OM Birla
ಲೋಕಸಭೆಯಲ್ಲಿ ಅಹಿತಕರ ಘಟನೆ ತಡೆಗೆ ಸ್ಪೀಕರ್ ಕಾರ್ಯವೈಖರಿ ಇದೇನಾ?
ನೆಗಡಿ ಬಂದಿದೆ ಎಂದು ಮೂಗು ಕತ್ತರಿಸಿಕೊಳ್ಳಲಾಗದು. ಲೋಕಸಭೆಯ ಪೀಠಾಧ್ಯಕ್ಷರು ಯಾವ ಪಕ್ಷಕ್ಕೂ ಸೇರಿದವರಲ್ಲ . ಈ ಕುರ್ಚಿಯಲ್ಲಿ ಕುಳಿತ ವ್ಯಕ್ತಿಗೆ ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ಸಮಾನವೇ. ಲೋಕ ಸದನವನ್ನು ನಿರ್ವಹಿಸುವ ಸಮಯದಲ್ಲಿ ತಮ್ಮ ಪರಿಧಿಯಲ್ಲಿ ಲಭ್ಯವಿರುವ ಅಧಿಕಾರ ಮತ್ತು ವಿವೇಚನೆಗಳನ್ನು ಬಳಸಲು ಸ್ಪೀಕರ್ ಸರ್ವಸ್ವತಂತ್ರರು. ದೇಶದ ಲೋಕಸಭೆಯಲ್ಲಿ ಪ್ರಧಾನಿ ಭಾಷಣಕ್ಕೆ ಮತ್ತು ರಕ್ಷಣೆಗೆ ಅಪಾಯವಿತ್ತೇ.. ? ಪ್ರಜಾತಂತ್ರದಲ್ಲಿ ಈ ಜನಪ್ರತಿನಿಧಿಗಳ ಸದನವೇ ದೇವಾಲಯ. ಇದರ ಸಾರ್ವಭೌಮತ್ವ ಮತ್ತು ಸಂರಕ್ಷಣೆ


