Featured
ಒಪಿಎಸ್ ಅನುಷ್ಠಾನಕ್ಕೆ ಸರ್ಕಾರದಿಂದ ಅಗತ್ಯ ಕ್ರಮ: ಡಿಸಿಎಂ ಭರವಸೆ
ಓಪಿಎಸ್ (ಓಲ್ಡ್ ಪೆನ್ಷನ್ ಸ್ಕೀಮ್) ಜಾರಿ ಸಂಬಂಧ ಅಂಜುಮ್ ಪರ್ವೇಜ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಆ ಸಮಿತಿಯ ವರದಿಯನ್ನು ಪರಿಶೀಲಿಸಿ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಓಪಿಎಸ್ ಬಗ್ಗೆ ನಾವು ಭರವಸೆ ನೀಡಿದ್ದೆವು. ಅದರಂತೆ ಅದನ್ನು ಜಾರಿಗೆ ತರಲು ಬದ್ದರಾಗಿದ್ದೇವೆ. ನೀವು ಬಿಟ್ಟರೂ ಈ ವಿಚಾರವನ್ನು ನಾವು ಬಿಡುವುದಿಲ್ಲ. ಆದರೆ ಸ್ವಲ್ಪ ತಾಳ್ಮೆಯಿರಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. ಬೆಂಗಳೂರು
ರೀಲ್ಸ್ ವ್ಯಸನದಿಂದ ಗಂಗಾವತಿಯಲ್ಲಿ ನದಿ ಪಾಲಾಗಿದ್ದ ವೈದ್ಯೆಯ ಶವ ಪತ್ತೆ
ಗಂಗಾವತಿ ತಾಲೂಕಿನ ಸಣಾಪೂರ ಗ್ರಾಮದಲ್ಲಿರುವ ತುಂಗಾಭದ್ರಾ ನದಿಯಲ್ಲಿ ಬುಧವಾರ ಮುಂಜಾನೆ ಕಲ್ಲುಬಂಡೆಗಳ ಮೇಲಿಂದ ನದಿಗೆ ಜಿಗಿದ ಯುವ ವೈದ್ಯೆಯ ಶವ ಪತ್ತೆಯಾಗಿದೆ. ಮೃತ ವೈದ್ಯೆಯನ್ನು ಹೈದರಾಬಾದ್‌ನ ನಾಂಪಲ್ಲಿ ಪ್ರದೇಶದ ನಿವಾಸಿ, ಎಂಬಿಬಿಎಸ್ ಪದವೀಧರೆ ಅನನ್ಯ ಮೋಹನ್ (26) ಎಂದು ಗುರುತಿಸಲಾಗಿದೆ. ಆಕೆ
ಚಾಂಪಿಯನ್ಸ್ ಟ್ರೋಫಿ: ಗಿಲ್ ಸತತ 2ನೇ ಶತಕದೊಂದಿಗೆ ಬಾಂಗ್ಲಾವನ್ನು ಮಣಿಸಿದ ಭಾರತ
ಶುಭಮನ್ ಗಿಲ್ ಸಿಡಿಸಿದ ಶತಕದ ಮೂಲಕ ಭಾರತ ತಂಡ 6 ವಿಕೆಟ್ ಗಳಿಂದ ಬಾಂಗ್ಲಾದೇಶ ತಂಡವನ್ನು ಸೋಲಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ದುಬೈನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡವನ್ನು 49.4 ಓವರ್
ಚಾಂಪಿಯನ್ಸ್ ಟ್ರೋಫಿ: ಬಾಂಗ್ಲಾ ವಿರುದ್ಧ ಇತಿಹಾಸ ಬರೆದ ಮೊಹಮದ್ ಶಮಿ
ಭಾರತದ ಮಧ್ಯಮ ವೇಗಿ ಮೊಹಮದ್ ಶಮಿ ಏಕದಿನ ಕ್ರಿಕೆಟ್ ನಲ್ಲಿ ಅತ್ಯಂತ ವೇಗವಾಗಿ 200 ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದುಬೈನಲ್ಲಿ ಗುರುವಾರ ನಡೆದ ಬಾಂಗ್ಲಾದೇಶ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಜಾಕರ್ ಅಲಿ ಅವರನ್ನು ಔಟ್ ಮಾಡುವ
ಚಾಂಪಿಯನ್ಸ್ ಟ್ರೋಫಿ: ಕುಸಿದ ಬಾಂಗ್ಲಾಗೆ ತೌಹಿದ್ ಚೊಚ್ಚಲ ಶತಕದ ಆಸರೆ
ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ತೌಹಿದ್ ಹ್ರಿಡೊಯ್ ಚೊಚ್ಚಲ ಶತಕದ ನೆರವನಿಂದ ಬಾಂಗ್ಲಾದೇಶ ತಂಡ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತಕ್ಕೆ 229 ರನ್ ಗಳ ಸ್ಪರ್ಧಾತ್ಮಕ ಮೊತ್ತದ ಗುರಿ ಒಡ್ಡಿದೆ. ದುಬೈನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್
ವಿಜ್ಞಾನ ಯಾವಾಗಲೂ ಧರ್ಮದ ಜೊತೆಗಿರಬೇಕು: ಆರ್.ಅಶೋಕ
ಮಂಡ್ಯ: ವಿಜ್ಞಾನ-ತಂತ್ರಜ್ಞಾನ ಯಾವಾಗಲೂ ಧರ್ಮದ ಜೊತೆಗೆ ಇರಬೇಕು. ವಿಜ್ಞಾನ ವಿವೇಕಿಗಳ ಕೈಯಲ್ಲಿ ಇದ್ದರೆ ಮಾತ್ರ ಸುರಕ್ಷಿತವಾಗಿರುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು. ನಾಗಮಂಗಲದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ 12 ನೇ ವಾರ್ಷಿಕ ಪಟ್ಟಾಭಿಷೇಕ ಉತ್ಸವದಲ್ಲಿ
ಭವಿಷ್ಯದಲ್ಲೂ ಬೆಂಗಳೂರು ಉತ್ತಮವಾಗಿರುವಂತೆ ಯೋಜನೆ ರೂಪಿಸಬೇಕು: ಡಿಕೆ ಶಿವಕುಮಾರ್
ಬೆಂಗಳೂರು: “ಬೆಂಗಳೂರಿನ ರಸ್ತೆಗಳು ಭವಿಷ್ಯದಲ್ಲಿಯೂ ಉತ್ತಮವಾಗಿರಬೇಕು. ಆ ರೀತಿಯಾಗಿ ನಾವುಗಳು ಯೋಜನೆ ರೂಪಿಸಬೇಕು. ರಸ್ತೆ, ಪಾದಚಾರಿ ಮಾರ್ಗ, ಹಸಿರು ವಲಯ ಸೇರಿದಂತೆ ಎಲ್ಲಾ ಕಡೆಯೂ ಶಿಸ್ತು ಹಾಗೂ ಏಕರೂಪತೆ ಸಾಧಿಸಬೇಕು. ಇಲ್ಲದಿದ್ದರೇ ಬೆಂಗಳೂರಿಗೆ ನಾವುಗಳು ಮೋಸ ಮಾಡಿದಂತೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.
ಶಿಕ್ಷಕನಿಂದಲೆ ವಿಧ್ಯಾರ್ಥಿನೀಯ ಮೇಲೆ ಅತ್ಯಾಚಾರ
ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 14 ವರ್ಷ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ಶಿಕ್ಷಕ ಅತ್ಯಾಚಾರ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಗಾಮನಗಟ್ಟಿಯ ಸರ್ಕಾರಿ ಶಾಲೆಯ ಇಂಗ್ಲಿಷ್ ಶಿಕ್ಷಕ ಮಹೇಶ ಚಂದಾಪುರ ಅತ್ಯಾಚಾರ ನಡೆಸಿದ ಆರೋಪಿ ಎಂದು
ಹಿಮಾಚಲ ಪ್ರದೇಶದಲ್ಲಿ ಪ್ರಕೃತಿ ವಿಕೋಪ: ಅಧ್ಯಯನ ವರದಿ ಎಚ್ಚರಿಕೆ
ಚಂಡೀಗಢ: ರಮಣೀಯ ಭೂದೃಶ್ಯಗಳನ್ನು ಹೊಂದಿರುವ ಹಿಮಾಚಲದ ಅರ್ಧ ರಾಜ್ಯವು ನೈಸರ್ಗಿಕ ಪ್ರಕೋಪಗಳಿಂದ ಜರ್ಝರಿತವಾಗುವ ಅಪಾಯ ಹಿಂದೆಂದಿಗಿಂತ ಈಗ ಹೆಚ್ಚಿದೆ. ಭಾರತೀಯ ತಂತ್ರಜ್ಞಾನ ಸಂಸ್ಥೆ (ರೋಪರ್) ನಡೆಸಿದ ಇತ್ತೀಚಿನ ಅಧ್ಯಯನದ ಪ್ರಕಾರ, ಹಿಮಾಚಲ ಪ್ರದೇಶದ ಶೇ. 40 ರಷ್ಟು ಪ್ರದೇಶವು ಭೂಕುಸಿತ, ಪ್ರವಾಹ
ಕುತ್ತಿಗೆ ಮೇಲೆ ಬಿದ್ದ 270 ಕೆಜಿ ತೂಕದ ರಾಡ್: 17 ವರ್ಷದ ವೇಟ್ ಲಿಫ್ಟರ್ ಸಾವು!
ಕಿರಿಯರ ನ್ಯಾಷನಲ್ ಗೇಮ್ಸ್ ಚಿನ್ನದ ಪದಕ ವಿಜೇತೆ 17 ವರ್ಷದ ವೇಟ್ ಲಿಫ್ಟರ್ ಅಭ್ಯಾಸದ ವೇಳೆ ಕುತ್ತಿಗೆ ಮೇಲೆ 270 ಕೆಜಿ ತೂಕದ ರಾಡ್ ಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆ ಗುಜರಾತ್ ನಲ್ಲಿ ಸಂಭವಿಸಿದೆ. ಮಹಿಳಾ ವೇಟ್ ಲಿಫ್ಟರ್ ಯಶ್ನಿಕಾ ಆಚಾರ್ಯ




