jewellery stolen
ಬೆಳಗಾವಿಯಲ್ಲಿ ಅಪಾರ್ಟ್‌ಮೆಂಟ್‌ಗೆ ನುಗ್ಗಿ ಮಹಿಳೆಯ ಕೊಲೆಗೈದು ಚಿನ್ನಾಭರಣ ಕಳವು
ಬೆಳಗಾವಿ ಜಿಲ್ಲೆಯ ಗಣೇಶಪುರದ ಲಕ್ಷ್ಮಿ ನಗರದಲ್ಲಿ ಅಪಾರ್ಟ್‌ಮೆಂಟ್‌ಗೆ ನುಗ್ಗಿ ಮಂಗಳಸೂತ್ರ ಕಿತ್ತುಕೊಂಡು ಕತ್ತು ಹಿಸುಕಿ ಮಹಿಳೆಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಲಕ್ಷ್ಮಿ ನಗರದ ನಿವಾಸಿ ಅಂಜನಾ ಅಜೀತ ದಡ್ಡೀಕರ್(53) ಕೊಲೆಯಾದವರು. ಅಪಾರ್ಟ್ಮೆಂಟ್ ಮನೆಯಲ್ಲಿ ಗಂಡ-ಹೆಂಡತಿ ಮಾತ್ರ ವಾಸವಾಗಿದ್ದರು. ಪತಿ ಅಜಿತ್ ಆಟೋ ಓಡಿಸುತ್ತಾರೆ. ಅವರು ಕೆಲಸ ಮುಗಿಸಿ ಸಂಜೆ ಮನೆಗೆ ಬಂದಾಗ ಪತ್ನಿ ಕೊಲೆಯಾಗಿದ್ದರು. ಪ್ರಜ್ಞೆತಪ್ಪಿ ಬಿದ್ದಿದ್ದ ಅಂಜನಾ ಅವರನ್ನು ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಫಲಕಾರಿಯಾಗಿಲ್ಲ. ಕೊರಳಲ್ಲಿದ್ದ ಮಂಗಳಸೂತ್ರ,


