Featured
ಹೆಚ್‌ಡಿ ಕುಮಾರಸ್ವಾಮಿ ಭೂ ಒತ್ತುವರಿ: ತೆರವಿಗೆ ಮಾರ್ಕಿಂಗ್ ಮಾಡಿ ಕಲ್ಲು ನೆಟ್ಟ ಅಧಿಕಾರಿಗಳು
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕುಟುಂಬದ ವಿರುದ್ಧ ಭೂ ಒತ್ತುವರಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಬಿಡದಿಯ ಕೇತುಗಾನಹಳ್ಳಿ ಗ್ರಾಮದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಸಿದ್ದತೆ ನಡೆಸಿದ್ದಾರೆ. ಕೇತಗಾನಹಳ್ಳಿಯ ಸರ್ವೆ 7,8,9,10,16,17 ಮತ್ತು 79ರಲ್ಲಿ ಕುಮಾರಸ್ವಾಮಿ ಸೇರಿದಂತೆ ಇತರರು ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈಗಾಗಲೇ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿದ್ದು, ಒತ್ತುವರಿಯಾದ ಭೂಮಿ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಂಗಳವಾರದಿಂದ ಕುಮಾರಸ್ವಾಮಿ ಅವರ ತೋಟದ
ಪಾಕಿಸ್ತಾನದ ಪರ ಗೋಡೆ ಬರಹ: ಇಬ್ಬರು ಗುತ್ತಿಗೆ ಕಾರ್ಮಿಕರ ಬಂಧನ
ಬೆಂಗಳೂರು: ಬಿಡದಿ ಬಳಿಯ ಟೊಯೋಟಾ ಬೊಶೋಕು ಕಾರ್ಖಾನೆಯಲ್ಲಿ ಪಾಕಿಸ್ತಾನದ ಪರ ಗೋಡೆ ಬರಹ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಿಡದಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಉತ್ತರ ಕರ್ನಾಟಕದ ಹೈಮದ್ ಹುಸೇನ್(24) ಮತ್ತು ಸಾದಿಕ್(20) ಬಂಧಿತ ಆರೋಪಿಗಳಾಗಿದ್ದಾರೆ.ಇವರಿಬ್ಬರು ಟೊಯೋಟಾ ಬೊಶೋಕು ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದಲ್ಲಿ
ಶಾಸಕರಿಗೆ ಅಧಿಕಾರಿಗಳಿಂದ ಅಪಮಾನ: ಹಕ್ಕುಬಾಧ್ಯತಾ ಸಮಿತಿಗೆ ವರ್ಗಾವಣೆ
ಬೆಂಗಳೂರು: ಕಾಂಗ್ರೆಸ್ ಶಾಸಕ ರಾಜು ಕಾಗೆ, ಬಿಜೆಪಿ ಶಾಸಕ ಬಸವರಾಜ ಮತ್ತಿಮೋಡ್ ಅವರಿಗೆ ಅಧಿಕಾರಿಗಳಿಂದ ಅಪಮಾನವಾಗಿರುವ ವಿಚಾರವನ್ನು ಹಕ್ಕುಬಾಧ್ಯತಾ ಸಮಿತಿಗೆ ವರ್ಗಾಯಿಸುವುದಾಗಿ ಸಭಾಧ್ಯಕ್ಷ ಯು.ಟಿ.ಖಾದರ್ ವಿಧಾನಸಭೆಯಲ್ಲಿ ಮಂಗಳವಾರ ತಿಳಿಸಿದ್ದಾರೆ. ಇಬ್ಬರು ಶಾಸಕರು ತಮಗಾದ ಅಪಮಾನದ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದಾಗ ಪಕ್ಷಬೇಧ ಮರೆತು
ಚಾಹಲ್-ಧನ್ಯಶ್ರೀ ಡಿವೋರ್ಸ್ ತೀರ್ಪು ನಾಳೆ: 4.75 ಕೋಟಿ ಜೀವನಾಂಶಕ್ಕೆ ಇತ್ಯರ್ಥ?
ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಯಜುರ್ವೆಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನ ಪ್ರಕರಣವನ್ನು ಮಾರ್ಚ್ ೨೦ರೊಳಗೆ ಬಗೆಹರಿಸುವಂತೆ ಬಾಂಬೆ ಹೈಕೋರ್ಟ್, ಬಾಂದ್ರಾ ಕುಟುಂಬ ನ್ಯಾಯಾಲಯಕ್ಕೆ ಆದೇಶಿಸಿದೆ. ಐಪಿಎಲ್ ಟಿ-೨೦ ಟೂರ್ನಿ ಹಿನ್ನೆಲೆಯಲ್ಲಿ ಯಜುರ್ವೆಂದ್ರ ಚಾಹಲ್ ಮೂರು ತಿಂಗಳು ಬ್ಯುಸಿ ಆಗುವುದರಿಂದ
ಚಲಿಸುತ್ತಿದ್ದ ಬಸ್ಸಿನಲ್ಲಿ ಬೆಂಕಿ: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ
ಔರಾದ್ : ಬೀದರ್-ಔರಾದ್ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಚಾಲಕ ಮತ್ತು ನಿರ್ವಾಹಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಔರಾದ್ ಸಾರಿಗೆ ಘಟಕದ ಬಸ್ ಬುಧವಾರ ಮಧ್ಯಾಹ್ನ ಬೀದರನಿಂದ ಔರಾದಗೆ ಹೋಗುತ್ತಿದ್ದಾಗ ಮಾರ್ಗಮಧ್ಯೆ
ಕುಂಭ ಮೇಳದ ದುರಂತ ಪ್ರಸ್ತಾಪಿಸದ ಪ್ರಧಾನಿ ಮೋದಿ: ಪ್ರತಿಪಕ್ಷಗಳ ಆಕ್ರೋಶಕ್ಕೆ ಕಲಾಪ ಬಲಿ
ನವದೆಹಲಿ: ಮಹಾಕುಂಭದಲ್ಲಿ ಸಂಭವಿಸಿದ ದುರಂತಗಳನ್ನು ಪ್ರಸ್ತಾಪಿಸದ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಖಂಡಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದ ಕಾರಣ ಲೋಕಸಭೆಯ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ಮಹಾಕುಂಭದ ಕುರಿತು ಪ್ರಧಾನಿ ಮೋದಿ ಹೇಳಿಕೆ ನೀಡಿದ ಕೂಡಲೇ ಪ್ರತಿಪಕ್ಷಗಳ ಸದಸ್ಯರು ತಮ್ಮ
ಪುರುಷರಿಗೆ ಉಚಿತ ಎಣ್ಣೆ ಗ್ಯಾರಂಟಿ ಕೊಡಿ: ಜೆಡಿಎಸ್ ಶಾಸಕನ ಮನವಿಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?
ಕರ್ನಾಟಕದ ಗ್ಯಾರಂಟಿ ಯೋಜನೆ ಮಾದರಿಯಲ್ಲಿ ಗಂಡಸರಿಗೆ ವಾರಕ್ಕೆ 2 ಬಾಟಲ್ ಮದ್ಯ ನೀಡಬೇಕು ಎಂದು ಜೆಡಿಎಸ್ ಶಾಸಕ ಎಂಟಿ ಕೃಷ್ಣಪ್ಪ ಕಾಂಗ್ರೆಸ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಹಂಚಿಕೆ ಕುರಿತು ಮಾತನಾಡಿದ ಮಾತಾಡಿದ ಜೆಡಿಎಸ್ ಶಾಸಕ
ಬೆಂಗಳೂರು ದಕ್ಷಿಣ ಹೆಸರು ಮರನಾಮಕರಣ ಪ್ರಸ್ತಾಪ ತಿರಸ್ಕರಿಸಿದ ಕೇಂದ್ರ
ರಾಮನಗರ ಜಿಲ್ಲೆಯಲ್ಲಿ ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡುವ ರಾಜ್ಯ ಸರ್ಕಾರದ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಈ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಕನಸಿಗೆ ಕೇಂದ್ರ ತಣ್ಣೀರು ಎರಚಿದೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ
ಬೆಳಗಾವಿಯಲ್ಲಿ ಬಸ್ ಕಳ್ಳಿಯರ ಗ್ಯಾಂಗ್ ಸೆರೆ, ಚಿನ್ನಾಭರಣ ವಶ
ರಾಜ್ಯ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ ಬಳಿಕ ಸರ್ಕಾರಿ ಬಸ್ಸುಗಳು ಮಹಿಳೆಯರಿಂದ ತುಂಬಿ ತುಳುಕುತ್ತಿರುವುದನ್ನೇ ದಾಳ ಮಾಡಿಕೊಂಡು ಬಸ್ ಗಳಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳಿಯರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ನಗರದ ವಡ್ಡರವಾಡಿಯ ಅನಿತಾ ಚೌಗಲೆ, ನಿಶಾ ಲೊಂಡೆ, ಗಿಡ್ಡಿ
ಹಾಸನದಲ್ಲಿ ಹಾವನ್ನು ಕೊಂದು ಮಾಲೀಕನ ಜೀವವುಳಿಸಿ ಪ್ರಾಣ ತೆತ್ತ ನಾಯಿ
ಹಾಸನ ತಾಲೂಕಿನ ಕಟ್ಟಾಯ ಗ್ರಾಮದಲ್ಲಿ ಸಾಕು ನಾಯಿಯೊಂದು ಮನೆ ಮಾಲೀಕರು ಹಾಗೂ ಕೆಲಸಗಾರರ ಜೀವ ಉಳಿಸಲು ಪ್ರಾಣವನ್ನೇ ಪಣಕಿಟ್ಟು ಅಸು ನೀಗಿದೆ. ಸರ್ಪದ ಜತೆ ಕಾದಾಡಿದ ಪಿಟ್‌ಬುಲ್ ನಾಯಿಯ ಮುಖಕ್ಕೆ ಸರ್ಪ ಕಚ್ಚಿದ್ದರಿಂದ ಪ್ರಾಣ ಕಳೆದುಕೊಂಡಿದೆ. ಶಮಂತ್ ಎಂಬವರು ತೋಟದಲ್ಲಿ ಪಿಟ್‌ಬುಲ್




