kannada news
ಟಿಟಿಡಿ ಮಾಜಿ ಅಧ್ಯಕ್ಷ, ಎಂಪಿಯಾಗಿದ್ದ ಆದಿಕೇಶವುಲು ನಾಯ್ಡು ಆಪ್ತ ಸಾವು: ಆದಿಕೇಶವುಲು ನಾಯ್ಡು ಮಗಳು, ಮಗನ ಬಂಧನ
ತಿರುಮಲ ತಿರುಪತಿ ದೇವಸ್ಥಾನದ ಮಾಜಿ ಅಧ್ಯಕ್ಷ ಹಾಗೂ ಲೋಕಸಭಾ ಸದಸ್ಯರಾಗಿದ್ದ ದಿ. ಆದಿಕೇಶವುಲು ನಾಯ್ಡು ಅವರ ಆಪ್ತ ಹಾಗೂ ಉದ್ಯಮಿ ರಘುನಾಥ್ ಬೆಂಗಳೂರಿನಲ್ಲಿ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಆದಿಕೇಶವುಲು ಅವರ ಮಗಳು ಕಲ್ಪಜ ಮತ್ತು ಮಗ ಶ್ರೀನಿವಾಸ್ ಅವರನ್ನು ಸಿಬಿಐ ಬಂಧಿಸಿದೆ. ರಿಯಲ್ ಎಸ್ಟೇಟ್ ಉದ್ಯಮಿ ರಘುನಾಥ್ ಅನುಮಾನಾಸ್ಪದ ಸಾವು ಪ್ರಕರಣದ ಆರೋಪಿಗಳಾದ ಕಲ್ಪಜ ಮತ್ತು ಶ್ರೀನಿವಾಸ್ ಅವರನ್ನು 48ನೇ ಎಸಿಜೆಎಂ ನ್ಯಾಯಾಲಯ 7 ದಿನ ಸಿಬಿಐ ಕಸ್ಟಡಿಗೆ ನೀಡಿ
ಚಿನ್ನಕ್ಕಾಗಿ ಅಜ್ಜಿಯ ಕೊಲೆಗೈದ ಮೊಮ್ಮಗ: ಪತ್ತೆ ಹಚ್ಚಿದ ನಾಯಿಗಳು
ಚಿನ್ನಕ್ಕಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗನ ಕ್ರೌರ್ಯವನ್ನು ತನಿಖೆಯಲ್ಲಿ ಭಾಗವಹಿಸಿದ್ದ ಶ್ವಾನದಳದ ನಾಯಿಗಳು ಬಯಲು ಮಾಡಿವೆ. ಆಂಧ್ರದ ವಿಜಯನಗರ ಭೋಗಾಪುರಂ ಮಂಡಲದ ಮುಡಸಲಪೇಟೆ ವಿಮಾನ ನಿಲ್ದಾಣ ಕಾಲೊನಿಯಲ್ಲಿ ನಡೆದ ವೃದ್ಧ ಮಹಿಳೆಯ ಕೊಲೆ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಯಾಗಿರುವ ಮೊಮ್ಮಗನನ್ನು ಬಂಧಿಸಿದ್ದಾರೆ.
ಬಾಗಲೂರಿನಲ್ಲಿ ಕಲ್ಲು ಎತ್ತಿಹಾಕಿ ಪತ್ನಿಯ ಹತ್ಯೆ ಮಾಡಿ ಅಪಘಾತದ ಕಥೆ ಕಟ್ಟಿದ ಪತಿ ಅರೆಸ್ಟ್
ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಿಟ್ಟಗಾನಹಳ್ಳಿ ಬಳಿ ವ್ಯಕ್ತಿಯೊಬ್ಬ ಪತ್ನಿಯನ್ನು ಹತ್ಯೆ ಮಾಡಿ ಅಪಘಾತದಿಂದ ಮೃತಪಟ್ಟಿರುವುದಾಗಿ ಬಿಂಬಿಸಲು ಪ್ರಯತ್ನಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಹತ್ಯೆ ನಡೆಸಿದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಯಲಹಂಕದ ಬೊಮ್ಮಸಂದ್ರದ ನಿವಾಸಿ ಅನಂತ್ (64) ಎಂಬಾತ
ದ್ವೇಷ ಭಾಷಣ ತಡೆ ಕಾಯ್ದೆ ಎಲ್ಲಾ ಪಕ್ಷದವರಿಗೂ ಅನ್ವಯ, ಬಿಜೆಪಿಯವರಿಂದ ಏಕೆ ವಿರೋಧ?
ದ್ವೇಷ ಭಾಷಣ ತಡೆ ಮಸೂದೆಯನ್ನು ಪ್ರಚೋದನಕಾರಿ ಭಾಷಣ ಮಾಡುವವರು ಮಾತ್ರ ವಿರೋಧಿಸುತ್ತಾರೆ. ಈ ಕಾಯ್ದೆ ಎಲ್ಲಾ ಪಕ್ಷದವರಿಗೂ ಅನ್ವಯವಾಗುತ್ತದೆ. ಪ್ರಚೋದನಾಕಾರಿ ಭಾಷಣ ಮಾಡದೆ ಹೋದರೆ ಸುಮ್ಮನೆ ಪ್ರಕರಣ ದಾಖಲಿಸುವುದಿಲ್ಲ . ಬಿಜೆಪಿಯವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ಏಕೆ ನೋಡಿಕೊಳ್ಳುತ್ತಿದ್ದಾರೆ
ಬಿಜೆಪಿ ಶಾಸಕ ಬೈರತಿ ಬಸವರಾಜು ವಿರುದ್ಧ ಲುಕೌಟ್ ನೋಟಿಸ್ ಜಾರಿ
ಬೆಂಗಳೂರು: ರೌಡ ಬಿಕ್ಕು ಶಿವು ಕೊಲೆ ಪ್ರಕರಣದಲ್ಲಿ ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಶಾಸಕ ಬೈರತಿ ಬಸವರಾಜು ಪತ್ತೆಗಾಗಿ ಸಿಐಡಿ ಪೊಲೀಸರು ಲುಕ್‌ಔಟ್ ನೋಟಿಸ್ ಹೊರಡಿಸಲು ಮುಂದಾಗಿದ್ದಾರೆ. ಬೆಳಗಾವಿ ಅಧಿವೇಶನಕ್ಕೆ ಹೋಗಿದ್ದ ಶಾಸಕ ಬೈರತಿ ಬಸವರಾಜು ಅವರು ಅಲ್ಲಿಂದಲೇ ಮಹಾರಾಷ್ಟ್ರ ಅಥವಾ ಗೋವಾಕ್ಕೆ
ಪ್ರಿಯಕರ ಅಪ್ಪನ ಕೊಲೆ ಮಾಡುತ್ತಿದ್ದರೆ ನೋಡುತ್ತಿದ್ದ 17 ವರ್ಷದ ಮಗಳು!
ಪ್ರೀತಿಗೆ ಒಪ್ಪದ ತಂದೆಗೆ ಡ್ರಗ್ಸ್ ನೀಡಿ ಮೈಮೇಲೆ ಎಚ್ಚರ ಇಲ್ಲದಂತೆ ಮಾಡಿದ ಮಗಳು ಪ್ರಿಯಕರ ಕೊಲೆ ಮಾಡಲು ಹೇಳಿ ನೋಡುತ್ತಾ ನಿಂತ ಅಮಾನವೀಯ ಘಟನೆ ಗುಜರಾತ್ ನಲ್ಲಿ ನಡೆದಿದೆ. ಗುಜರಾತ್‌ನ ವಡೋದರಾದ ಪದ್ರಾ ಗ್ರಾಮದಲ್ಲಿ 17ರ ಹುಡುಗಿ ಗೆಳೆಯನ ಜೊತೆ ಸೇರಿ
ದಿನದಲ್ಲಿ ಎರಡು ಗಂಟೆ ಡಿಜಿಟಲ್ ಆಫ್: ಗಮನ ಸೆಳೆದ ಹಲಗಾ ಗ್ರಾಮ
ಮಕ್ಕಳು ಸೇರಿದಂತೆ ಎಲ್ಲರ ಹಿತದೃಷ್ಟಿಯಿಂದ ಬೆಳಗಾವಿ ತಾಲೂಕಿನ ಹಲಗಾ ಗ್ರಾಮಸ್ಥರು ಒಂದು ಕ್ರಾಂತಿಕಾರಿ ಮತ್ತು ಮಾದರಿ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅದೇ ‘ಡಿಜಿಟಲ್ ಆಫ್’ ಪ್ರಯೋಗ. ಎಲ್ಲರೂ ಮೊಬೈಲ್ ಮತ್ತು ಟಿವಿ ಸೇರಿದಂತೆ ಡಿಜಿಟಲ್ ವ್ಯಸನಕ್ಕೆ ಒಳಗಾಗಿದ್ದು, ಮಕ್ಕಳ ಓದಿನ ಮೇಲೆ ಮತ್ತು
ಚಾಮರಾಜನಗರದಲ್ಲಿ ಒಂದೇ ಕಡೆ 5 ಹುಲಿಗಳು ಪತ್ತೆ: ನಿಷೇಧಾಜ್ಞೆ ಜಾರಿ
ಚಾಮರಾಜನಗರದ ನಂಜೇದೇವನಪುರ ಗ್ರಾಮದ ಬಳಿ 5 ಹುಲಿಗಳು ಕಾಣಿಸಿಕೊಂಡಿರುವ ಹಿನ್ನೆಲೆ ಸುರಕ್ಷತಾ ಕ್ರಮವಾಗಿ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಂಜೇದೇವನಪುರ, ವೀರನಪುರ ಹಾಗೂ ಉಡಿಗಾಲ ಗ್ರಾಮದ ಜಮೀನು ಗಳಲ್ಲಿ ಹುಲಿಗಳು ಓಡಾಡುತ್ತಿರುವುದು ಡ್ರೋನ್ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ಸ್ಥಳೀಯರಲ್ಲಿ ಭೀತಿ ಆವರಿಸಿಕೊಂಡಿದೆ. ಹೀಗಾಗಿ ಈ
ಖಜಾನೆ ತುಂಬಿಸಲು ಸರ್ಕಾರದಿಂದ 569 ಮದ್ಯ ಲೈಸೆನ್ಸ್ ಇ- ಹರಾಜು
ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಹಿಳಾ ಆಯೋಗ ಇತ್ತೀಚೆಗೆ ಮನವಿ ಮಾಡಿದೆ, ಇದೀಗ ಸರ್ಕಾರ ರಾಜ್ಯದ 569 ವೈನ್ ಸ್ಟೋರ್ ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳ ಲೈಸೆನ್ಸ್ ಇ-ಹರಾಜಿಗೆ ಮುಂದಾಗಿದೆ. ಮದ್ಯ ಮಾರಾಟ ಇಳಿಕೆಯಾಗಿದ್ದು, ಸಂಪನ್ಮೂಲ ಕ್ರೋಢೀಕರಣಕ್ಕೆ
ಕಿಚ್ಚ ಸುದೀಪ್ ಅಭಿಮಾನಿಗೆ ಎಟಿಎಸ್ ಹೆಸರಲ್ಲಿ ಬೆದರಿಸಿ ಹಣ ದೋಚಿದ ಸೈಬರ್ ವಂಚಕರು
ಸೈಬರ್ ವಂಚಕರು ಕಿಚ್ಚ ಸುದೀಪ್ ಅಭಿಮಾನಿಯೊಬ್ಬರಿಗೆ ATS (ಭಯೋತ್ಪಾದನಾ ನಿಗ್ರಹ ದಳ) ಹೆಸರಿನಲ್ಲಿ ಕರೆ ಮಾಡಿ ಬೆದರಿಕೆ ಹಾಕಿ ಹಣ ದೋಚಿರುವ ಘಟನೆ ಬೆಳಕಿಗೆ ಬಂದಿದೆ. ದೆಹಲಿ ಬಾಂಬ್ ಸ್ಪೋಟದಲ್ಲಿ ನಿಮ್ಮ ಕೈವಾಡ ಇದೆ. ನಿಮ್ಮ ಮೊಬೈಲ್ ನಂಬರ್ ಬಳಕೆಯಾಗಿದೆ ಎಂದು




