Menu

ಶೇಖ್ ಹಸೀನಾಗೆ ರೆಡ್ ನೋಟಿಸ್‌ ನೀಡುವಂತೆ ಬಾಂಗ್ಲಾ ಸರ್ಕಾರ ಮನವಿ

ಬಾಂಗ್ಲಾದೇಶದಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದಿದ್ದ ಅಲ್ಲಿನ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ರೆಡ್ ನೋಟೀಸ್ ನೀಡುವಂತೆ ಇಂಟರ್​​ಪೋಲ್​​ಗೆ ಮನವಿ ಮಾಡಲಾಗಿದೆ. ಬಾಂಗ್ಲಾದೇಶ ಪೊಲೀಸ್​​ನ ನ್ಯಾಷನಲ್ ಸೆಂಟ್ರಲ್ ಬ್ಯೂರೋ ಈ ಮನವಿ ಸಲ್ಲಿಸಿದೆ ಎಂದು ಬಾಂಗ್ಲಾದೇಶದ ದಿ ಡೈಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ. ಹಸೀನಾ ಬಾಂಗ್ಲಾದಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದಾಗಿನಿಂದ ಅಲ್ಲಿನ ಹಂಗಾಮಿ ಸರ್ಕಾರವು ಮಾಜಿ ಪ್ರಧಾನಿಯನ್ನು ವಶಕ್ಕೆ ಒಪ್ಪಿಸುವಂತೆ ಭಾರತದ ಮೇಲೆ ಒತ್ತಡ ಹೇರುತ್ತಿದೆ. ಬಾಂಗ್ಲಾದಲ್ಲಿ ಹಸೀನಾ