Kushwaha family deaths
ಬಿಹಾರದಲ್ಲಿ ನಾಳೆ ಮತದಾನ: ಜೆಡಿಯು ನಾಯಕ ಕುಶ್ವಾಹ ಮನೆಯಲ್ಲಿ ಮೂರು ಸಾವು
ಜೆಡಿಯು ನಾಯಕ ನಿರಂಜನ್ ಕುಶ್ವಾಹ ಅವರ ಮನೆಯಲ್ಲಿ ಕುಟುಂಬದ ಮೂವರು ಸದಸ್ಯರು ಶವವಾಗಿ ಪತ್ತೆಯಾಗಿದ್ದಾರೆ, ಬಿಹಾರದಲ್ಲಿ ಮತದಾನಕ್ಕೆ ಒಂದು ದಿನ ಬಾಕಿಯಿರುವಾಗ ಜೆಡಿಯು ನಾಯಕನ ಮನೆಯಲ್ಲಿ ಅನುಮಾನಾಸ್ಪದವಾಗಿ ಮೂವರು ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೃತರನ್ನು ನಿರಂಜನ್ ಅವರ ಹಿರಿಯ ಸಹೋದರ ನವೀನ್ ಕುಶ್ವಾಹ, ಅವರ ಪತ್ನಿ ಕಾಂಚನ್ ಮಾಲಾ ಸಿಂಗ್ ಮತ್ತು ಅವರ ಮಗಳು ತನು ಪ್ರಿಯಾ ಎಂದು ಗುರುತಿಸಲಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹ್ಯಾಟ್ ಪೊಲೀಸ್


