Menu

ಮುಳಬಾಗಿಲಿನಲ್ಲಿ ಮನೆ ಕುಸಿದು ಬಾಲಕಿ ಸಾವು

ಹಳೆಯ ಮನೆ ಕುಸಿದು ಬಿದ್ದು ಬಾಲಕಿ ಮೃತಪಟ್ಟಿರುವ ಘಟನೆ ಕೋಲಾರದ ಮುಳಬಾಗಿಲು ನಗರದಲ್ಲಿ ನಡೆದಿದೆ. ಈ ದುರಂತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ಬಾಲಕಿಯನ್ನು ವಹಿನೂರ್ (15) ಎಂದು ಗುರುತಿಸಲಾಗಿದೆ. ಸುಹೇಲ್, ಕೌಸರ್, ಅಯಾಜ್ ಮತ್ತು ಅಬ್ಜರ್ ಗಾಯಗೊಂಡವರು. ಗಾಯಾಳುಗಳನ್ನು ಕೋಲಾರದ ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ, ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗ್ಯಾಸ್‌ ಸಿಲಿಂಡರ್‌ ಸ್ಫೋಟಕ್ಕೆ ಅಣ್ಣ ತಂಗಿ ಬಲಿ ವಾರಾಣಸಿಯ

ಅರಸೀಕೆರೆಯಲ್ಲಿ ಜೂಜು ಅಡ್ಡೆಗೆ ಪೊಲೀಸ್‌ ದಾಳಿ: ತಪ್ಪಿಸಿಕೊಳ್ಳುವಾಗ ಬಿದ್ದು ವ್ಯಕ್ತಿ ಸಾವು

ಹಾಸನದ ಅರಸೀಕೆರೆಯ ಅರೆಕೆರೆ ಗ್ರಾಮದಲ್ಲಿ ಜೂಜು ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, ತಪ್ಪಿಸಿಕೊಂಡು ಓಡುವ ವೇಳೆ ಆಯತಪ್ಪಿ ಬಿದ್ದು ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ. ಪ್ರವೀಣ್ (34) ಮೃತಪಟ್ಟ ವ್ಯಕ್ತಿ. ಯುಗಾದಿ ಹಬ್ಬದ ಸಂಭ್ರಮದಲ್ಲಿ ತಾವರೆಹಳ್ಳಿ ನಿರ್ಜನ ಪ್ರದೇಶದಲ್ಲಿ ಯುವಕರ

ಆಟವಾಡುತ್ತಿದ್ದ ಮಗು ಸಂಪ್‌ಗೆ ಬಿದ್ದು ಸಾವು

ಬೆಂಗಳೂರು ಉತ್ತರ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ನೀರಿನ ಸಂಪ್‌ಗೆ ಬಿದ್ದು ಎರಡೂವರೆ ವರ್ಷದ ಮಗು ಮೃತಪಟ್ಟಿದೆ. ಬ್ಯಾಡರಹಳ್ಳಿಯ ಅಣ್ಣಯ್ಯ ಹಾಗೂ ಋತು ದಂಪತಿಯ ಮಗ ಚಿರಾಗ್‌ ಮೃತಪಟ್ಟ ಮಗು. ದಂಪತಿ ಸಂಬಂಧಿಕರ ಮದುವೆಗೆ ತೆರಳಲು ರೆಡಿಯಾಗುತ್ತಿದ್ದರು. ಕಾರು ತೊಳೆಯಲು ಸಂಪ್‌ ಕ್ಯಾಪ್‌ ತೆರೆದು

ಕೊರಟಗರೆಯಲ್ಲಿ ರಸ್ತೆ ದಾಟುತ್ತಿದ್ದ ಕೋತಿಯ ರಕ್ಷಿಸಿ ಪ್ರಾಣ ಕಳೆದುಕೊಂಡ ಆಟೊ ಚಾಲಕ

ತುಮಕೂರಿನ ಕೊರಟಗೆರೆಯ ಜಂಪೇನಹಳ್ಳಿ ಬಳಿ ರಸ್ತೆ ದಾಟುತ್ತಿದ್ದ ಕೋತಿಯ ರಕ್ಷಿಸಲು ಮುಂದಾಗಿ ಆಟೊ ಚಾಲಕರೊಬ್ಬರು ಮೃತಪಟ್ಟಿದ್ದಾರೆ. ಸೋಂಪುರ‌ ನಿವಾಸಿ‌ ಮಹೇಂದ್ರಕುಮಾರ್ ಮೃತಪಟ್ಟ ಚಾಲಕ. ಕೊರಟಗೆರೆಯಿಂದ ತುಮಕೂರು ಕಡೆಗೆ ಆಟೊ‌ ಹೋಗುತ್ತಿದ್ದಾಗ ಜಂಪೇನಹಳ್ಳಿ‌ ಬಳಿ ಕೋತಿಯೊಂದು ಅಡ್ಡ ಬಂದಿದೆ. ರಸ್ತೆ ದಾಟುತ್ತಿದ್ದ ಕೋತಿಯನ್ನು

ಹೆಲ್ಮೆಟ್‌ ಧರಿಸದೆ ಗೆಳತಿಯರ ಬುಲೆಟ್‌ ಜಾಲಿ ರೈಡ್‌: ಹಂಪ್ಸ್‌ನಲ್ಲಿ ಬಿದ್ದು ಒಬ್ಬಾಕೆ ಸಾವು

ಹಾಸನ ನಗರ ಕೈಗಾರಿಕಾ ಪ್ರದೇಶದಲ್ಲಿ ಯುವತಿಯರಿಬ್ಬರು ಹೆಲ್ಮೆಟ್‌ ಧರಿಸದೆ ಬುಲೆಟ್‌ ಬೈಕ್‌ನಲ್ಲಿ ಜಾಲಿ ರೈಡ್‌ ಮಾಡುತ್ತಿದ್ದಾಗ ಹಂಪ್ಸ್‌ನಲ್ಲಿ ಹಾರಿ ಬಿದ್ದು ಒಬ್ಬಾಕೆ ಮೃತಟ್ಟಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಬುಲೆಟ್ ಬೈಕ್ ಚಲಾಯಿಸುವಾಗ ಹಂಪ್ಸ್ ಕಾಣದೆ ಯುವತಿಯವರು ರಸ್ತೆಗೆ ಹಾರಿ ಬಿದ್ದಿದ್ದಾರೆ. ಸತ್ಯಮಂಗಲ

ಹುಟ್ಟುಹಬ್ಬದ ಖುಷಿಯಲ್ಲಿದ್ದ ಯುವಕ ಬೆಂಗಳೂರಿನಲ್ಲಿ ಅಪಘಾತಕ್ಕೆ ಬಲಿ

ಬೆಂಗಳೂರಿನಲ್ಲಿ ಯುವಕನೊಬ್ಬ ಸ್ನೇಹಿತರ ಜೊತೆಗೆ ತನ್ನ ಹುಟ್ಟುಹಬ್ಬವನ್ನು ಸಂಭ್ರಮಿಸಿ ಮನೆಗೆ ತೆರಳುತ್ತಿದ್ದಾಗ ನಡೆದ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆಯೊಂದು ನಡೆದಿದೆ. ಬೈಕ್ ಹಾಗೂ ಅಶೋಕಾ ಲೈಲಾಂಡ್ ಡಿಕ್ಕಿಯಾಗಿ ಬೆಂಗಳೂರು ಉತ್ತರ ತೋಟದ ಗುಡ್ಡದಹಳ್ಳಿ ನಿವಾಸಿ ಪವನ್ (24) ಅಸು ನೀಗಿದ್ದಾನೆ. ಸಂಜೆ

ರಸ್ತೆ ದಾಟುತ್ತಿದ್ದಾಗ ಬೈಕ್‌ ಡಿಕ್ಕಿ: ಬೆಂಗಳೂರಿನಲ್ಲಿ ಯುವತಿ ಸಾವು

ಬೆಂಗಳೂರಿನ ರಾಜ್‌ಕುಮಾರ್ ರಸ್ತೆಯ ಹೆಚ್‌ಡಿಎಫ್‌ಸಿ ಬ್ಯಾಂಕ್ ಬಳಿ ರಸ್ತೆ ದಾಟುತ್ತಿದ್ದ ಯುವತಿಗೆ ಅತಿ ವೇಗವಾಗಿ ಬಂದ ಬೈಕ್‌ ಡಿಕ್ಕಿಯಾಗಿದ್ದು, ಆಕೆ ಮೃತಪಟ್ಟಿದ್ದಾರೆ. ಅತಿ ವೇಗವಾಗಿ ಬುಲೆಟ್ ಬೈಕ್ ಚಲಾಯಿಸಿಕೊಂಡು ಬಂದ ಸವಾರನ ಅತಿರೇಕಕ್ಕೆ ಯುವತಿಯ ಪ್ರಾಣ ಹೋಗಿದೆ. ಸೋಮವಾರ ಮಧ್ಯಾಹ್ನ  27

ಶಿವಮೊಗ್ಗದಲ್ಲಿ ಬೈಕ್ ಗೆ ಮರಳು ತುಂಬಿದ ಲಾರಿ ಡಿಕ್ಕಿ: ಸವಾರ ಸಾವು

ಬೈಕ್ ಗೆ ಮರಳು ತುಂಬಿದ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನಪ್ಪಿರುವ ಘಟನೆ ಶಿವಮೊಗ್ಗ ನಗರದ ಗುರುಪುರ ಬಳಿ ನಡೆದಿದೆ. ಕಾಟಿಕೆರೆ ಗ್ರಾಮದ 26 ವರ್ಷದ ಮಂಜುನಾಥ್ ಮೃತ ಯುವಕ. ಹೊಳೆಹೊನ್ನೂರು ಕಡೆಯಿಂದ ಅತಿ ವೇಗವಾಗಿ ಬಂದ ಲಾರಿ ಹಿಂಬದಿಯಿಂದ

ದಾವಣಗೆರೆಯಲ್ಲಿ ಬೈಕ್‌ಗೆ ಗುದ್ದಿದ ಅಪರಿಚಿತ ವಾಹನ: ಸವಾರ ಸಾವು

ದಾವಣಗೆರೆಯ ಶಿರಮಗೊಂಡನಹಳ್ಳಿ ರಸ್ತೆಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್‌ ಸವಾರ ಮೃತಪಟ್ಟಿರುವ ಘಟನೆ ನಡೆದಿದೆ. ಬೈಕ್ ಸವಾರ ಮಂಜುನಾಥ (27) ಮೃತಪಟ್ಟ ಯುವಕ. ಗದಗ ಶಿಂಗ್ಲಿ ಗ್ರಾಮದ ಮಂಜುನಾಥ ಬೈಕ್‌ನಲ್ಲಿ ಬೆಂಗಳೂರಿಗೆ ಬರುತ್ತಿದ್ದಾಗ ಹಿಂಬದಿಯಿಂದ ಅಪರಿಚಿತ ವಾಹನ

ರಾಯಬಾಗದಲ್ಲಿ ಲಾರಿ ಪಲ್ಟಿ: ವಿದ್ಯಾರ್ಥಿ ಬಲಿ

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾಲಶಿರಗೂರು ಬಳಿ ಸಿಮೆಂಟ್ ತುಂಬಿದ್ದ ಲಾರಿಯೊಂದು ಉರುಳಿದ ಪರಿಣಾಮವಾಗಿ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಹಾರೂಗೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಡಚಿ ಕಡೆಯಿಂದ ಹಾರೂಗೇರಿ ಕಡೆಗೆ ಹೊರಟಿದ್ದ ಸಿಮೆಂಟ್ ಲಾರಿ ತಿರುವಿನಲ್ಲಿ ಶಾಲೆಗೆ