Menu

ಯುದ್ಧ ಶೀಘ್ರ ಕೊನೆ ಎಂದ ಟ್ರಂಪ್‌, ಇರಾನ್‌ ವಿರುದ್ಧ ದಾಳಿ ನಿಲ್ಲಿಸಲ್ಲವೆಂದ ಇಸ್ರೇಲ್‌

ಇರಾನ್ ಜೊತೆಗಿನ ಯುದ್ಧವು ಮುಂದಿನ ಎರಡರಿಂದ ಮೂರು ವಾರಗಳಲ್ಲಿ ಕೊನೆಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳುತ್ತಿದ್ದು, ಅಮೆರಿಕ ಯುದ್ಧ ನಿಲ್ಲಿಸಿದರೂ ನಾವು ಇರಾನ್ ವಿರುದ್ಧದ ದಾಳಿಯನ್ನು ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ. ಟ್ರಂಪ್ ಇರಾನ್ ಜೊತೆಗಿನ ಕದನ ವಿರಾಮದ ಬಗ್ಗೆ ಮಾತನಾಡಿ, ಅಮೆರಿಕ ಸೇನೆಯನ್ನು ಹಿಂತೆಗೆದುಕೊಳ್ಳುವ ಸುಳಿವು ನೀಡಿದ್ದರು. ಇರಾನ್‌ನಲ್ಲಿರುವ ಭಯೋತ್ಪಾದಕ ಆಡಳಿತವನ್ನು ಸಂಪೂರ್ಣವಾಗಿ ಹತ್ತಿಕ್ಕುವವರೆಗೆ ಯುದ್ದ ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಗುಡುಗಿದೆ.