KSDL new products
ಕೆಎಸ್‌ಡಿಎಲ್ 451 ಕೋಟಿ ರೂ. ನಿವ್ವಳ ಲಾಭ, 21 ಹೊಸ ಉತ್ಪನ್ನ ಮಾರುಕಟ್ಟೆಗೆ
ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಸಾರ್ವಜನಿಕ ಉದ್ದಿಮೆ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್), 2024-2025 ನೇ ಆರ್ಥಿಕ ವರ್ಷದಲ್ಲಿ ದಾಖಲೆಯ ಸಾಧನೆ ಮಾಡುವ ಮೂಲಕ ಭಾರಿ ಲಾಭದೊಂದಿಗೆ ಮುನ್ನಡೆಯುತ್ತಿದೆ. 2024- 25ರ ಆರ್ಥಿಕ ವರ್ಷದಲ್ಲಿ 1786 ಕೋಟಿ ರೂ. ವಹಿವಾಟು ಹಾಗೂ 451 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ. ಎರಡು ವರ್ಷಗಳ ಅವಧಿಯಲ್ಲಿ (2022-23 ರ 181 ಕೋಟಿಗೆ ಹೋಲಿಸಿದರೆ) ಸಂಸ್ಥೆಯ ಲಾಭವು ದ್ವಿಗುಣಕ್ಕಿಂತ ಹೆಚ್ಚು ವೃದ್ಧಿಸಿರುವುದು


