Menu

ನೈಜೀರಿಯಾದಲ್ಲಿ ಕಟ್ಟಿ ಹಾಕಿ 162 ಮಂದಿಯ ಬಲಿ ಪಡೆದ ಉಗ್ರರು, ಮನೆಗಳು ಭಸ್ಮ

ಪಶ್ಚಿಮ ನೈಜೀರಿಯಾದ ಎರಡು ಹಳ್ಳಿಗಳಲ್ಲಿ ಇಸ್ಲಾಮಿಕ್ ಉಗ್ರರು ಜನರನ್ನು ಕಟ್ಟಿಹಾಕಿ 162 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಮನೆಗಳನ್ನು ಸುಟ್ಟು ಭಸ್ಮ ಮಾಡಿದ್ದು, ಅಂಗಡಿಗಳನ್ನು ಲೂಟಿ ಮಾಡಿದ್ದಾರೆ. ಕ್ವಾರಾ ರಾಜ್ಯದ ವೊರೊ ಮತ್ತು ನುಕು ಗ್ರಾಮಗಳನ್ನು ಗುರಿಯಾಗಿಸಿಕೊಂಡು ಈ ಭೀಕರ ದಾಳಿಗಳು ನಡೆದಿವೆ. ಇಸ್ಲಾಮಿಕ್ ಸ್ಟೇಟ್ ಗುಂಪಿಗೆ ಸಂಬಂಧಿಸಿದ ಸಶಸ್ತ್ರ ಗುಂಪು ಲಕುರಾವಾ ಈ ದಾಳಿಗಳನ್ನು ನಡೆಸಿದೆ ಎಂದು ಹೇಳಲಾಗಿದ್ದು, ದಾಳಿಯ ಹೊಣೆಯನ್ನು ಇನ್ನೂ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಸ್ಥಳೀಯ ದೂರದರ್ಶನದಲ್ಲಿ