Actor Dolly Dhananjay
ನಟ ಡಾಲಿಗಾಗಿ ಮುಗಿ ಬಿದ್ದ ಅಭಿಮಾನಿಗಳಿಗೆ ಲಾಠಿ ರುಚಿ
ಚಿತ್ರದುರ್ಗ ತಾಲೂಕಿನ ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಭಾಗವಹಿಸಲು ನಟ ಡಾಲಿ ಧನಂಜಯ ಆಗಮಿಸಿದ್ದರು. ಈ ವೇಳೆ ಧನಂಜಯ ಅವರನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದಾರೆ. ಡಾಲಿ ಜೊತೆ ಸೆಲ್ಫಿ ಬೇಕು ಎಂದು ಫ್ಯಾನ್ಸ್ ಮುಗಿ ಬಿದ್ದಿದ್ದಾರೆ, ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿ ಜನ ದಟ್ಟಣೆ ನಿಯಂತ್ರಿಸುವ ಪ್ರಯತ್ನ ಮಾಡಿದ್ದಾರೆ. ಭರಮಸಾಗರದಲ್ಲಿ ಫೆ. 4ರಿಂದ ಆರಂಭಗೊಂಡಿದ್ದು, 12ರವರೆಗೆ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಯಲಿದೆ. ಪ್ರತಿ ವರ್ಷದಂತೆ ಈ ವರ್ಷವೂ