50 plus
50+ ನಾಗರಿಕರಿಗಾಗಿ ಬೆಂಗಳೂರಿನಲ್ಲಿ ಚೊಚ್ಚಲ ‘ಮರ್ಜಿ ಕಾರ್ನಿವಲ್ 2025’ ಮರ್ಜಿ ಬೈ ಪ್ರೈಮಸ್
ಬೆಂಗಳೂರು: ಮರ್ಜಿ ಬೈ ಪ್ರೈಮಸ್ ಸಂಸ್ಥೆಯು ಇದೇ ಮೊದಲ ಬಾರಿಗೆ 50 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಮರ್ಜಿ ಕಾರ್ನಿವಲ್ 2025 ಅನ್ನು ಯಶಸ್ವಿಯಾಗಿ ಆಯೋಜಿಸಿದೆ. ಚರ್ಚ್ ಸ್ಟ್ರೀಟ್‌ನಲ್ಲಿರುವ ಭೈವ್ ಪ್ಲಾಟಿನಂ ವರ್ಕ್‌ಸ್ಪೇಸ್‌ನಲ್ಲಿ ನಡೆದ ಈ ಕಾರ್ಯಕ್ರಮವು ಭೈವ್, ಫೋರ್ಟಿಸ್ ಹಾಸ್ಪಿಟಲ್, ಸ್ವಿಗ್ಗಿ ಸೀನ್ಸ್ ಮತ್ತು ಇತರ ಪಾಲುದಾರರ ಜೊತೆಗಿನ ಜಂಟಿ ಸಹಭಾಗಿತ್ವದಲ್ಲಿ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ನಗರದ ಜೆನ್ ಇವಿ (ಜನರೇಷನ್ ಎವರ್‌ಗ್ರೀನ್) ಭಾಗವಹಿಸಿ ಸಂಭ್ರಮಿಸಿತು.


