Keonics
ಗ್ರಾಮೀಣ ಯುವಕರಿಗೆ ತಂತ್ರಜ್ಞಾನದ ಶಿಕ್ಷಣ ನೀಡಿ ಉದ್ಯೋಗ ಸೃಷ್ಟಿಸಿದ ಕಿಯೋನಿಕ್ಸ್: ಡಿಕೆ ಶಿವಕುಮಾರ್ ಶ್ಲಾಘನೆ
“ತಂತ್ರಜ್ಞಾನದಿಂದಲೇ ಅಭಿವೃದ್ಧಿ, ಸಂಪತ್ತು, ಶಿಕ್ಷಣ ಎನ್ನುವಂತಾಗಿದೆ. ಪ್ರತಿಯೊಂದು ಏಳಿಗೆಯೂ ಸಹ ತಂತ್ರಜ್ಞಾನದ ಮೂಲಕ ನೋಡುವಂತಾಗಿದೆ. ಗ್ರಾಮೀಣ ಭಾಗದ ಯುವಕರಿಗೆ ಹೊಸ ತಂತ್ರಜ್ಞಾನದ ಶಿಕ್ಷಣ ನೀಡಿರುವ ಕಿಯೋನಿಕ್ಸ್ ಉದ್ಯೋಗ ಸೃಷ್ಟಿ ಮಾಡಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಶ್ಲಾಘಿಸಿದರು. ಬೆಂಗಳೂರಿನಲ್ಲಿ ಕಿಯೋನಿಕ್ಸ್ ಸಂಸ್ಥೆಯ ಇ-ಕಾಮರ್ಸ್ ಪೋರ್ಟಲ್ ಅನ್ನು ಡಿಸಿಎಂ ಉದ್ಘಾಟಿಸಿ ಮಾತನಾಡಿದರು. “ನೂತನ ತಂತ್ರಜ್ಞಾನದ ವಿಚಾರದಲ್ಲಿ ಕಿಯೋನಿಕ್ಸ್ ಸಂಸ್ಥೆ ದೇಶಕ್ಕೆ ಮಾದರಿ. ಅನೇಕ ರಾಜ್ಯಗಳಿಗೆ ತನ್ನ ಸೇವೆಯನ್ನು ನೀಡುತ್ತಿದೆ. ಇಂತಹ ಉತ್ತಮವಾದ ಸಂಸ್ಥೆ ಒಂದಷ್ಟು


