Sikh Gurudwara
ಬೆಂಗಳೂರು ಸಿಖ್ ಗುರುದ್ವಾರಕ್ಕೆ ಬಾಂಬ್ ಬೆದರಿಕೆ
ಬೆಂಗಳೂರಿನ ಹಲಸೂರು ಕೆರೆ ಬಳಿ ಇರುವ ಗುರುಸಿಂಗ್ ಸಭಾ ಗುರುದ್ವಾರಕ್ಕೆ ಬಾಂಬ್ ಬೆದರಿಕೆ ಬಂದಿರುವುದಾಗಿ ದೂರು ದಾಖಲಾಗಿದೆ. ಗುರುದ್ವಾರದ ಬಾತ್‌ರೂಂನಲ್ಲಿ ಆರ್‌ಡಿಎಕ್ಸ್ ಇಟ್ಟಿರುವುದಾಗಿ De-Brahminize Dravidistan ಎಂಬ ಸಂಘಟನೆಯಿಂದ ಬೆದರಿಕೆ ಬಂದಿದೆ ಎಂದು ಹೇಳಲಾಗಿದೆ. ಇದು ಬ್ರಾಹ್ಮಣ ವಿರೋಧಿ ಸಂಘಟನ ಎಂದು ಹೇಳಲಾಗುತ್ತಿದೆ. 4 ಆರ್‌ಡಿಎಕ್ಸ್ ಎಲ್‌ಇಡಿಯಿಂದ ಬ್ಲಾಸ್ಟ್ ಮಾಡುವುದಾಗಿ ಹೆದರಿಸಲಾಗಿದೆ ಎಂದು ಋಷಿಪಾಲ್ ಸಿಂಗ್ ದೂರಿನಲ್ಲಿ ತಿಳಿಸಿದ್ದಾರೆ. ಗುರುದ್ವಾರದ ಅಧಿಕೃತ ಮೇಲ್ ಐಡಿಗೆ ರಾಜ ಗಿರಿ ಎಂಬಾತನ ಹೆಸರಿನಲ್ಲಿ


