Featured
ಕೇಂದ್ರದ ಸೂಚನೆಯಂತೆ ಎಲ್ಲಾ ಸುರಕ್ಷತಾ ಕ್ರಮ ಪಾಲನೆ: ಸಿಎಂ
ಉಗ್ರರ ನೆಲೆಗಳ ಮೇಲೆ ದಾಳಿ ಬಳಿಕ ಕೇಂದ್ರ ಸರ್ಕಾರದ ನೀಡಿರುವ ಎಲ್ಲಾ ಸೂಚನೆಗಳನ್ನು ಪಾಲಿಸಲಾಗುತ್ತಿದೆ. ಎಲ್ಲೆಡೆ ಅಣುಕು ಕವಾಯತು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮದ್ದೂರು ಕಾಫಿ ಡೇ ಹತ್ತಿರದ ಗೆಜ್ಜಲಗೆರೆ ಹೆಲಿಪ್ಯಾಡ್ ನಲ್ಲಿ ಬಂದಿಳಿದು ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮವದರೊಂದಿಗೆ ಮಾತನಾಡಿದರು. ಅಣೆಕಟ್ಟೆಗಳ ಸುರಕ್ಷತೆಯ ದೃಷ್ಟಿಯಲ್ಲಿ ಎಲ್ಲೆಡೆ ಎಚ್ಚರಿಕೆ ನೀಡಲಾಗಿದ್ದು, ಯಾವ ಘಳಿಗೆಯಲ್ಲಿ ಏನಾದರೂ ಆಗಬಹುದು ಎಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಪೂಜೆ
ರಾಜ್ಯದ ಜಲಾಶಯಗಳ ಮೇಲೆ ಪೊಲೀಸ್ ಕಣ್ಗಾವಲು
ಭಾರತವು ಉಗ್ರರ ವಿರುದ್ಧ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಳಿಕ ಮುಂಜಾಗ್ರತಾ ಕ್ರಮವಾಗಿ ಹಲವು ರಕ್ಷಣಾ ಕ್ರಮಗಳನ್ನು ಕೈಗೊಳ್ಳ ಲಾಗಿದೆ. ಅದರಂತೆ ರಾಜ್ಯದಲ್ಲೂ ಪ್ರಮುಖ ಸ್ಥಳ , ಸಂಸ್ಥೆಗಳಿಗೆ ಬಿಗಿ ಭದ್ರತೆ ನೀಡಲಾಗಿದೆ. ಜಲಸಂಪನ್ಮೂಲ ಇಲಾಖೆಯ ಆದೇಶದಂತೆ ನಾಡಿನಲ್ಲಿರುವ ಜಲಾಶಯಗಳಿಗೂ ಹೆಚ್ಚಿನ
ರಾಜ್ಯದ ಹಲವೆಡೆ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳಿಗೆ ಲೋಕಾಯುಕ್ತ ದಾಳಿ
ಕೋಟ್ಯಾಂತರ ರೂಪಾಯಿಗಳ ಅಕ್ರಮ ಆಸ್ತಿ ಸಂಗ್ರಹ ಆರೋಪದ ಹಿನ್ನೆಲೆಯಲ್ಲಿ ಕೋಲಾರ, ದಾವಣಗೆರೆ ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿ ಕಾರಿಗಳು ದಾಳಿ ನಡೆಸಿದ್ದಾರೆ. ಸರ್ಕಾರಿ ಅಧಿಕಾರಿಗಳ ಮನೆಗಳು ಮತ್ತು ಕಚೇರಿಗಳಲ್ಲಿ ದಾಖಲೆಗಳನ್ನು, ಕಡತಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲಿಸುತ್ತಿ ದ್ದಾರೆ. ಕೋಲಾರ ಜಿಲ್ಲೆಯಲ್ಲಿ
ಕರ್ನಲ್ ಸೋಫಿಯಾ ಅಂದ್ರೆ ಕನ್ನಡಿಗರಿಗೆ ಪುಳಕ
ಭಾರತೀಯ ವಾಯುಪಡೆಯು ಆಪರೇಶನ್ ಸಿಂಧೂರ ಕಾರ್ಯಾಚರಣೆ ಮೂಲಕ ಉಗ್ರರ ನೆಲೆಗಳನ್ನು ನಾಶಪಡಿಸಿದ ಯಶೋಗಾಥೆಯನ್ನು ಎಳೆ ಎಳೆಯಾಗಿ ಜಗತ್ತಿಗೆ ತೆರೆದಿಟ್ಟ ಲೆಪ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಶಿ ಬೆಳಗಾವಿಯ ಸೊಸೆ ಎಂಬುದು ಕನ್ನಡಿಗರ ಪುಳಕಕ್ಕೆ ಕಾರಣವಾಗಿದೆ. ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ. ಬಹುರಾಷ್ಟ್ರೀಯ ಸೇನಾ
ಬೆಂಗಳೂರಿನ ದೇಗುಲಗಳಲ್ಲಿ ಸೇನೆಗಾಗಿ ವಿಶೇಷ ಪೂಜೆ
ಭಾರತೀಯ ವಾಯುಪಡೆಯು ಆಪರೇಷನ್ ಸಿಂಧೂರ ಮೂಲಕ ಕಾಶ್ಮೀರದ 9 ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿದೆ. ಇನ್ನು ಮುಂದಿನ ದಿನಗಳಲ್ಲೂ ಸೇನೆಗೆ ಒಳಿತಾಗಲಿ ಎಂದು ಬೆಂಗಳೂರಿನ ಹಲವು ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ. ಗವಿಗಂಗಾಧರ ದೇಗುಲದಲ್ಲಿ ದೇಶವನ್ನು ರಕ್ಷಿಸುವ ಸೇನೆಗೆ ಬಲ
ಉತ್ತರಾಖಂಡ್‌ನಲ್ಲಿ ಹೆಲಿಕಾಪ್ಟರ್ ಪತನ: ಐವರು ಬಲಿ
ಉತ್ತರಾಖಂಡ್‌ನ ಉತ್ತರಕಾಶಿ ಜಿಲ್ಲೆಯಲ್ಲಿ ಗಂಗೋತ್ರಿ ಕಡೆಗೆ ಹೊರಟಿದ್ದ ಖಾಸಗಿ ಹೆಲಿಕಾಪ್ಟರ್ ಪತನಗೊಂಡು ಐವರು ಪ್ರಾಣ ಕಳೆದುಕೊಂಡಿದ್ದಾರೆ. ಇಂದು (ಗುರುವಾರ) ಬೆಳಗ್ಗೆ 9 ಗಂಟೆಗೆ ಈ ದುರಂತ ಸಂಭವಿಸಿದೆ. ಈ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಘಟನೆಯ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು,
ಫ್ಯಾಟಿ ಲಿವರ್ ತಡೆಯಲು ನೆಲ್ಲಿಕಾಯಿ ಸೇವನೆ ಸಹಕಾರಿ
ಲಿವರ್‌ನಲ್ಲಿ ಕೊಬ್ಬು ಸಂಗ್ರಹವಾಗುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಯನ್ನು ಆರಂಭದಲ್ಲೇ ನಿಯಂತ್ರಣಕ್ಕೆ ತರದಿದ್ದಲ್ಲಿ ಅದು ಮಾರಣಾಂತಿಕವಾಗಿ ಪರಿಣಮಿಸುವ ಸಾಧ್ಯತೆಗಳೂ ಇವೆ. ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿಯಾಗುವ ಮೊದಲೇ ಯಕೃತ್ತಿನ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಫ್ಯಾಟಿ ಲಿವರ್ ಸಮಸ್ಯೆಗೆ ನೆಲ್ಲಿಕಾಯಿಯನ್ನು ಉತ್ತಮ ಪರಿಹಾರವಾಗಿ
ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್‌ಗೆ ಇದ್ಯಾ ಕರ್ನಾಟಕ, ಕೇರಳ ಲಿಂಕ್?
ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್ ಎಂದು ಗುರುತಿಸಲಾಗಿರುವ ಉಗ್ರ ಶೇಖ್ ಸಜ್ಜದ್ ಗುಲ್/ ಸಜ್ಜದ್ ಅಹ್ಮದ್ ಶೇಖ್ ಗೆ ಕರ್ನಾಟಕ ಮತ್ತು ಕೇರಳದ ಲಿಂಕ್ ಇರುವುದು ಬಯಲಾಗಿದೆ. ಪಹಲ್ಗಾಮ್ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್
ಪೂಂಚ್‌ನಲ್ಲಿ ಪಾಕ್ ಸೇನಾ ದಾಳಿ: 12 ನಾಗರಿಕರ ಸಾವು
ಜಮ್ಮು ಮತ್ತು ಕಾಶ್ಮೀರದ ಪೂಂಚ್ ವಲಯದ ನಿಯಂತ್ರಣ ರೇಖೆ ಉದ್ದಕ್ಕೂ ಪಾಕಿಸ್ತಾನ ಸೇನೆ ನಡೆಸಿದ ಶೆಲ್ ದಾಳಿಯಲ್ಲಿ 12 ನಾಗರಿಕರು ಮೃತಪಟ್ಟಿದ್ದಾರೆ. ೫೦ ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ನಾಲ್ವರು ಮಕ್ಕಳು ಹಾಗೂ ಇಬ್ಬರು ಮಹಿಳೆಯರು ಆಗಿದ್ದಾರೆ. ಬುಧವಾರ ತಡರಾತ್ರಿ ಆರಂಭವಾದ ಶೆಲ್
ಆಪರೇಷನ್ ಸಿಂಧೂರದಿಂದ ಕಂಗೆಟ್ಟ ಪಾಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ಭಾರತೀಯ ವಾಯುಪಡೆಯು ಉಗ್ರರ ನೆಲೆಗಳ ಮೇಲೆ ನಡೆಸಿದ`ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಿಂದಾಗಿ ಪಾಕಿಸ್ತಾನ ಕಂಗಾಲಾಗಿದ್ದು, ಅಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಪ್ರತಿಕ್ರಿಯಿಸಿದ್ದು, ಈ ದಾಳಿಯಲ್ಲಿ ಅಮಾಯಕ ಪಾಕಿಸ್ತಾನಿಗಳ ಜೀವಹಾನಿಯಾಗಿದೆ. ಪಾಕಿಸ್ತಾನಿಗಳ ಆತ್ಮರಕ್ಷಣೆಗಾಗಿ ಪ್ರತೀಕಾರ ತೀರಿಸಿಕೊಳ್ಳುತ್ತೇವೆ, ಪ್ರತಿ ರಕ್ತದ




