ಆಸ್ಟ್ರೇಲಿಯಾದ ರಾಜಧಾನಿ ಸಿಡ್ನಿಯ ಬೋಂಡಿ ಕಡಲ ತೀರದಲ್ಲಿ ಯಹೂದಿ ಹನುಕ್ಕಾ ಆಚರಣೆಯ ವೇಳೆ ಯದ್ವಾತದ್ವಾ ಗುಂಡು ಹಾರಿಸಿ 15 ಮಂದಿ ಕೊಲೆಗೈದ ಶೂಟರ್ ಗಳು ತಂದೆ-ಮಗ ಆಗಿದ್ದು, ತಂದೆ ಹಣ್ಣಿನ ಅಂಗಡಿ ವ್ಯಾಪಾರಿ ಆಗಿದ್ದರೆ, ಮಗ ನಿರುದ್ಯೋಗಿ ಎಂಬುದು ತಿಳಿದು ಬಂದಿದೆ. ದಾಳಿಕೋರರು 50 ವರ್ಷದ ಸಾಜಿದ್ ಅಕ್ರಮ್ ಮತ್ತು ಅವರ 24 ವರ್ಷದ ಮಗ ನವೀದ್ ಅಕ್ರಮ್ ಶೂಟರ್ ಗಳಾಗಿದ್ದಾರೆ. ಮೋಜು ಮಾಡಲು ಬಂದಿದ್ದ ಪ್ರವಾಸಿಗರ ಮೇಲೆ ಮೀನು
ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ರಷ್ಯಾ ಸಹಕಾರ: ಪ್ರಧಾನಿ ಮೋದಿ
ನಾಗರಿಕರ ಮೇಲಿನ ಭಯೋತ್ಪಾದನಾ ದಾಳಿ ಮಾನವೀಯತೆಗೆ ವಿರುದ್ಧವಾಗಿದ್ದು, ಜಾಗತಿಕ ಪಿಡುಗು ಆಗಿರುವ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಭಾರತದ ಜೊತೆ ರಷ್ಯಾ ಕೈ ಜೋಡಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
ಇಂದು ಸಂಜೆ ಭಾರತಕ್ಕೆ ಬಂದಿಳಿಯಲಿರುವ ರಷ್ಯಾ ಅಧ್ಯಕ್ಷ ಪುಟಿನ್!
ನವದೆಹಲಿ: ಎರಡು ದಿನಗಳ ಭಾರತ ಪ್ರವಾಸಕ್ಕಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇಂದು ಸಂಜೆ ನವದೆಹಲಿಗೆ ಬಂದಿಳಿಯಲಿದ್ದಾರೆ. ಪುಟಿನ್ ಭಾರತಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಬಹುಸ್ತರದ ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಭದ್ರತೆಯ ದೃಷ್ಟಿಯಿಂದ ಪುಟಿನ್ ಪ್ರವಾಸದ
ರಷ್ಯಾದ ನೌಕಾಪಡೆಯ `ವಿರಾಟ್’ ಮೇಲೆ ದಾಳಿ!
ಇಸ್ತಾನ್‌ಬುಲ್: ರಷ್ಯಾದ ನೌಕಾಪಡೆಯ ನೆರಳಿನಂತೆ ಕಾರ್ಯ ನಿರ್ವಹಿಸುವ ಹಡಗಿನ ಮೇಲೆ ಅಪರಿಚಿತರು ಮಾನವ ರಹಿತ ದೋಣಿ ಬಳಸಿ ಸ್ಫೋಟಗೊಳಿಸಿದ ಘಟನೆ ಟರ್ಕಿಯ ಕಪ್ಪು ಸಮುದ್ರದ ಕರಾವಳಿಯಲ್ಲಿ ನಡೆದಿದೆ. ಶುಕ್ರವಾರ ಮುಂಜಾನೆ ತಡರಾತ್ರಿ ಟರ್ಕಿಯ ಕಪ್ಪು ಸಮುದ್ರ ಕರಾವಳಿಯಲ್ಲಿ ರಷ್ಯಾದ ಹಡಗು ವಿರಾಟ್
ಚಂಡಮಾರುತ ಹೊಡೆತಕ್ಕೆ ಶ್ರೀಲಂಕಾದಲ್ಲಿ 123 ಬಲಿ, 130 ಮಂದಿ ನಾಪತ್ತೆ
ದಿಟ್ವಾ ಚಂಡಮಾರುತದ ಪರಿಣಾಮ ಧಾರಾಕಾರ ಮಳೆ ಮತ್ತು ಪ್ರವಾಹದಿಂದಾಗಿ ಶ್ರೀಲಂಕಾದಲ್ಲಿ ಮೃತಪಟ್ಟವರ ಸಂಖ್ಯೆ 123ಕ್ಕೆ ಏರಿಕೆಯಾಗಿದ್ದು, 130 ಮಂದಿ ಕಾಣೆಯಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ ಶನಿವಾರ ತಿಳಿಸಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಲ್ಲಿ ಮನೆಗಳು ನಾಶವಾದ ನಂತರ
ಡಿಸೆಂಬರ್ 4-5ರಂದು ಭಾರತಕ್ಕೆ ಭೇಟಿ ನೀಡಲಿರುವ ರಷ್ಯಾ ಅಧ್ಯಕ್ಷ ಪುಟಿನ್
ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಡಿಸೆಂಬರ್ 4 ಮತ್ತು5ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಭಾರತ- ರಷ್ಯಾ 23ನೇ ದ್ವಿಪಕ್ಷೀಯ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪುಟಿನ್ ಎರಡು ದಿನಗಳ ಕಾಲ ಭಾರತಕ್ಕೆ ಭೇಟಿ ನೀಡಲಿದ್ದು, ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ
ಶ್ರೀಲಂಕಾದಲ್ಲಿ ಭೀಕರ ಮಳೆ, ಭೂಕುಸಿತಕ್ಕೆ 56 ಮಂದಿ ಬಲಿ
ಶ್ರೀಲಂಕಾದಲ್ಲಿ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದು, ಹಲವೆಡೆ ಪ್ರವಾಹ, ಅಲ್ಲಲ್ಲಿ ಭೂಕುಸಿತಗಳುಂಟಾಗಿ 56 ಮಂದಿ ಮೃತಪಟ್ಟಿದ್ದಾರೆ. ಜನಜೀವನ ದುಸ್ತರವಾಗಿ ಪರಿಣಮಿಸಿದೆ. ನಿರಂತರ ಮಳೆಯಿಂದಾಗಿ ಎಲ್ಲೆಡೆ ನೀರು ಆವರಿಸಿದ್ದು, 600ಕ್ಕೂ ಹೆಚ್ಚು ಮನೆಗಳು ತೀವ್ರ ಹಾನಿಗೊಂಡಿವೆ. ಶುಕ್ರವಾರ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು
ಹಾಂಕಾಂಗ್ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ: 44 ಮಂದಿ ಬಲಿ, 279 ಮಂದಿ ನಾಪತ್ತೆ!
ಹಾಂಕಾಂಗ್ ನ 7 ಅಂತಸ್ತುಗಳ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 44 ಮಂದಿ ಮೃತಪಟ್ಟು 279 ಮಂದಿ ನಾಪತ್ತೆಯಾಗಿರುವ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ. ನ್ಯೂ ಟೆರಿಟರಿಗಳ ಉಪನಗರವಾದ ತೈ ಪೋ ಜಿಲ್ಲೆಯ ವಸತಿ ಸಮುಚ್ಚಯದಲ್ಲಿ ಭಾರತೀಯ ಕಾಲಮಾನ
12,000 ವರ್ಷದ ನಂತರ ಸ್ಫೋಟಿಸಿದ ಇಥಿಯೋಪಿಯಾ ಜ್ವಾಲಾಮುಖಿ: ದೆಹಲಿ ತಲುಪಿದ ಬೂದಿ!
ಇಥಿಯೋಪಿಯಾದಲ್ಲಿ 12,000 ವರ್ಷಗಳ ನಂತರ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಇದರ ಬೂದಿ ಭಾರತ ಪ್ರವೇಶಿಸಿದೆ. ಹೈಲಿ ಗೊಬ್ಬಿ ಜ್ವಾಲಾಮುಖಿ 12 ಸಾವಿರ ವರ್ಷಗಳ ನಂತರ ಸ್ಫೋಟಗೊಂಡಿದ್ದು, ಮತ್ತೊಮ್ಮೆ ಚಟುವಟಿಕೆ ಆರಂಭಗೊಂಡಿದ್ದು, ಭಾರೀ ಪ್ರಮಾಣದ ಬೂದಿ ಹಲವು ದೇಶಗಳಿಗೆ ವ್ಯಾಪಿಸುತ್ತಿದೆ. ಜ್ವಾಲಾಮುಖಿ ಸ್ಫೋಟದಿಂದ ಈ
ಭಾರತ ಸೇರಿ 3 ದೇಶಗಳಲ್ಲಿ ಭೂಕಂಪನ: ಬಾಂಗ್ಲಾದಲ್ಲಿ 6 ಸಾವು
ನವದೆಹಲಿ: ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಭಾರತದ ಕೋಲ್ಕತಾದಲ್ಲಿ ಶುಕ್ರವಾರ ಭೂಕಂಪನ ಸಂಭವಿಸಿದ್ದು, ಬಾಂಗ್ಲಾದಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ಬಾಂಗ್ಲಾದೇಶದ ರಾಜಧಾನಿ ಢಾಕಾದ ನರ್ಸಿಂಗ್ ಗುಡಿಯಿಂದ 14 ಕಿ.ಮೀ. ದೂರದಲ್ಲಿ ಬೆಳಿಗ್ಗೆ 10.08ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದ್ದು,




