Wednesday, August 26, 2026
Menu

ಪುತ್ತೂರಿನ ಯುವಕ ಬೆಂಗಳೂರಲ್ಲಿ ಸಾವು: ಸಿಗರೇಟ್‌, ಪುಡ್‌ ಪಾಯಿಸನ್‌, ಅಸ್ತಮಾ ಕಾರಣವೇ?

ಪುತ್ತೂರಿನ ಯುವಕನೊಬ್ಬ ಕೊಡಗಿನ ಯುವತಿ ಜೊತೆ ಬೆಂಗಳೂರಿನ ಮಡಿವಾಳ ಲಾಡ್ಜ್‌ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ. ಈ ಸಾವಿಗೆ ಫುಡ್ ಪಾಯ್ಸನ್ ಅಥವಾ ಅತಿಯಾದ ಸಿಗರೇಟ್ ಸೇವನೆ ಕಾರಣವೇ ಅಥವಾ ಅವರ ಕುಟುಂಬವನ್ನು ಬಾಧಿಸುತ್ತಿದ್ದ ಅಸ್ತಮಾ ಕಾರಣ ಇರಬಹುದೇ ಎಂಬ ಅನುಮಾನಗಳು ವ್ಯಕ್ತವಾಗಿವೆ. ತಕ್ಷಿತ್ ಮೃತದೇಹ ಪತ್ತೆಯಾದಾಗ ರೂಮ್ ನಲ್ಲಿ ಸಿಗರೇಟ್ ತುಂಡುಗಳು ಪತ್ತೆಯಾಗಿದ್ದವು, ಅತಿಯಾದ ಸಿಗರೇಟ್‌ ಸೇವನೆಯಿಂದ ಸಾವು ಸಂಭವಿಸಿರಬಹುದು, ತಕ್ಷಿತ್ ಕುಟುಂಬದಲ್ಲಿ ಕೆಲವರಿಗೆ ಅಸ್ತಮಾ