Menu

ಬೊಲಿವಿಯಾದಿಂದ ನಿತ್ಯಾನಂದ ಭಕ್ತರ ಗಡಿಪಾರು

ಲಾಪಾಜ್: ಸ್ಥಳೀಯ ಸಮುದಾಯಗಳಿಗೆ ಸೇರಿದ ಭೂಮಿಯನ್ನು ವಶಪಡಿಸಿಕೊಳ್ಳಲು ಯತ್ನಿಸಿದ ಆರೋಪದ ಮೇಲೆ ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ಕಾಲ್ಪನಿಕ ದೇಶವಾದ ಕೈಲಾಸದ ಸದಸ್ಯರನ್ನು ಗಡೀಪಾರು ಮಾಡಲಾಗಿದೆ. ಮಾರ್ಚ್ 25ರಂದು ಬೊಲಿವಿಯಾ ಅಧಿಕಾರಿಗಳು ಹೊರಡಿಸಿದ ಹೇಳಿಕೆಯಲ್ಲಿ, ಕೈಲಾಸದೊಂದಿಗೆ ಸಂಬಂಧಿಸಿದ 20 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಅವರ ಮೇಲೆ “ಭೂಕಳ್ಳಸಾಗಣೆ” (ಲ್ಯಾಂಡ್ ಟ್ರಾಫಿಕಿಂಗ್) ಆರೋಪ ಹೊರಿಸಲಾಗಿದ್ದು, ಅವರು ಸ್ಥಳೀಯ ಗುಂಪುಗಳೊಂದಿಗೆ ಅಮೆಜಾನ್ನ ವ್ಯಾಪಕ ಭೂಪ್ರದೇಶಕ್ಕಾಗಿ 1,000 ವರ್ಷಗಳ ಗುತ್ತಿಗೆ ಒಪ್ಪಂದ ಮಾಡಿಕೊಂಡಿದ್ದರು. ಕೈಲಾಸ