kannada news
ಸಂಪುಟ ಪುನಾರಚನೆ ಹೈಕಮಾಂಡ್ ಗೆ ಬಿಟ್ಟಿದ್ದು: ಸಿಎಂ ಸಿದ್ದರಾಮಯ್ಯ
ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಸಂಪುಟ ಪುನರ್ರಚನೆ ನಿರ್ಧಾರವನ್ನು ಹೈಕಮಾಂಡ್ ಕೈಗೊಳ್ಳಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಎನ್.ಆರ್.ಪುರ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ನರಸಿಂಹರಾಜಪುರದಲ್ಲಿ ಸೇತುವೆ ನಿರ್ಮಾಣ ಬಹುದಿನದ ಬೇಡಿಕೆಯಾಗಿತ್ತು. ಈಗ ನನ್ನ ಅವಧಿಯಲ್ಲಿಯೇ ಶಂಕುಸ್ಥಾಪನೆ ಮತ್ತು ಉದ್ಘಾಟನೆಯಾಗುತ್ತಿರುವುದು ಸಂತಸ ತಂದಿದೆ. ಬಿಜೆಪಿಯವರ ಅವಧಿಯಲ್ಲಿ ಸೇತುವೆ ನಿರ್ಮಾಣಕ್ಕೆ ಯಾವುದೇ ಕ್ರಮವಾಗಿರಲಿಲ್ಲ ಎಂದು ಹೇಳಿದರು. ಸಚಿವ ಆಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುತ್ತಿರುವ
ಇಂದು ಸಂಜೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ
ಮುಂಬೈನಲ್ಲಿ ಭಾನುವಾರ ನಿಧನರಾದ ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆ ಸೋಮವಾರ (ಇಂದು) ಸಂಜೆ 4 ಗಂಟೆಗೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನಡೆಯಲಿದೆ. ಇಂದು ಬೆಳಿಗ್ಗೆ 11 ಗಂಟೆಯಿಂದ ಮೂರರವರೆಗೆ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 92
ಸತ್ತವರ ಹೆಸರಲ್ಲಿ ಸರ್ಕಾರದ 4.27 ಕೋಟಿ ರೂಪಾಯಿ ಅಕ್ರಮ: ಮಧುಗಿರಿ ತಾ.ಪಂ ಕ್ಲರ್ಕ್, ಕಾಂಗ್ರೆಸ್ ಮುಖಂಡನ ವಿರುದ್ಧ ಎಫ್‌ಐಆರ್
ನಿವೃತ್ತರಾಗಿರುವ ಮತ್ತು ಮೃತಪಟ್ಟಿರುವ ಸರ್ಕಾರಿ ನೌಕರರ ಹೆಸರಿನಲ್ಲಿ ಮಧುಗಿರಿ ತಾಲೂಕು ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿ ಸೌಮ್ಯ ಕೋಟ್ಯಂತರ ರೂಪಾಯಿ ಅಕ್ರಮ ನಡೆಸಿದ್ದಾರೆ. 4.27 ಕೋಟಿ ರೂಪಾಯಿ ಸರ್ಕಾರಿ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪ ಇದೆ. ಸೌಮ್ಯಾ , ಕಾಂಗ್ರೆಸ್ ಜಿಲ್ಲಾ
ಟ್ರಾಫಿಕ್ ಉಲ್ಲಂಘನೆ: ಲ್ಯಾಂಬೋರ್ಗಿನಿ ಕಾರಿನಲ್ಲಿ ಹೋಗಿ ರಸ್ತೆ ಕಸ ಗುಡಿಸುವ ಶಿಕ್ಷೆ ವಿಧಿಸಿದ ಹೈಕೋರ್ಟ್
ಬೆಂಗಳೂರಿನಲ್ಲಿ ಅತಿವೇಗವಾಗಿ ಲ್ಯಾಂಬೋರ್ಗಿನಿ ಕಾರು ಚಲಾಯಿಸಿ ಸಂಚಾರ ನಿಯಮ ಉಲ್ಲಂಘಿಸಿದ್ದ ವ್ಯಕ್ತಿಗೆ ಹೈಕೋರ್ಟ್ ಲ್ಯಾಂಬೋರ್ಗಿನಿ ಕಾರಿನಲ್ಲಿ ಹೋಗಿ ರಸ್ತೆ ಕಸ ಗುಡಿಸಿ ಅದೇ ಕಾರಲ್ಲಿ ವಾಪಸ್ ಬರುವಂತೆ ಸಮುದಾಯ ಸೇವೆ ಶಿಕ್ಷೆ ವಿಧಿಸಿದೆ. ಮೈಸೂರು ರಸ್ತೆಯಲ್ಲಿ ನಿರ್ಲಕ್ಷ್ಯದಿಂದ ಕಾರು ಓಡಿಸಿದ ಆರೋಪದಡಿ
ಸಂವಿಧಾನದ ಆಶಯ ಜಾರಿಗೆ ಕೆಲಸ ಮಾಡುತ್ತಿದ್ದೀವಾ ಎಂದು ಪತ್ರಕರ್ತರು ಸ್ವಯಂ ಪ್ರಶ್ನಿಸಿಕೊಳ್ಳಿ: ಸಿಎಂ ಸಿದ್ದರಾಮಯ್ಯ
ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಬೀದರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಲವ್, ಸೆಕ್ಸ್, ಮದುವೆ ಹೆಸರಲ್ಲಿ ವಂಚನೆ: ಇಂಜಿನಿಯರ್ ವಿರುದ್ಧ ಶಿಕ್ಷಕಿ ದೂರು
ಲವ್, ಸೆಕ್ಸ್, ಮದುವೆ ಎಂದು ನಂಬಿಸಿ ವಂಚನೆ ಮಾಡಿರುವುದಾಗಿ ಆರೋಪಿಸಿ ಇಂಜಿನಿಯರ್ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ದೇವದುರ್ಗ ಮೂಲದ ಮಲ್ಲಿಕಾರ್ಜುನ್ ಎಂಬವರು ಮದುವೆಯಾಗುತ್ತೇನೆ ಎಂದು ನಂಬಿಸಿ ಬಲವಂತವಾಗಿ ಲೈಂಗಿಕ ಸಂಪರ್ಕ ಮಾಡಿರುವುದಾಗಿ ಅತಿಥಿ ಶಿಕ್ಷಕಿ
ಮದುವೆ ನಿರಾಕರಿಸಿದಾಕೆಗೆ ಹೆಚ್‌ಐವಿ ಪಾಸಿಟಿವ್ ಇಂಜೆಕ್ಟ್, ಯುವತಿ ಸುಸೈಡ್
ಮದುವೆಗೆ ನಿರಾಕರಿಸಿದ್ದ ಯುವತಿಗೆ ವ್ಯಕ್ತಿಯೊಬ್ಬ ಹೆಚ್‌ಐವಿ ಪಾಸಿಟಿವ್ ರಕ್ತ ಇಂಜೆಕ್ಟ್ ಮಾಡಿದ್ದು, ಇದರಿಂದ ಭಯಗೊಂಡ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಆರೋಪಿ ಮನೋಹರ್ ಎಂಬಾತ ಯುವತಿಗೆ ಮನೆಯಲ್ಲಿ ಬಲವಂತವಾಗಿ ತನ್ನ ಹೆಚ್‌ಐವಿ ಸೋಂಕಿತ ರಕ್ತವನ್ನು ಇಂಜೆಕ್ಟ್ ಮಾಡಿ ಪರಾರಿಯಾಗಿದ್ದ.
ವಂಡರ್‌ಲಾ ಮನರಂಜನೆಗೆ ‘ಗರುಡ ಗ್ಲೈಡ್’ ರೈಡ್ ಸೇರ್ಪಡೆ
ರಾಮನಗರದಲ್ಲಿರುವ ಮನರಂಜನೆ ತಾಣ ವಂಡರ್‌ಲಾದಲ್ಲಿ ಹೊಸತಾಗಿ ‘ಗರುಡ ಗ್ಲೈಡ್’ ಅತ್ಯಾಧುನಿಕ ರೋಲರ್ ಕೋಸ್ಟರ್ ಸೇರ್ಪಡೆಯಾಗಿದೆ. ಮಹಿಳಾ ಆರ್‌ಸಿಬಿ ತಂಡ ಶ್ರೇಯಾಂಕ ಪಾಟೀಲ್ ಹಾಗೂ ಖ್ಯಾತ ಯೂಟ್ಯೂಬರ್ ಡಾ.ಬ್ರೋ ಗಗನ್ ಚಾಲನೆ ನೀಡಿದ್ದಾರೆ. ಯುವಜನರು ಮತ್ತು ಮಕ್ಕಳ ನೆಚ್ಚಿನ ಮನರಂಜನಾ ತಾಣವಾದ ವಂಡರ್‌ಲಾ
ಗೃಹಲಕ್ಷ್ಮೀ ಸಹಾಯಧನ ಸಾಲಕ್ಕೆ ಕಡಿತಗೊಳಿಸುವಂತಿಲ್ಲ: ಸಿಎಂ ಸಿದ್ದರಾಮಯ್ಯ
ಮಹಿಳೆಯರ ಬ್ಯಾಂಕ್ ಖಾತೆಗೆ ಜಮೆಯಾಗುವ ಗೃಹಲಕ್ಷ್ಮೀ ಸಹಾಯಧನವನ್ನು ಖಾಸಗಿ ಫೈನಾನ್ಸ್ ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಳೆ ಸಾಲದ ಬಾಕಿ ನೆಪದಲ್ಲಿ ಬಲವಂತವಾಗಿ ಕಡಿತಗೊಳಿಸುತ್ತಿರುವ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಶಾಸಕ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ
ರೀಲ್ಸ್ ಹುಚ್ಚು: ಜಲಪಾತದಲ್ಲಿ ಮುಳುಗಿ ಮೂವರು ಯುವತಿಯರ ಸಾವು
ಆಂಧ್ರಪ್ರದೇಶದಲ್ಲಿ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಮುಲ್ಲುಂಗುಮ್ಮಿ ಜಲಪಾತ ಬಳಿ ರೀಲ್ಸ್ ಮಾಡಲು ಹೋಗಿದ್ದ ಮೂವರು ಯುವತಿಯರು ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ರೀಲ್ಸ್ ಮಾಡುತ್ತಿದ್ದಂತೆಯೇ ಕ್ಯಾಮೆರಾ ಮುಂದೆಯೇ ಮುಳುಗಿ ಮೃತಪಟ್ಟಿದ್ದಾರೆ. 17 ವರ್ಷದ ತ್ರಿಶಾ, 16 ವರ್ಷದ ರತ್ನ ಕುಮಾರಿ, 16




