Wednesday, August 12, 2026
Menu

ಕೊಳ್ಳೇಗಾಲದಲ್ಲಿ ಹುಲಿ ಮೃತದೇಹ ಪತ್ತೆ

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಗುಂಡಾಲ್‌ ಅಣೆಕಟ್ಟು ಸಮೀಪ ಹುಲಿಯ ಮೃತದದೇಹ ಪತ್ತೆಯಾಗಿದೆ. ಮಲೆ ಮಹದೇಶ್ವರ ಸಂರಕ್ಷಿತ ಅರಣ್ಯದಲ್ಲಿ ಇತ್ತೀಚೆಗೆ ಒಟ್ಟು ಐದು ಹುಲಿಗಳು ಮೃತಪಟ್ಟಿದ್ದವು. ಈಗ ಹುಲಿಯ ಸಾವಿನ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇದು ಹುಲಿಯ ಸಹಜ ಸಾವೇ ಅಥವಾ ಕಿಡಿಗೇಡಿಗಳ ಕೃತ್ಯದಿಂದ ಸಂಭವಿಸಿದ ಸಾವೇ ಎಂಬ ಬಗ್ಗೆ ಸಮಗ್ರ ತಪಾಸಣೆ ನಡೆಯಲಿದೆ. ಬಿಆರ್‌ಟಿ ಹುಲಿ ಅಭಯಾರಣ್ಯದ