Featured
ದೇಗುಲಗಳಲ್ಲಿ ಸೇವಾ ಶುಲ್ಕ ಹೆಚ್ಚಳ: ಆರ್. ಅಶೋಕ ಕಿಡಿ
ಸಿಎಂ ಸಿದ್ದರಾಮಯ್ಯ ಅವರು ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ರಾಜ್ಯದ 14 ಪ್ರಮುಖ ಮುಜರಾಯಿ ದೇವಸ್ಥಾನಗಳಲ್ಲಿ ಸೇವಾ ಶುಲ್ಕ ಏರಿಕೆ ಮಾಡುವ ಮೂಲಕ ಹಿಂದೂಗಳಿಗೆ ಮತ್ತೊಂದು ಪೆಟ್ಟು ನೀಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಆರ್. ಅಶೋಕ ಅವರು, ಹಿಂದೂಗಳ ದೇವಸ್ಥಾನ, ಹಬ್ಬ, ಆಚರಣೆಗಳಿಗೆ ಅಡಚಣೆ ಉಂಟು ಮಾಡುವುದರಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಅದೆಂತಹ ವಿಕೃತ ಸಂತೋಷ ಸಿಗುತ್ತೋ ಗೊತ್ತಿಲ್ಲ
ಸುಡಾನ್‌ನಲ್ಲಿ ಮಸೀದಿ ಮೇಲೆ ದಾಳಿ: 70ಕ್ಕೂ ಹೆಚ್ಚು ಮಂದಿ ಬಲಿ
ಸುಡಾನ್‌ನ ಉತ್ತರ ಡಾರ್ಫುರ್ ರಾಜಧಾನಿ ಎಲ್-ಫಾಶರ್‌ನ ಅಲ್-ಸಫಿಯಾ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆಯಲ್ಲಿ ತೊಡಗಿದ್ದ ಭಕ್ತರ ಮೇಲೆ ಬಾಂಬ್ ದಾಳಿ ನಡೆದಿದ್ದು, 70ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅರೆಸೈನಿಕ ಪಡೆಗಳಾದ ರ್ಯಾಪಿಡ್ ಸಪೋರ್ಟ್ ಫೋರ್ಸಸ್ (ಆರ್‌ಎಸ್‌ಎಫ್) ನಡೆಸಿದ ದಾಳಿ ಇದಾಗಿದೆ ಎಂದು ತಿಳಿದು
ಕಾಡುವ ಮಳೆಗೆ ರಸ್ತೆ ಹಾಳಾದರೆ ಯಾರು ಹೊಣೆ?
ಸಿಲಿಕಾನ್ ಸಿಟಿ, ಐಟಿ-ಬಿಟಿ ನಗರಿ, ಉದ್ಯಾನವನ ನಗರಿ, ತೆರಿಗೆ ಸಂಗ್ರಹದಲ್ಲಿ ಮುಂಚೂಣಿಯಲ್ಲಿರುವ ನಗರ… ಹೀಗೆ ನಾನಾ ಬಿರುದುಗಳನ್ನು ಪಡೆದಿರುವ ಬೆಂಗಳೂರಿಗೆ ಈಗ ಗುಂಡಿ ನಗರ ಎಂಬ ಕುಖ್ಯಾತಿ ಅಂಟಿಸುವ ಪ್ರಯತ್ನಗಳು ನಡೆದಿವೆ. ಹೌದು, ಬೆಂಗಳೂರು ಗುಂಡಿಗಳ ನಗರಿ, ಪಾಟ್ ಹೋಲ್ ಸಿಟಿ
ಹೆಚ್-1ಬಿ ವೀಸಾ ವಾರ್ಷಿಕ ಶುಲ್ಕ ದುಬಾರಿ: ಭಾರತೀಯ ಉದ್ಯೋಗಿಗಳಿಗೆ ಸಂಕಷ್ಟವೊಡ್ಡಿದ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್-1ಬಿ ವೀಸಾಗಳ ಮೇಲಿನ ವಾರ್ಷಿಕ ಶುಲ್ಕವನ್ನು 1 ಲಕ್ಷ ಡಾಲರ್‌ಗೆ ಏರಿಕೆ ಮಾಡುವ ಮೂಲಕ ಭಾರತೀಯ ಉದ್ಯೋಗಿಗಳ ಮೇಲೆ ಬರೆ ಎಳೆದಿದ್ದಾರೆ. ವಿದೇಶಿ ಉದ್ಯೋಗಿಗಳಿಗೆ ವಾರ್ಷಿಕ 1,00,000 ಡಾಲರ್ ವೀಸಾ ಶುಲ್ಕವನ್ನು ವಿಧಿಸುವ ಘೋಷಣೆಗೆ ಟ್ರಂಪ್ ಸಹಿ
ಬೆಂಗಳೂರು ಕೋ-ಲಿವಿಂಗ್ ಪಿಜಿ: ಸೆಕ್ಸ್‌ಗೆ ಒಪ್ಪದ ಯುವತಿಗೆ ಚಾಕು ಇರಿದ ಯುವಕ
ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಕೋ-ಲಿವಿಂಗ್ ಪಿಜಿಯಲ್ಲಿ ಲೈಂಗಿಕ ಕ್ರಿಯೆಗೆ ಒಪ್ಪದ ಒಬ್ಬ ಯುವತಿಯನ್ನು ಅದೇ ಪಿಜಿಯಲ್ಲಿ ವಾಸವಿರುವ ಯುವಕ ಚಾಕುವಿನಿಂದ ಇರಿದು ಗಾಯಗೊಳಿಸಿದ್ದು, ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕೋ-ಲಿವಿಂಗ್ ಪಿಜಿಯಲ್ಲಿರುವ ಬಾಬು ಎಂಬ ಟೆಕ್ಕಿ ಆರೋಪಿ. ಆತನಿಗೆ ಮದುವೆಯಾಗಿ ಮಗುವಿದ್ದರೂ ಪಿಜಿಯಲ್ಲಿ
ನಾವು 7ಸಾವಿರ ಗುಂಡಿ ಮುಚ್ಚಿದ್ದು, ಅನುದಾನ ಕೊಟ್ಟರೂ ಬಿಜೆಪಿ ಶಾಸಕರು ಗುಂಡಿ ಮುಚ್ಚಿಲ್ಲ ಯಾಕೆ: ಡಿಸಿಎಂ
“ರಸ್ತೆಗುಂಡಿ ಸಮಸ್ಯೆ ಬಗೆಹರಿಸಲು ನಾವು ಬದ್ಧವಾಗಿದ್ದು, ಸಮಾರೋಪಾದಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಪ್ರತಿಯೊಬ್ಬ ಬಿಜೆಪಿ ಶಾಸಕನ ಕ್ಷೇತ್ರಕ್ಕೆ 25 ಕೋಟಿ ರೂ. ನೀಡಲಾಗಿದೆ. ಆದರೂ ಏಕೆ ರಸ್ತೆಗುಂಡಿಗಳನ್ನು ಮುಚ್ಚಿಸಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದು, ರಾಜಕೀಯ ಮಾಡುವವರು ಮಾಡಲಿ” ಎಂದು ಹೇಳಿದ್ದಾರೆ. ಸದಾಶಿವನಗರದ
ಕೊಪ್ಪಳದಲ್ಲಿ ಅನ್ನಭಾಗ್ಯದ 35 ಟನ್ ಅಕ್ಕಿ ಕಳ್ಳ ಸಾಗಣೆ
ಕೊಪ್ಪಳದ ಮುನಿರಾಬಾದ್‌ನಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಲಾರಿಯನ್ನು ತಡೆದು ಲಾರಿಯಲ್ಲಿದ್ದ ೩೫ ಟನ್ ಅಕ್ಕಿಯನ್ನು ಸೀಝ್ ಮಾಡಿದ್ದಾರೆ. ಬಡವರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯ ಅಕ್ಕಿ ಭ್ರಷ್ಟರ ಪಾಲಾಗುವುದನ್ನು ತಡೆಯುವ
ಶ್ರೀರಂಗಪಟ್ಟಣದ ಟಿಪ್ಪು ವಕ್ಫ್ ಎಸ್ಟೇಟ್‌ನಲ್ಲಿ ಭ್ರಷ್ಟಾಚಾರ ಆರೋಪ
ಮಂಡ್ಯದ ಶ್ರೀರಂಗಪಟ್ಟಣದ ಷಹೀದ್ ಟಿಪ್ಪು ವಕ್ಫ್ ಎಸ್ಟೇಟ್ ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಮೈಸೂರಿನ ಶಾಸಕ ಹಾಗೂ ಟಿಪ್ಪು ವಕ್ಫ್ ಕಮಿಟಿ ಅಧ್ಯಕ್ಷ ತನ್ವೀರ್ ಸೇಠ್ ಹಾಗೂ ಕಾರ್ಯದರ್ಶಿ ಇರ್ಫಾನ್ ವಿರುದ್ಧ ಭ್ರಷ್ಟಾಚಾರ ಹಾಗೂ ಅಧಿಕಾರ
ಎಲ್ಲಾ ಗೊಂದಲ ಸರಿಪಡಿಸಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುತ್ತೇವೆ: ಡಿಕೆ ಶಿವಕುಮಾರ್
“ಎಲ್ಲಾ ಗೊಂದಲ ಸರಿಪಡಿಸಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುತ್ತೇವೆ. ಕಾನೂನು ಚೌಕಟ್ಟಿನಲ್ಲಿ ಸಾಮಾಜಿಕ ನ್ಯಾಯ ಒದಗಿಸುತ್ತೇವೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ರಾಮನಗರದಲ್ಲಿ ನಡೆದ ಮಾಜಿ ಸಿಎಂ ದೇವರಾಜ ಅರಸು ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ
ಅಜೀಂ ಪ್ರೇಮ್ ಜಿ ಫೌಂಡೇಶನ್ ಸಹಯೋಗದಲ್ಲಿ ’ದೀಪಿಕಾ ವಿದ್ಯಾರ್ಥಿ ವೇತನ’ ಕಾರ್ಯಕ್ರಮ
ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ವಾರ್ಷಿಕ 30,000 ರೂ.ಗಳಂತೆ ಒಟ್ಟು 37,000 ವಿದ್ಯಾರ್ಥಿನಿಯರಿಗೆ ’ದೀಪಿಕಾ ವಿದ್ಯಾರ್ಥಿ ವೇತನ’ ಕಾರ್ಯಕ್ರಮದಿಂದ ಲಾಭವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಉನ್ನತ ಶಿಕ್ಷಣ ಇಲಾಖೆ ಮತ್ತು ಅಜೀಂ ಪ್ರೇಮ್




