Afghan
ಬಗರಮ್ ವಾಯು ನೆಲೆಯ ಒಂದಿಂಚೂ ಕೊಡಲ್ಲ: ಟ್ರಂಪ್‌ಗೆ ಆಫ್ಘನ್ ಸವಾಲು
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಸಮೀಪವಿರುವ ಬಗರಮ್ ವಾಯು ನೆಲೆಯನ್ನು ಅಮೆರಿಕ ವಶಕ್ಕೆ ಮತ್ತೆ ಒಪ್ಪಿಸಬೇಕು ಎಂದು ಡೊನಾಲ್ಡ್ ಟ್ರಂಪ್ ಆಗ್ರಹಿಸುತ್ತಿದ್ದು, ತಾಲಿಬಾನ್ ಅದನ್ನು ತಿರಸ್ಕರಿಸಿದೆ. ವಾಯುನೆಲೆಯನ್ನು ಅಮೆರಿಕಕ್ಕೆ ಒಪ್ಪಿಸುವುದು ಇರಲಿ, ಒಂದು ಮೀಟರ್ ಜಾಗವನ್ನೂ ಬಿಟ್ಟುಕೊಡುವುದಿಲ್ಲ ಎಂದು ಅಲ್ಲಿನ ತಾಲಿಬಾನ್ ಸರ್ಕಾರ ಸ್ಪಷ್ಟಪಡಿಸಿದೆ. ದೋಹಾ ಒಪ್ಪಂದದಡಿ ಅಮೆರಿಕವು ಅಫ್ಘಾನಿಸ್ತಾನದ ಸಾರ್ವಭೌಮತ್ವಕ್ಕಾಗಲೀ ರಾಜಕೀಯ ಸ್ವಾತಂತ್ರ್ಯಕ್ಕಾಗಲೀ ಧಕ್ಕೆಯಾಗುವ ರೀತಿಯಲ್ಲಿ ಬಲ ಪ್ರಯೋಗ ಮಾಡುವಂತಿಲ್ಲ. ಅಫ್ಘಾನಿಸ್ತಾನದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಅಮೆರಿಕ ಕೊಟ್ಟ ಮಾತಿಗೆ


