stealing money
ಹಣ ಕಳವು ಪ್ರಶ್ನಿಸಿದ್ದಕ್ಕೆ ಬೆಂಕಿ ಹಚ್ಚಿ ತಂದೆಯನ್ನು ಜೀವಂತ ಸುಟ್ಟ ಮಗ
ಫರೀದಾಬಾದ್‌ನ ಅಜಯ್‌ನಗರದಲ್ಲಿ ಕಳ್ಳತನ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಮಗನೊಬ್ಬ ಬೆಂಕಿ ಹಚ್ಚಿ ತಂದೆಯನ್ನೇ ಜೀವಂತ ಸುಟ್ಟು ಹಾಕಿದ್ದಾನೆ. ಮುಹಮ್ಮದ್ ಅಲೀಮ್ ಮಗನಿಂದ ಬೆಂಕಿಗಾಹುತಿಯಾದವರು. ತನ್ನ ಜೇಬಿನಿಂದ ಹಣ ಕದ್ದಿರುವುದಕ್ಕೆ ಗದರಿಸಿದ್ದಕ್ಕಾಗಿ 14 ವರ್ಷದ ಮಗ ತಂದೆಯನ್ನು ಜೀವಂತವಾಗಿ ಸುಟ್ಟು ಹಾಕಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಮನೆಯ ಮಾಲೀಕ ರಿಯಾಝುದ್ದೀನ್ ದೂರು ನೀಡಿದ್ದು, ಬೆಳಗಿನ ಜಾವ 2 ಗಂಟೆಗೆ ಮುಹಮ್ಮದ್ ಅಲೀಮ್ ಅವರ ಕಿರುಚಾಟ ಕೇಳಿ ಇದ್ದಕ್ಕಿದ್ದಂತೆ ಎಚ್ಚರಗೊಂಡಾಗ ಘಟನೆ ಬೆಳಕಿಗೆ ಬಂದಿದೆ ಎಂದು


