Featured
ರಾಜ್ಯದಲ್ಲಿ ಹೆಚ್ಚುತ್ತಿದೆ ಡೆಂಗ್ಯು, ಬೆಂಗಳೂರಿನಲ್ಲಿ 2478 ಪ್ರಕರಣ
ರಾಜ್ಯದಲ್ಲಿ ಒಂದೆಡೆ ಮಳೆಯ ಅವಾಂತರವಾದರೆ ಮತ್ತೊಂದೆಡೆ ಡೆಂಗ್ಯು ಪ್ರಕರಣಗಳು ಹೆಚ್ಚುತ್ತಿದ್ದು, ಐದಕ್ಕಿಂತ ಹೆಚ್ಚು ಸಾವುಗಳಾಗಿವೆ. ಸತತ ಮಳೆಯಿಂದಾಗಿ ಡೆಂಗ್ಯು ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವುದು ಆತಂಕ ಸೃಷ್ಟಿಸಿದೆ. ರಾಜ್ಯದಲ್ಲಿ ಕಳೆದ ಒಂಭತ್ತು ತಿಂಗಳಲ್ಲಿ 5093 ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರಿನಲ್ಲಿ 2478 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಹೊರತುಪಡಿಸಿ ರಾಜ್ಯಾದಾದ್ಯಂತ 2615 ಪ್ರಕರಣಗಳು ದೃಢಪಟ್ಟಿವೆ. ನಿಂತ ನೀರಲ್ಲಿ ಬೆಳೆಯುವ ಸೊಳ್ಳೆಯಿಂದ ಡೆಂಗ್ಯು ಹರಡುತ್ತದೆ. ಆರಂಭದಲ್ಲಿ ವಿಪರೀತ ಜ್ವರ, ತಲೆನೋವು, ಮೈಕೈ ನೋವು, ಕೀಲುನೋವು, ವಾಂತಿ- ವಾಕರಿಕೆ,
ಬೆಂಗಳೂರಿನಲ್ಲಿ 7.80 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ ಹಚ್ಚಿದ ಸಿಸಿಬಿ
ಬೆಂಗಳೂರಿನಲ್ಲಿ ಸಿಸಿಬಿ ನಡೆಸಿದ ಕಾರ್ಯಾಚರಣೆಯಲ್ಲಿ 7.80 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ. ಎಂಡಿಎಂಎ ಕ್ರಿಸ್ಟಲ್ 3.8 ಕೆಜಿ, ಎಂಡಿಎಂಎ ಬ್ರೌನ್ ಹಾಗೂ ವೈಟ್ ಡ್ರಗ್ಸ್ , 42 ಗ್ರಾಂ ತೂಕದ 82 ಎಕ್ಸಟೆಸಿ ಮಾತ್ರೆಗಳು, 23 ಕೆಜಿ ಗಾಂಜಾ ಹಾಗೂ 482
ರಂಗಕರ್ಮಿ ಯಶವಂತ ಸರದೇಶಪಾಂಡೆ ಇನ್ನಿಲ್ಲ
ನಗೆ ನಾಟಕಗಳ ಬಾದ್‌ಶಾ ಎಂದು ಹೆಸರಾಗಿರುವ ರಂಗಕರ್ಮಿ ನಟ, ನಿರ್ದೇಶಕ, ನಾಟಕಕಾರ ಯಶವಂತ ಸರದೇಶಪಾಂಡೆ (೬೦) ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು. ಇತ್ತೀಚೆಗಷ್ಟೇ ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾಮಿಂಗ್ ಆರ್ಟ್ಸ್‌ನಲ್ಲಿ ‘ಉತ್ತರೋತ್ತಮ ಉತ್ಸವ – 2025’ ನಡೆಯಿತು. ಯಶವಂತ್ ಸರ್‌ದೇಶಪಾಂಡೆ ಅವರ 60ನೇ ಹುಟ್ಟುಹಬ್ಬದ
ಆಯುಧಪೂಜೆ ದಿನ ವಾಹನ ತೊಳೆಯಲು ಕಾವೇರಿ ನೀರು ಬಳಸುವಂತಿಲ್ಲ
ಆಯುಧ ಪೂಜೆ ದಿನ ಕುಡಿಯಲು ಪೂರೈಕೆಯಾಗುವ ಕಾವೇರಿ ನೀರಲ್ಲಿ ಕಾರು, ಬೈಕ್ ಸೇರಿದಂತೆ ವಾಹನಗಳನ್ನು ತೊಳೆಯುವಂತಿಲ್ಲ. ದಸರಾ ಹಬ್ಬದ ಸಂಭ್ರಮಕ್ಕೆ ಕಾವೇರಿ ನೀರು ಪೋಲು ಮಾಡಿದರೆ ದಂಡ ಪಾವತಿಸಬೇಕಾಗಬಹುದು. ಕಾವೇರಿ ನೀರು ಕುಡಿಯುವುದಕ್ಕೆ ಬಳಕೆಗೆ ಸರಬರಾಜಾಗುವುದು. ಅನಗತ್ಯವಾಗಿ ನೀರು ಪೋಲು ಮಾಡುವುದು,
ಶಿರಾದಲ್ಲಿ ರಸ್ತೆ ಅಪಘಾತ: ಮೂವರು ಬಲಿ
ತುಮಕೂರಿನ ಜಿಲ್ಲೆ ಶಿರಾ ನಗರದ ಹೊರವಲಯದ ಸಾಯಿ ಡಾಬ ಬಳಿ ಭಾನುವಾರ ರಾತ್ರಿ ಎರಡು ಬೈಕ್‌ಗಳು ಡಿಕ್ಕಿ ಹೊಡೆದು ಮೂವರು ಮೃತಪಟ್ಟಿದ್ದಾರೆ. ರಾಮನಗರಜಿಲ್ಲೆಯ ಕೊಳಗೊಂಡನಹಳ್ಳಿ ಗ್ರಾಮದ ಮುತ್ತುರಾಜ್ (36) ಮತ್ತು ವೆಂಕಟಧನಶೆಟ್ಟಿ (64), ಎಮ್ಮೇರಹಳ್ಳಿ ತಾಂಡದ ವಿಷ್ಣು ಎನ್. ನಾಯ್ಕ್(24) ಮೃತಪಟ್ಟವರು.
ಜನಗಣತಿ ಸಮೀಕ್ಷೆಯಲ್ಲಿ ಜನರು ವೈಯಕ್ತಿಕ ಮಾಹಿತಿ ನೀಡಬೇಡಿ: ಆರ್.ಅಶೋಕ
ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಜಾತಿ ಸಮೀಕ್ಷೆಯಲ್ಲಿ ಜನರು ವೈಯಕ್ತಿಕ ಮಾಹಿತಿಗಳನ್ನು ನೀಡಲೇಬೇಕು ಎಂದೇನಿಲ್ಲ. ಸೂಕ್ತ ಎನಿಸಿದ ಪ್ರಶ್ನೆಗಳಿಗೆ ಮಾತ್ರ ಜನರು ಉತ್ತರ ನೀಡಬೇಕು. ಸಮೀಕ್ಷೆ ವಿಚಾರದಲ್ಲಿ ಜನರು ಎಚ್ಚರವಾಗಿರಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ
ಬೀಳಗಿಯಲ್ಲಿ ಕಾರು ಟಂಟಂ ಡಿಕ್ಕಿ: ಇಬ್ಬರ ಸಾವು
ಬಾಗಲಕೋಟೆ ಜಿಲ್ಲೆಯ ಬೀಳಗಿ ಅನಗವಾಡಿ ಬ್ರಿಡ್ಜ್ ಬಳಿ ಕಾರು ಮತ್ತು ಟಂಟಂ ವಾಹನ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಹೇಶ್ ನಾಯ್ಕರ್ (27) ಮತ್ತು ಮೆಹಬೂಬ್ ಶೇಖ್ (30) ಮೃತಪಟ್ಟವರು. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲಾದಗಿ ಪೊಲೀಸರು
ವರ್ಕ್‌ಫ್ರಮ್ ಹೋಂ ಜಾಹೀರಾತು ನಂಬಿ: ಹಣ ಕಳೆದುಕೊಂಡ ಮಹಿಳೆ
ಆನ್‌ಲೈನ್‌ನಲ್ಲಿ ವರ್ಕ್‌ಫ್ರಮ್ ಹೋಂ ಕುರಿತಾದ ಜಾಹೀರಾತು ನಂಬಿ ಚಿಕ್ಕಮಗಳೂರಿನ ಮಹಿಳೆಯೊಬ್ಬರು 2,57,600 ರೂ. ಕಳೆದುಕೊಂಡಿದ್ದಾರೆ. ಸೈಬರ್ ವಂಚಕರು ಟೆಲಿಗ್ರಾಂ ಆ್ಯಪ್ ಮೂಲಕ ‘ವರ್ಕ್‌ಫ್ರಮ್ ಹೋಂ ಮಾಡಲು ಇಚ್ಛಿಸುವವರು ಈ ಲಿಂಕ್ ಕ್ಲಿಕ್ ಮಾಡಿ’ ಎಂದು ಜಾಹೀರಾತು ಕಳುಹಿಸಿದ್ದರು. ಮಹಿಳೆ ಲಿಂಕ್ ಕ್ಲಿಕ್
ವೇಶ್ಯವಾಟಿಕೆಗೆ ಅಪ್ರಾಪ್ತ ವಯಸ್ಕ ಬಾಲಕಿಯರು: ಆರೋಪಿಗಳಿಬ್ಬರು ಅರೆಸ್ಟ್
ಮೈಸೂರಿನಲ್ಲಿ ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ಬಳಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆಗಷ್ಟೇ ಋತುಮತಿಯಾದ ಬಾಲಕಿಯರನ್ನು ತೋರಿಸಿ ಗ್ರಾಹಕರನ್ನು ಸೆಳೆಯುತ್ತಿದ್ದ ಶೋಭಾ ಹಾಗೂ ತುಳಸಿಕುಮಾರ್ ಬಂಧಿತ ಆರೋಪಿಗಳು. ಆರೋಪಿಗಳು ವಾಟ್ಸಾಪ್ ಮೂಲಕ ಬಾಲಕಿಯರ ವೀಡಿಯೊವನ್ನು ಗ್ರಾಹಕರಿಗೆ ತೋರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯದಲ್ಲಿ ಇಂದಿನಿಂದ ಭಾರಿ ಗಾಳಿ ಮಳೆ, ಕರಾವಳಿಯಲ್ಲಿ ಚಂಡಮಾರುತ ಸಾಧ್ಯತೆ
ಕರ್ನಾಟಕದಲ್ಲಿ ಇಂದಿನಿಂದ ಭಾರಿ ಪ್ರಮಾಣದ ಮಳೆಯೊಂದಿಗೆ ಬಿರುಸಾದ ಗಾಳಿ ಬೀಸಲಿದೆ. ಮಂಗಳೂರು, ಬೆಳಗಾವಿ, ಕಲಬುರಗಿ, ಬಾಗಲಕೋಟೆ, ಶಿವಮೊಗ್ಗ, ಉಡುಪಿ, ಯಾದಗಿರಿ, ವಿಜಯಪುರ, ಬೀದರ್ ಜಿಲ್ಲೆಗಳಲ್ಲಿ ತೀವ್ರ ಮಳೆಯಾಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಕರ್ನಾಟಕದಲ್ಲಿ ಇಂದು ಭಾರಿ ಮಳೆ




