Menu

ನೇಪಾಳದಲ್ಲಿ ಮತ್ತೆ ಭುಗಿಲೆದ್ದ ಪ್ರತಿಭಟನೆ: ಭಾರತೀಯ ಮಹಿಳೆ ಸಾವು

ನೇಪಾಳದಲ್ಲಿ ಕೆ.ಪಿ. ಒಲಿ ಶರ್ಮಾ ಸರ್ಕಾರ ಪತನಗೊಂಡ ಬಳಿಕ ಶಾಂತವಾಗಿದ್ದ ಪ್ರತಿಭಟನೆ ಮತ್ತೆ ಭುಗಿಲೆದ್ದಿದೆ. ಹಿಂಸಾಚಾರ ಮತ್ತೆ ತಾರಕಕ್ಕೇರಿದ್ದು, ಉತ್ತರ ಪ್ರದೇಶ ಮೂಲದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ರಾಜೇಶಾ ಗೋಲಾ ಎಂಬ ಮಹಿಳೆ ಪತಿಯ ಜೊತೆ ನೇಪಾಳ ಪ್ರವಾಸಕ್ಕೆ ಹೋಗಿದ್ದರು. ಕಠ್ಮಂಡುವಿನ ಹಯಾತ್ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಗಲಭೆಗಳು ತಗ್ಗಿದ್ದರೂ ಸಾರಿಗೆ ಸೌಕರ್ಯ ಇಲ್ಲದಿದ್ದರಿಂದ ಹೋಟೆಲ್‌ನಲ್ಲಿಯೇ ಉಳಿಯುವಂತಾಗಿತ್ತು. ಮತ್ತೆ ಪ್ರತಿಭಟನೆ  ಆರಂಭಗೊಂಡು ಹಿಂಸಾಚಾರ ಭುಗಿಲೆದ್ದು ಪ್ರತಿಭಟನಾಕಾರರು ಕಠ್ಮಂಡುವಿನ ಅನೇಕ ಕಟ್ಟಡಗಳಿಗೆ ಬೆಂಕಿ