Menu

ಹಾಸನದಲ್ಲಿ ಮಗನ ಚಿಕಿತ್ಸೆಗೆ ಸಾಲ ಪಡೆದಿದ್ದ ವೃದ್ಧ ದಂಪತಿ: ಮರು ಪಾವತಿಸಿಲ್ಲವೆಂದು ಮನೆ, ಕೊಟ್ಟಿಗೆಗೆ ಬೀಗ ಜಡಿದ ಫೈನಾನ್ಸ್‌

ತೆಗೆದುಕೊಂಡಿರುವ ಸಾಲ ಮರು ಪಾವತಿಸಿಲ್ಲವೆಂದು ಖಾಸಗಿ ಫೈನಾನ್ಸ್‌ ಸಿಬ್ಬಂದಿ ಮನೆಗೆ ಬೀಗ ಜಡಿದು ವೃದ್ಧ ದಂಪತಿಯನ್ನು ಹೊರ ಹಾಕಿರುವ ಘಟನೆಯೊಂದು ಹಾಸನದ ಅರಕಲಗೂಡು ತಾಲೂಕಿನ ಕೊರಟಕೆರೆ ಗ್ರಾಮದಲ್ಲಿ ನಡೆದಿದೆ. ಸಾಲ ಕಟ್ಟಿಲ್ಲ ಎಂದು ಸಣ್ಣಯ್ಯ(80), ಜಯಮ್ಮ(75)ಅವರನ್ನು ಫೈನಾನ್ಸ್​​ ಸಿಬಂದಿ ಹೊರಹಾಕಿದ್ದು, ಅವರಿಬ್ಬರೂ ಕೊರೆಯುವ ಚಳಿಯಲ್ಲೇ ಬೀದಿಯಲ್ಲಿ ವಾಸಮಾಡುವಂತಾಗಿದೆ. ಕೋರ್ಟ್ ಆದೇಶ ಎಂದು ಹೇಳಿ ಮನೆ ಮಾತ್ರವಲ್ಲದೆ ಕೊಟ್ಟಿಗೆಗೂ ಬೀಗ ಜಡಿದಿರುವುದಾಗಿ ಹೇಳಲಾಗಿದೆ. 2023ರಲ್ಲಿ ಮಗನ ಕ್ಯಾನ್ಸರ್ ಚಿಕಿತ್ಸೆಗಾಗಿ ಮನೆ ಅಡ