Menu

ಗರ್ಭಿಣಿ ಫೋಟೊ ಶೂಟ್ ವೇಳೆ ಮೊದಲ ಮಗು ನೀರಿಗೆ ಬಿದ್ದು ಸಾವು

ನೆಲಮಂಗಲ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಗಿಡ್ಡೆನಹಳ್ಳಿಯಲ್ಲಿ ಗರ್ಭಿಣಿ ಫೋಟೊ ಶೂಟ್ ವೇಳೆ ಆಟವಾಡುತ್ತಿದ್ದ ಮೂರು ವರ್ಷವಾಗಿದ್ದ ಮೊದಲ ಮಗು ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿದೆ. ಎಂಟು ತಿಂಗಳ ಗರ್ಭಿಣಿಯ ಫೋಟೋ ಶೂಟ್ ಮಾಡಿಸಲು ದಂಪತಿ ತೆರಳಿದ್ದರು. ಈ ವೇಳೆ ಆಟವಾಡುತ್ತಿದ್ದ ಮಗು ನೀರಿನ ತೊಟ್ಟಿಗೆ ಬಿದ್ದು ಅಸು ನೀಗಿದೆ. ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸರ್ಕಾರಿ ಆಸ್ಪತ್ರಗೆ