labour cars distribution
ಹಿರೇಕೆರೂರಿನಲ್ಲಿ ಮಂಜೂರಾತಿಗೆ ಬಾಕಿ ಇರುವ ಕಾರ್ಮಿಕ ಕಾರ್ಡ್ ವಿಲೇವಾರಿಗೆ ಕ್ರಮ: ಸಚಿವ ಸಂತೋಷ್ ಲಾಡ್
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನಲ್ಲಿ ಮಂಜೂರಾತಿಗೆ ಬಾಕಿ ಇರುವ ಕಾರ್ಮಿಕ ಕಾರ್ಡ್‌ಗಳಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸಂತೋಷ್ ಎಸ್ ಲಾಡ್ ಹೇಳಿದ್ದಾರೆ. ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವಿಧಾನಸಭೆಯ ಕಲಾಪದಲ್ಲಿ ಹಿರೇಕೆರೂರು ಕ್ಷೇತ್ರದ ಶಾಸಕರಾದ ಯು ಬಿ ಬಣಕಾರ್ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಹಿರೇಕೆರೂರು ತಾಲೂಕಿನಲ್ಲಿ ೧೫, ೯೧೦ ಸಕ್ರಿಯ ಕಾರ್ಡ್‌ಗಳು ಇವೆ. ಈಗ ೩, ೧೧೫ ಅರ್ಜಿಗಳು ಬಂದಿವೆ. ಅದರಲ್ಲಿ ೨,೬೨೫ ವಿಲೇವಾರಿ ಮಾಡಲಾಗಿದೆ.


