Student gives birth
ಶಹಾಪುರ ವಸತಿ ಶಾಲೆ ಶೌಚಾಲಯದಲ್ಲೇ ವಿದ್ಯಾರ್ಥಿನಿ ಹೆರಿಗೆ
ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಸರ್ಕಾರಿ ವಸತಿ ಶಾಲೆಯ ಶೌಚಾಲಯದಲ್ಲೇ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದು, ವ್ಯವಸ್ಥೆಗೆ ಸಂಬಂಧಿಸಿದಂತೆ ವ್ಯಾಪಕ ಆತಂಕಕ್ಕೆ ಕಾರಣವಾಗಿದೆ. ವಿಷಯ ತಿಳಿದು ಆತಂಕಗೊಂಡ ಮಕ್ಕಳ ಪೋಷಕರು ವಸತಿ ಶಾಲೆಯ ಬಳಿ ಸೇರಿದ್ದಾರೆ. ವಿದ್ಯಾರ್ಥಿನಿ ಗರ್ಭಿಣಿ ಎನ್ನುವ ವಿಚಾರವನ್ನು ಹಾಸ್ಟೆಲ್ ಆಡಳಿತ ಮಂಡಳಿ ಮುಚ್ಚಿಟ್ಟಿತೇ, ವಿದ್ಯಾರ್ಥಿನಿ ಹೆರಿಗೆ ಆಗುವವರೆಗೂ ವಾರ್ಡನ್, ಸಿಬ್ಬಂದಿಗೆ ಗೊತ್ತಿರಲಿಲ್ಲವೇ ಎಂಬ ಪ್ರಶ್ನೆಗಳು ವ್ಯಕ್ತವಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ


