Menu

ಗಂಗಾವತಿಯಲ್ಲಿ ಪ್ರೀ ವೆಡ್ಡಿಂಗ್ ಫೋಟೊಶೂಟ್‌ ಮುಗಿಸಿ ವಾಪಸಾಗುತ್ತಿದ್ದ ಜೋಡಿ ಅಪಘಾತಕ್ಕೆ ಬಲಿ

ಮದುವೆಗೆ ಎರಡು ವಾರವಿದ್ದು, ಸಿದ್ಧತೆಯಲ್ಲಿದ್ದ ಜೋಡಿ, ಸಂಭ್ರಮದಿಂದ ಪ್ರೀ ವೆಡ್ಡಿಂಗ್ ಫೋಟೊಶೂಟ್‌ ಮಾಡಿಸಿಕೊಂಡು ಮನೆಗೆ ವಾಪಸ್ ಆಗುವಾಗ ರಸ್ತೆ ಅಪಘಾತ ಸಂಭವಿಸಿ ಮೃತಪಟ್ಟಿರುವ ಘಟನೆ ಕೊಪ್ಪಳದ ಗಂಗಾವತಿ ಬಳಿ ನಡೆದಿದೆ. ಬೈಕ್​ಗೆ ಲಾರಿ ಡಿಕ್ಕಿಯಾಗಿ ಈ ದುರಂತ ಸಂಭವಿಸಿದ್ದು, ಕರಿಯಪ್ಪ‌ ಮಡಿವಾಳ (26) ಹಾಗೂ ಕವಿತಾ ಪವಾಡೆಪ್ಪ ಮಡಿವಾಳ (19) ಮೃತಪಟ್ಟ ಜೋಡಿ. ಕವಿತಾ ಹಾಗೂ ಕರಿಯಪ್ಪಗೆ ವಿವಾಹ ನಿಶ್ಚಯವಾಗಿದ್ದು, ಡಿಸೆಂಬರ್‌ 21ಕ್ಕೆ ಮದುವೆ ನಿಗದಿಯಾಗಿತ್ತು. ಹೀಗಾಗಿ ಪ್ರೀ ವೆಡ್ಡಿಂಗ್

ಬೆಳ್ತಂಗಡಿಯಲ್ಲಿ ಸ್ಕೂಟಿಗೆ ಕಾರು ಡಿಕ್ಕಿ: ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಸಾವು

ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಬಳಿ ಕಾರು ಹಾಗೂ ಸ್ಕೂಟಿ ಮಧ್ಯೆ ನಡೆದ ಅಪಘಾತವೊಂದರಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ. ಅಂತಿಮ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದ 21 ವರ್ಷದ ಅನನ್ಯಾ ಮೃತಪಟ್ಟ ವಿದ್ಯಾರ್ಥಿನಿ. ಈಕೆ ಕಡಬದ ಸುನೀಲ್ ಎಂಬವರ ಪುತ್ರಿ. ಸ್ಕೂಟಿಯಲ್ಲಿದ್ದ ಮತ್ತೊಬ್ಬ ವಿದ್ಯಾರ್ಥಿನಿ

ಗಣಿ ಅಧಿಕಾರಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಾರಿಗೆ ಸಿಲುಕಿ ಟಿಪ್ಪರ್‌ ಚಾಲಕ ಸಾವು

ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಕ್ರಾಸ್‌ನ ಕೃಷ್ಣ ಕನ್ವೆನ್ಷನ್‌ ಸೆಂಟರ್ ಬಳಿ ಗಣಿ ಅಧಿಕಾರಿಗೆ ಹೆದರಿ ಓಡಿ ಹೋಗುವಾಗ ಕಾರಿಗೆ ಅಡ್ಡ ಸಿಕ್ಕಿ ಟಿಪ್ಪರ್‌ ಚಾಲಕ ಮೃತಪಟ್ಟಿರುವ ಘಟನೆಯೊಂದು ನಡೆದಿದೆ. ರಾಯಚೂರು ಲಿಂಗಸೂರಿನ ರಮೇಶ್ (35) ಮೃತಪಟ್ಟಿರುವ ಚಾಲಕ. ಟಿಪ್ಪರ್ ಲಾರಿ ಚೇಸ್

ಬೆಂಗಳೂರಿನಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಮಗು ತಂದೆಯ ಕಾರಿಗೆ ಸಿಲುಕಿ ಸಾವು

ಬೆಂಗಳೂರಿನ ತೋಟದಗುಡ್ಡದಹಳ್ಳಿ ಬೆನಕ ಲೇಔಟ್‌ನಲ್ಲಿ ತಂದೆಯ ಕಾರಿಗೆ ಸಿಲುಕಿ ಮಗು ಸ್ಥಳದಲ್ಲೇ ಮೃತಪಟ್ಟ ಗೃದಯವಿದ್ರಾವಕ ಘಟನೆಯೊಂದು ನಡೆದಿದೆ.  ದೇವಿಕಾ ಹಾಗೂ ಮುನೇಶ್ ದಂಪತಿಯ ಒಂದು ವರ್ಷ ಹತ್ತು ತಿಂಗಳ ನೂತನ್ ಕಾರಿನಡಿ ಸಿಲುಕಿ ಅಸು ನೀಗಿದ ಮಗು. ಮಳವಳ್ಳಿ ತಾಲೂಕಿನ ಬೂವಿನದೊಡ್ಡಿಯ

ಸ್ನೇಹಿತ, ಸಾರ್ವಜನಿಕರ ನಿರ್ಲಕ್ಷ್ಯ: ಬೆಂಗಳೂರಿನಲ್ಲಿ ಆಕ್ಸಿಡೆಂಟ್‌ ಆಗಿ ರಾತ್ರಿಯಿಡಿ ಒದ್ದಾಡಿ ಪ್ರಾಣ ಬಿಟ್ಟ ವ್ಯಕ್ತಿ

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆತನ ಸ್ನೇಹಿತ ಅಲ್ಲೇ ಬಿಟ್ಟು ಪರಾರಿಯಾಗಿದ್ದು, ಸಾರ್ವಜನಿಕರು ಕೂಡ ನೆರವಿಗೆ ಧಾವಿಸದೆ ಬಿಟ್ಟ ಪರಿಣಾಮ ಆತ ರಾತ್ರಿಯಿಡೀ ಒದ್ದಾಡಿ ಪ್ರಾಣ ಬಿಟ್ಟಿರುವ ಹೃದಯ ವಿದ್ರಾವಕ ಘಟನೆಯೊಂದು ಮೈಕೋ ಲೇಔಟ್ ಸಂಚಾರಿ ಠಾಣೆ ವ್ಯಾಪ್ತಿಯ KMF ಕಚೇರಿ

ವಿದ್ಯುತ್‌ ಕಂಬಕ್ಕೆ ಲಾರಿ ಗುದ್ದಿ ಗೋಡೆ ಬಿದ್ದು ಮಗು ಸಾವು

ಬೆಂಗಳೂರಿನ ಎಚ್‌ಎಎಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಕುಂದಲಹಳ್ಳಿ ಕಾಲೊನಿಯಲ್ಲಿ ಕಾಂಕ್ರೀಟ್ ಮಿಕ್ಸರ್ ಲಾರಿ ವಿದ್ಯುತ್‌ ಕಂಬಕ್ಕೆ ತಗುಲಿ ಗೋಡೆ ಬಿದ್ದು ಪರಿಣಾಮ ಮಗುವೊಂದು ಮೃತಪಟ್ಟಿದೆ. ಸಿದ್ದಪ್ಪ ಹಾಗೂ ಲಾವಣ್ಯ ದಂಪತಿಯ ಪುತ್ರ ಪ್ರಣವ್ (1.8) ಮೃತಪಟ್ಟ ಮಗು. ಲಾರಿ ಚಾಲಕನ ನಿರ್ಲಕ್ಷ್ಯದಿಂದ

ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದು ಡ್ಯಾನ್ಸರ್ ಸುಧೀಂದ್ರ ಸಾವು

ನೆಲಮಂಗಲ ತಾಲೂಕಿನ ಪೆಮ್ಮನಹಳ್ಳಿ ಬಳಿ ಕೆಟ್ಟು ನಿಂತಿದ್ದ ಕಾರನ್ನು ಪರಿಶೀಲಿಸುತ್ತಿದ್ದಾಗ ವೇಗವಾಗಿ ಬಂದ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದು ಡ್ಯಾನ್ಸರ್ ಸುಧೀಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕ್ಯಾಂಟರ್ ಚಾಲಕ ಸ್ಥಳದಲ್ಲೇ ವಾಹನ ನಿಲ್ಲಿಸಿ ಪರಾರಿಯಾಗಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಅಪಘಾತದ ಒಂದು ದಿನ

ಚನ್ನಪಟ್ಟಣದಲ್ಲಿ ನೀರಿನ ಟಬ್‌ಗೆ ಬಿದ್ದು ಮಗು ಸಾವು

ಚನ್ನಪಟ್ಟಣ ನಗರದ ಜೀವನ್ ಪುರ ನಗರದಲ್ಲಿ ನೀರಿನ ಟಬ್​ ಒಳಗೆ ಬಿದ್ದು 11 ತಿಂಗಳ ಮಗು ಮೃತಪಟ್ಟಿದೆ. ಶಂಷಾದ್ ಪಠಾಣ್ ಮತ್ತು ಮುಸ್ಕಾನ್ ದಂಪತಿಯ ಪುತ್ರಿ ಖುಷಿ ಮೃತ ಪಟ್ಟ ದುರ್ದೈವಿ. ಮಗು ಆಟವಾಡುವ ವೇಳೆ ಆಯತಪ್ಪಿ ನೀರಿಗೆ ಬಿದ್ದು ಅಸು

ಶಿಕಾರಿಪುರದಲ್ಲಿ ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದ ಜೋಡಿ ಅಪಘಾತಕ್ಕೆ ಬಲಿ

ಶಿಕಾರಿಪುರ ತಾಲೂಕಿನ ಅಂಬಾರಕೊಪ್ಪ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಕಳೆದ ತಿಂಗಳು ನಿಶ್ಚಿತಾರ್ಥ ಆಗಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದ ಜೋಡಿ ಮೃತಪಟ್ಟಿದೆ. ಬೈಕ್​​ನಲ್ಲಿ ತೆರಳುತ್ತಿರುವಾಗ ಅಪಘಾತ ಸಂಭವಿಸಿದ್ದು, ಬಸವನಗೌಡ (24) ಹಾಗೂ ರೇಖಾ (22) ಮೃತಪಟ್ಟವರು. ಈ ಜೋಡಿಗೆ ಶ್ರಾವಣ ಮಾಸದಲ್ಲಿ ನಿಶ್ಚಿತಾರ್ಥವಾಗಿತ್ತು.