Menu

ಲಂಕೆಯಿಂದ 34 ಭಾರತೀಯ ಬೆಸ್ತರ ಬಂಧನ

ರಾಮನಾಥಪುರ: ಗಡಿ ರೇಖೆಯನ್ನು ದಾಟಿ ಶ್ರೀಲಂಕಾದ ನೀರಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಜಿಲ್ಲೆಯ 34 ಭಾರತೀಯ ಬೆಸ್ತರನ್ನು ಒಳಗೊಂಡ ಮೂರು ಭಾರತೀಯ ಯಾಂತ್ರೀಕೃತ ಮೀನುಗಾರಿಕಾ ದೋಣಿಗಳನ್ನು ಲಂಕಾ ನೌಕಾಪಡೆಯು ನಸುಕಿನಲ್ಲಿ ವಶಪಡಿಸಿಕೊಂಡಿದೆ. ದೋಣಿಗಳು ಮತ್ತು ಬಂಽತ ಮೀನುಗಾರರನ್ನು ಶ್ರೀಲಂಕಾದ ದ್ವೀಪ ಪ್ರದೇಶ ಇರನತೀವುಗೆ ಕರೆದೊಯ್ಯಲಾಯಿತು. ನಂತರ, ಅವುಗಳನ್ನು ಕಾನೂನು ಕ್ರಮಗಳಿಗಾಗಿ ಕಿಲಿನೊಚ್ಚಿಯ ಸಹಾಯಕ ಮೀನುಗಾರಿಕೆ ನಿರ್ದೇಶನಾಲಯಕ್ಕೆ ಹಸ್ತಾಂತರಿಸಲಾಗಿದೆ. ಮೀನುಗಾರಿಕೆ ಇಲಾಖೆ ಪ್ರಕಾರ, ರಾಮೇಶ್ವರಂನಿಂದ 400 ಕ್ಕೂ ಹೆಚ್ಚು ದೋಣಿಗಳು ಶನಿವಾರ

ಪುಣೆಯಲ್ಲಿ ಗುಲ್ಲೆನ್ ಬಾರ್ ಸಿಂಡ್ರೋಮ್ ಗೆ ವ್ಯಕ್ತಿ ಬಲಿ

2023ರಲ್ಲಿ ಪೆರು ಸೇರಿದಂತೆ ಆಫ್ರಿಕಾ ದೇಶಗಳಲ್ಲಿ ಕಾಣಿಸಿಕೊಂಡಿದ್ದ ಗುಲ್ಲೆನ್ ಬಾರ್ ಸಿಂಡ್ರೋಮ್ ಎಂಬ ಮಾರಣಾಂತಿಕ ರೋಗ ಇದೀಗ ಭಾರತದಲ್ಲಿ ಹೆಚ್ಚಾಗುತ್ತಿದ್ದು, ಆತಂಕ ತಂದೊಡ್ಡಿದೆ. ಸೋಲಾಪುರದ ವ್ಯಕ್ತಿ ಪುಣೆಯಲ್ಲಿ ಗುಲ್ಲೆನ್ ಬಾರ್ ಸಿಂಡ್ರೋಮ್ ಆರೋಗ್ಯ ಸಮಸ್ಯೆಗೆ ಬಲಿಯಾದ ಮೊದಲಿಗರು. ಪುಣೆಯಲ್ಲಿ ಗುಲ್ಲೆನ್ ಬಾರ್

ಸೈಫ್‌ ಪ್ರಕರಣದಲ್ಲಿ ಮುಂಬೈ ಪೊಲೀಸ್‌ ಎಡವಟ್ಟು: ಬದುಕೇ ನಾಶವೆಂದು ಯುವಕನ ಅಳಲು

ನಟ ಸೈಫ್ ಅಲಿ ಖಾನ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಾಡಿದ ಎಡವಟ್ಟು ಯುವಕನೊಬ್ಬನ ಜೀವನದ ದಿಕ್ಕನ್ನೇ ತಪ್ಪಿಸಿದೆ. ಪ್ರಕರಣ ಸಂಬಂಧ ಶಂಕಿತ ಆರೋಪಿ, ಟೂರ್ಸ್ ಕಂಪನಿ ಆಕಾಶ್ ಕನೋಜಿಯಾ (31) ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ತನಿಖೆಯಲ್ಲಿ ಆಕಾಶ್ ನಿಜವಾದ

ಪಿರಿಯಾಪಟ್ಟಣದಲ್ಲಿ ಹೃದಯಾಘಾತದಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಸಾವು

ಹೃದಯಾಘಾತದಿಂದ ಯುವಕರು,ಯುವತಿಯರು, ಮಕ್ಕಳ ಸಾವಿನ ಸರಣಿ ಮುಂದುವರಿಯುತ್ತಿದ್ದು, ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ಇಂದು (ಸೋಮವಾರ)ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ನಾಗರಾಜ್, ವಸಂತ ದಂಪತಿ ಪುತ್ರಿ ದೀಪಿಕಾ (15) ಹೃದಯಾಘಾತದಿಂದ ಮೃತಪಟ್ಟ ವಿದ್ಯಾರ್ಥಿನಿ. ರಾವಂದೂರು ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ದೀಪಿಕಾ ಇದ್ದಕ್ಕಿದ್ದಂತೆ

ಮುಡಾ ಹಗರಣದಲ್ಲಿ ಸಿಎಂ ಪತ್ನಿ ಪಾರ್ವತಿ, ಸಚಿವ ಬೈರತಿ ಸುರೇಶ್‌ಗೆ ಇಡಿ ನೋಟಿಸ್‌

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮತ್ತು ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮತ್ತು ಸಚಿವ ಭೈರತಿ ಸುರೇಶ್ ಅವರಿಗೆ ನೋಟಿಸ್​​ ಜಾರಿ ಮಾಡಿದೆ. ಇಡಿ ನೋಟಿಸ್​ ನೀಡುತ್ತಿದ್ದಂತೆ ಪಾರ್ವತಿ ಸಿದ್ದರಾಮಯ್ಯ ಮತ್ತು ಭೈರತಿ ಸುರೇಶ್​

ನಂಜನಗೂಡು ಮಹಿಳೆ ಆತ್ಮಹತ್ಯೆ; ಮೈಕ್ರೋ ಫೈನಾನ್ಸ್‌ ಕಿರುಕುಳ ಶಂಕೆ

ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದಲ್ಲಿ ವಿಷದ ಮಾತ್ರೆಗಳನ್ನು ನುಂಗಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಯಶೀಲಾ (53) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಐಐಎಫ್‌ಎಲ್, ಫೈವ್ ಸ್ಟಾರ್ ಮೈಕ್ರೋ ಫೈನಾನ್ಸ್‌ನಲ್ಲಿ ಮನೆ, ವ್ಯವಸಾಯ ಹಾಗೂ ಹಸು ಸಾಕಾಣಿಕೆಗಾಗಿ ಜಯಶೀಲಾ 5 ಲಕ್ಷ ಸಾಲ ಪಡೆದಿದ್ದರು.

ಮಂತ್ರಾಲಯದಲ್ಲಿ ಅಡ್ವಾನ್ಸ್ ರೂಂ ಬುಕ್ ಹೆಸರಿನಲ್ಲಿ ವಂಚನೆ ಜಾಲ

ಶ್ರೀ ಗುರು ರಾಘವೇಂದ್ರ ಸ್ವಾಮಿ ಸನ್ನಿಧಿ ಮಂತ್ರಾಲಯದಲ್ಲಿ ಅಡ್ವಾನ್ಸ್ ರೂಂ ಬುಕ್ ಮಾಡುವ ಭಕ್ತರನ್ನು ವಂಚಿಸುವ ಜಾಲವೊಂದು ಕಾರ್ಯಾಚರಿಸುತ್ತಿರುವುದು ಬಯಲಾಗಿದೆ. ಹೀಗಾಗಿ ಭಕ್ತರು ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ರೂಂ ಬುಕ್ಕಿಂಗ್, ಪ್ರಸಾದ, ವಿವಿಧ ಸೇವೆಗಳ ಸೌಲಭ್ಯ ಒದಗಿಸುವ ಹೆಸರಲ್ಲಿ ವಂಚಕರ

ಬಿಎಂಟಿಸಿ ಸಿಬ್ಬಂದಿ ಅಪಘಾತದಲ್ಲಿ ಮೃತಪಟ್ಟರೆ ಕುಟುಂಬಕ್ಕೆ 1.5 ಕೋಟಿ ರೂ. ಪರಿಹಾರ

ಇನ್ನು ಮುಂದೆ ಬಿಎಂಟಿಸಿ ನೌಕರರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡರೆ ಅವರ ಕುಟುಂಬಕ್ಕೆ 1.50 ಕೋಟಿ ರೂ. ಪರಿಹಾರ ಲಭಿಸಲಿದೆ. ಕೆಎಸ್​ಆರ್​​ಟಿಸಿ ನೌಕರರು ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬದವರಿಗೆ 1 ಕೋಟಿ ರೂ. ಪರಿಹಾರ ನೀಡಲಾಗುತ್ತಿತ್ತು. ಬಿಎಂಟಿಸಿಯ ನೌಕರರು ಆಕ್ಸಿಡೆಂಟ್​ನಲ್ಲಿ ಪ್ರಾಣ ಕಳೆದುಕೊಂಡರೆ

ಸ್ಯಾನಿಟರಿ ಪ್ಯಾಡ್ ಕೇಳಿದ್ದಕ್ಕೆ ಪರೀಕ್ಷಾ ಕೊಠಡಿಯಿಂದ ವಿದ್ಯಾರ್ಥಿನಿಯ ಹೊರಗಟ್ಟಿದ ಪ್ರಿನ್ಸಿಪಾಲ್‌

ಉತ್ತರ ಪ್ರದೇಶದ ಬರೇಲಿಯಲ್ಲಿ ಏಕಾಏಕಿ ಮುಟ್ಟಾದ ವಿದ್ಯಾರ್ಥಿನಿ ಪ್ರಾಂಶುಪಾಲರ ಬಳಿ ಸ್ಯಾನಿಟರಿ ಪ್ಯಾಡ್ ಕೇಳಿದ್ದಕ್ಕೆ ಆಕೆಯನ್ನು ಪರೀಕ್ಷಾ ಕೊಠಡಿಯಿಂದ ಹೊರಗೆ ನಿಲ್ಲಿಸಿರುವ ಘಟನೆ ನಡೆದಿದೆ. ಪ್ರಥಮ ವರ್ಷದ ಪಿಯು ವಿದ್ಯಾರ್ಥಿನಿ ಪರೀಕ್ಷಾ ಕೊಠಡಿಯಲ್ಲಿದ್ದಾಗ ಮುಟ್ಟು ಕಾಣಿಸಿಕೊಂಡಿತ್ತು, ಆಕೆ ಶಿಕ್ಷಕರ ಬಳಿ ಸ್ಯಾನಿಟರ್

ಮೈಕ್ರೋ ಫೈನಾನ್ಸ್ ಬಗ್ಗೆ ಆತಂಕ ಬೇಡ: ಬೈರತಿ ಸುರೇಶ್

ಮೈಕ್ರೋ ಫೈನಾನ್ಸ್ ನವರು ಸಾಲ ವಸೂಲಿ ನೆಪದಲ್ಲಿ ರೈತರು ಅಥವಾ ಮಹಿಳೆಯರಿಗೆ ತೊಂದರೆ ನೀಡಿದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚಿಸಲಾಗಿದ್ದು, ಯಾರೂ  ಆತಂಕಪಡುವ ಅಗತ್ಯವಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿನ ಪರಿಸ್ಥಿತಿ ಕುರಿತು