Menu

ನೆಫ್ರೋ ಸಂಸ್ಥೆಗೆ NABH ಮಾನ್ಯತೆ, ಈ ಗರಿಮೆಗೆ ಪಾತ್ರವಾದ ರಾಜ್ಯದ 2ನೇ ಸರ್ಕಾರಿ ಆಸ್ಪತ್ರೆ

ಮೂತ್ರಶಾಸ್ತ್ರ ವಿಭಾಗದಲ್ಲಿ ಅತ್ಯಾಧುನಿಕ ಸೇವೆ ಒದಗಿಸುತ್ತಿರುವ ಸರ್ಕಾರದ ಸೂಪರ್‌ ಸ್ಪೆಷಾಲಿಟಿ ನೆಫ್ರೋ-ಮೂತ್ರ ಶಾಸ್ತ್ರ ಸಂಸ್ಥೆ (INU) ಮತ್ತೊಂದು ಮೈಲುಗಲ್ಲು ದಾಟಿದೆ.  ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ (NABH) ಮಾನ್ಯತೆಯನ್ನು ಪಡೆಯುವ ಮೂಲಕ ನೆಫ್ರೋ ಸಂಸ್ಥೆಯು ವಿಶೇಷ ಸ್ಥಾನ ಪಡೆದುಕೊಂಡಿದೆ. ಕರ್ನಾಟಕದಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಂತರ ಈ ಸ್ಥಾನಮಾನ ಪಡೆದ ಎರಡನೇ ಸಂಸ್ಥೆ ಇದಾಗಿದೆ. ನೆಫ್ರೋ ಸಂಸ್ಥೆಗೆ NABH ಮಾನ್ಯತೆ ಸಿಕ್ಕಿರುವ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆ