Menu

ಒಮ್ಮತದಿಂದ ಸ್ವೀಕೃತಗೊಂಡಿದ್ದ ಮಹಿಳಾ ಮೀಸಲು ಮಸೂದೆ ಮರಳಿ ತನ್ನಿ: ಪ್ರಿಯಾಂಕಾ ಗಾಂಧಿ

ಹಿಂದೆ ಎಲ್ಲಾ ರಾಜಕೀಯ ಪಕ್ಷಗಳಿಂದ ಒಮ್ಮತದಿಂದ ಸ್ವೀಕೃತಗೊಂಡಿದ್ದ ಮಹಿಳಾ ಮೀಸಲು ಮಸೂದೆಯನ್ನು ಮರಳಿ ತರುವಂತೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದರು. ಎಲ್ಲಾ ಪಕ್ಷಗಳಿಂದ ಅಂಗೀಕರಿಸಲ್ಪಟ್ಟ ಹಳೆಯ ಮಹಿಳಾ ಮಸೂದೆಯನ್ನು ಸೋಮವಾರವೇ ಕೇಂದ್ರ ಸರ್ಕಾರ ಮಂಡಿಸಬೇಕು. ಸಂಸತ್ ಅಧಿವೇಶನ ನಡೆಸಿ ಹಳೆಯ ಮಸೂದೆಯನ್ನು ತನ್ನಿ, ಯಾರು ಮಹಿಳಾ ವಿರೋಧಿ ಎಂಬುದನ್ನು ನೋಡೋಣ. ನಾವೆಲ್ಲರೂ ಮತ ಚಲಾಯಿಸುತ್ತೇವೆ ಮತ್ತು ನಿಮ್ಮನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು. ಮಹಿಳಾ ಮೀಸಲಾತಿಯ

ನ್ಯಾಯಾಂಗ ಸ್ವಾತಂತ್ರ್ಯವನ್ನು ಸೂಕ್ಷ್ಮ ತಾಂತ್ರಿಕ ಅವಲಂಬನೆಯಿಂದಲೂ ಸಂರಕ್ಷಿಸಬೇಕಿದೆ: ಸಿಎಂ 

ನಮ್ಮ ಪ್ರಜಾಪ್ರಭುತ್ವದ ಮೂಲಾಧಾರವಾಗಿರುವ ನ್ಯಾಯಾಂಗ ಸ್ವಾತಂತ್ರ್ಯವನ್ನು ಬಾಹ್ಯ ಒತ್ತಡಗಳಿಂದ ಮಾತ್ರವಲ್ಲದೆ ಸೂಕ್ಷ್ಮ ತಾಂತ್ರಿಕ ಅವಲಂಬನೆಯಿಂದಲೂ ಸಂರಕ್ಷಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಅಲ್ಗಾರಿದಮಿಕ್ ಪಕ್ಷಪಾತವು ಕಾನೂನಿನ ಮುಂದೆ ಸಮಾನತೆಯ ಖಾತರಿಯನ್ನು ಹಾಳುಮಾಡಬಹುದು. ಅಪಾರದರ್ಶಕ ವ್ಯವಸ್ಥೆಗಳು ನಮ್ಮ ನ್ಯಾಯಾಂಗ ವ್ಯವಸ್ಥೆಯ  ತಾರ್ಕಿಕ ನಿರ್ಧಾರಗಳ ಸಿದ್ಧಾಂತವನ್ನು ದುರ್ಬಲಗೊಳಿಸುವ ಆತಂಕವನ್ನು

ನಾಟಕ ನೋಡುತ್ತಿದ್ದವರ ಮೇಲೆ ಕುಸಿದ ಗೋಡೆ: ಮಕ್ಕಳಿಬ್ಬರ ಸಾವು

ರಾಯಚೂರು ಜಿಲ್ಲೆಯ ಮಾನ್ವಿ ಬೈಲ್ ಮರ್ಚೆಡ್ ಗ್ರಾಮದಲ್ಲಿ ಬಯಲು ನಾಟಕ ನೋಡುತ್ತಿದ್ದವರ ಮೇಲೆ ಕಮಾನು ಗೋಡೆ ಕುಸಿದು ಬಿದ್ದು ಇಬ್ಬರು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಮೃತಪಟ್ಟ ಮಕ್ಕಳನ್ನು ವಿಶ್ವನಾಥ್ (8) ಹಾಗೂ ಸಾನ್ವಿತ (2) ಎಂದು ಗುರುತಿಸಲಾಗಿದೆ. ಏಳು

ಬೆಸ್ಕಾಂ, ಚೆಸ್ಕಾಂ ಗ್ರಾಹಕರಿಗೆ ವಿದ್ಯುತ್‌ ದರ ಏರಿಕೆ

ಬೆಸ್ಕಾಂ ಕಂಪನಿಯ ಗ್ರಾಹಕರಿಗೆ ಪ್ರತಿ ಯುನಿಟ್‌ಗೆ ೫೬ ಪೈಸೆ, ಮೈಸೂರಿನ ಚೆಸ್ಕೋ ಕಂಪನಿ ವ್ಯಾಪ್ತಿಯ ಗ್ರಾಹಕರಿಗೆ ವಿದ್ಯುತ್‌ ದರದಲ್ಲಿ ೧೫ ಪೈಸೆ ಏರಿಕೆ ಮಾಡಲಾಗಿದೆ. ಮಂಗಳೂರು ವ್ಯಾಪ್ತಿಯ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ ೯ ಪೈಸೆ, ಹುಬ್ಬಳ್ಳಿ ಮತ್ತು ಕಲಬುರ್ಗಿಯ ಗ್ರಾಹಕರಿಗೆ ತಲಾ

ಮನೆಗಳಿಗೆ ಕಲುಷಿತ ನೀರು: ಯಡ್ರಾಮಿಯಲ್ಲಿ ಸಾಂಕ್ರಾಮಿಕ ರೋಗ ಭೀತಿ

​ಯಡ್ರಾಮಿ ಪಟ್ಟಣದ 1 ಮತ್ತು 2ನೇ ವಾರ್ಡಿನ ಮನೆಗಳಿಗೆ ಕಲುಷಿತ  ಕಳೆದ ಕೆಲವು ದಿನಗಳಿಂದ ಕಲುಷಿತ ನೀರು ಪೂರೈಕೆಯಾಗುತ್ತಿರುವುದರಿಂದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಡಿಯುವ ನೀರಿನಲ್ಲಿ ಗಲೀಜು ಹಾಗೂ ದುರ್ವಾಸನೆ ನೀರು ಬರುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು  ನಿರ್ಲಕ್ಷ್ಯ ವಹಿಸಿರುವುದಕ್ಕೆ ಸಾರ್ವಜನಿಕರು

ಬೆಂಗಳೂರಿನಲ್ಲಿ ಹೂಡಿಕೆ ಮಾಡಿದವರು ಲಾಭ ಮಾಡಿದ್ದಾರೆ, ನಷ್ಟ ಅನುಭವಿಸಿಲ್ಲ: ಡಿಕೆ ಶಿವಕುಮಾರ್

“ಬೆಂಗಳೂರು ಎಲ್ಲಾ ಕ್ಷೇತ್ರದಲ್ಲಿ ದೇಶದ ಇತರೆ ನಗರಗಳಿಗಿಂತ ಮುಂಚೂಣಿಯಲ್ಲಿದೆ. ನಮ್ಮಲ್ಲಿ ಬಂದು ಹೂಡಿಕೆ ಮಾಡಿದ ಪ್ರತಿಯೊಬ್ಬರೂ ಲಾಭ ಪಡೆದಿದ್ದಾರೆ ಹೊರತು ನಷ್ಟ ಅನುಭವಿಸಿಲ್ಲ. ಈ ಕಾರಣಕ್ಕೆ ಬೆಂಗಳೂರಿಗೆ ಬಂದವರು ಮತ್ತೆ ವಾಪಸ್ ಹೋಗಲು ಬಯಸುವುದಿಲ್ಲ” ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ.

ತಂತ್ರಜ್ಞಾನ ಜೊತೆ ವ್ಯಾಪಾರ, ನಾವೀನ್ಯತೆ, ಜನರ ಸಹಯೋಗ ಹಾಗೂ ವಿಶ್ವ ಪಾಲುದಾರಿಕೆಯತ್ತ ಕರ್ನಾಟಕ ಒಲವು: ಸಿಎಂ ಸಿದ್ದರಾಮಯ್ಯ

ತಂತ್ರಜ್ಞಾನದ ಜೊತೆಗೆ ವ್ಯಾಪಾರ, ನಾವೀನ್ಯತೆ, ಜನರ ಸಹಯೋಗ ಹಾಗೂ ವಿಶ್ವದೊಂದಿಗಿನ ಪಾಲುದಾರಿಕೆಯತ್ತ ಕರ್ನಾಟಕ ಆಸಕ್ತಿ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದ್ದಾರೆ.  ನವದೆಹಲಿಯಲ್ಲಿ ನಡೆದ ಬ್ರಿಡ್ಜ್ ಟು ಬೆಂಗಳೂರು ಕಾರ್ಯಕ್ರಮದಲ್ಲಿ  ವಿವಿಧ ದೇಶಗಳ ರಾಯಭಾರಿಗಳು ಹಾಗೂ ರಾಜತಾಂತ್ರಿಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು

ನೀರು,ಕರೆಂಟ್ ಪೂರೈಕೆಯತ್ತ ಸರ್ಕಾರದ ಗಮನವಿರಲಿ

ರಾಜ್ಯಕ್ಕೆ ಮುಂಗಾರು ಆಗಮನ ಇನ್ನೂ ಬಹಳ ದೂರವಿದೆ. ಅಲ್ಲಿಯವರೆಗೂ ಜನ- ಜಾನುವಾರುವಿಗೆ ಕುಡಿಯುವ ನೀರಿನ ಸಮಸ್ಯೆ ತೊಂದರೆಯಾಗದಂತೆ ಕ್ರಮ ವಹಿಸುವ ಹೊಣೆಗಾರಿಕೆ ಸರ್ಕಾರದ್ದು. ಈ ದಿಶೆಯಲ್ಲಿ ಜನ ಪ್ರತಿನಿಧಿಗಳ ಪಾತ್ರವೂ ಗುರುತರ. ರಾಜ್ಯದಲ್ಲಿ ರಣಬಿಸಿಲು.. ! ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ

ಯೋಗೇಶ್‌ ಗೌಡ ಕೊಲೆ ಪ್ರಕರಣ: ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ, ಶಾಸಕ ಸ್ಥಾನದಿಂದ ವಜಾ

ಬಿಜೆಪಿ ಮುಖಂಡ ಯೋಗೇಶ್‌ ಗೌಡ ಹತ್ಯೆ ಪ್ರಕರಣದ ಆರೋಪಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 17 ಜನರನ್ನು ಅಪರಾಧಿಗಳು ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು ನೀಡಿದ್ದು, ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ನೀಡಿದೆ. ಪ್ರಕರಣದ 19ನೇ ಆರೋಪಿ ಚನ್ನಕೇಶವ

ವಿನಯ್‌ ಕುಲಕರ್ಣಿ ಕೇಸ್‌: ರಾಜಕೀಯದಿಂದಾಗುವ ಕೊಲೆ ಪ್ರಕರಣಗಳಿಗೆ ತಿಲಾಂಜಲಿ ನೀಡಿದ ತೀರ್ಪು ಎಂದ ಆರ್‌ ಅಶೋಕ

ಮಾಜಿ ಸಚಿವ ವಿನಯ್‌ ಕುಲಕರ್ಣಿ ಮಾಡಿಸಿದ ಕೊಲೆ ಪ್ರಕರಣದಲ್ಲಿ, ಇಬ್ಬರು ಸಾಕ್ಷಿ ಹೇಳಿದ್ದಾರೆ. ರಾಜಕಾರಣಿಗಳ ಮಾತು ಕೇಳಿಕೊಂಡು ಕೊಲೆ ಮಾಡಿದರೆ ಏನಾಗುತ್ತದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ. ಸಿಬಿಐ ತನಿಖೆ ನಡೆಯದೇ ಇದ್ದಿದ್ದರೆ ಪೊಲೀಸ್‌ ಇಲಾಖೆ ಕೇಸನ್ನು ಮುಚ್ಚಿಹಾಕುತ್ತಿತ್ತು. ಈಗ ಎಲ್ಲವೂ