Menu

ಕಾರಜೋಳ, ಚರಂತಿಮಠ ಅಕ್ರಮದ ಜೋಡೆತ್ತು: ತಿಮ್ಮಾಪೂರ

ಬಿಜೆಪಿ ಸಂಸದ ಗೋವಿಂದ ಕಾರಜೋಳ ಹಾಗೂ ಅಭ್ಯರ್ಥಿ ವೀರಣ್ಣ ಚರಂತಿಮಠ ಇಬ್ಬರು ಜೋಡೆತ್ತಿನ ರೀತಿ ಅಕ್ರಮ ಕೆಲಸ ಮಾಡುವ ಮೂಲಕ ಬಾಗಲಕೋಟೆ ಅಭಿವೃದ್ಧಿಗೆ ಮಾರಕವಾಗಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಆರೋಪಿಸಿದರು. ಬಾಗಲಕೋಟೆಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2012ರಲ್ಲಿ ಗೋವಿಂದ ಕಾರಜೋಳ ತಮ್ಮ ಮಕ್ಕಳಾದ ಗೋಪಾಲ, ಉಮೇಶ, ಅರುಣ ಕಾರಜೋಳರ ಹೆಸರಲ್ಲಿ ಕಡಿಮೆ ಮೊತ್ತಕ್ಕೆ 30 ಎಕರೆ ಜಮೀನು ಖರೀದಿಸಿ 2013ರಲ್ಲಿ ಜಮೀನು ಸ್ವಾಧೀನ ಪಡಿಸಿಕೊಳ್ಳುವಂತೆ ಬಿಟಿಡಿಎಗೆ