letter mistake
ಒತ್ತಕ್ಷರದ ಒಂದು ತಪ್ಪು ಹೊಸ ಜಾತಿ ಹುಟ್ಟು ಹಾಕಬಹುದು
ವಾಸ್ತವವಾಗಿ ಜಾತಿ ಗಣತಿಯು ಸಾಮಾಜಿಕ-ರಾಜಕೀಯ ಸಾಧನವಾಗಿದ್ದು ಅದು ಅಧಿಕಾರ ರಚನೆಗಳನ್ನು ಮರುರೂಪಿಸಬಹುದು. ಕಲ್ಯಾಣ ನೀತಿಗಳನ್ನು ಹೊಸದಾಗಿ ನಿರೂಪಿಸಬೇಕಾಗಬಹುದು ಮತ್ತು ಸಮಾಜದೊಳಗಿನ ಅಸಮಾನತೆಗಳನ್ನು ಎತ್ತಿ ತೋರಿಸಬಹುದು. ಭಾರತದಲ್ಲಿ, ಸಂಪನ್ಮೂಲಗಳು, ಅವಕಾಶಗಳು ಮತ್ತು ಆರ್ಥಿಕ ಪ್ರವೇಶವನ್ನು ನಿರ್ಧರಿಸುವಲ್ಲಿ ಜಾತಿಯು ನಿರ್ಣಾಯಕ ಅಂಶವಾಗಿ ಉಳಿದಿದೆ. ಯಾರು ಏನೇ ಹೇಳಿದರೂ ೨೦೧೫ರ ಕರ್ನಾಟಕ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸಾಮಾನ್ಯವಾಗಿ ಜಾತಿ ಗಣತಿ ಎಂದೇ ಕರೆಯಲಾಗು ತ್ತದೆ. ಇದು ರಾಜ್ಯದಾದ್ಯಂತ ಸುಮಾರು ೫.೯೮ ಕೋಟಿ


