holiday for employees
ದೀಪಾವಳಿಗೆ 9 ದಿನ ರಜೆ: ಉದ್ಯೋಗಿಗಳ ಹೃದಯ ಗೆದ್ದ ಎಲೈಟ್ ಮಾರ್ಕ್ಯೂ
ನವದೆಹಲಿಯ ಕಂಪೆನಿಯೊಂದು ಒಂಬತ್ತು ದಿನ ದೀಪಾವಳಿ ರಜೆ ನೀಡಿದ್ದು ಉದ್ಯೋಗಿಗಳ ಹೃದಯವನ್ನು ಗೆದ್ದುಕೊಂಡಿದೆ. ಉದ್ಯೋಗಿ ಸ್ನೇಹಿ ಎಲೈಟ್ ಮಾರ್ಕ್ಯೂ ಕಂಪೆನಿ ಈ ಘೋಷಣೆ ಮಾಡಿದೆ. ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಆರಂಭಗೊಂಡಿದ್ದು, ಕೆಲವು ಕಂಪೆನಿಗಳು ತಿಂಗಳ ಸಂಬಳದ ಮೊತ್ತವನ್ನು ಬೋನಸ್ ಆಗಿ ಉದ್ಯೋಗಿಗಳಿಗೆ ನೀಡುತ್ತಿವೆ. ಮತ್ತೆ ಕೆಲವು ಕಂಪೆನಿಗಳು ಸ್ವೀಟ್ ಮತ್ತು ಪಟಾಕಿ ಬಾಕ್ಸ್‌ಗಳನ್ನು, ದೀಪಗಳನ್ನು ಉಡುಗೊರೆ ನೀಡುತ್ತಿವೆ. ಬೆಋಳೆಣಿಕೆಯ ಕಂಪೆನಿಗಳು ಉದ್ಯೋಗಿಗಳಿಗೆ ಬೃಹತ್ ದೀಪಾವಳಿ ಉಡುಗೊರೆಗಳನ್ನೂ ನೀಡುವುದೂ ಇದೆ.


