Featured
ಕೊಪ್ಪಳ ನಗರಸಭೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮನೆಗಳಿಗೆ ಲೋಕಾಯುಕ್ತ ದಾಳಿ
ಕೊಪ್ಪಳ ಲೋಕಾಯುಕ್ತ ಉಪ ಪೊಲೀಸ್ ಅಧೀಕ್ಷಕ ವಸಂತಕುಮಾರ್ ನೇತೃತ್ವದಲ್ಲಿ ನಗರಸಭೆಯ ಕಚೇರಿ, ಉನ್ನತ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮನೆಗಳ ಮೇಲೆ ದಾಳಿ ನಡೆದಿದೆ. ನಗರಸಭೆ ಕಚೇರಿಯ ಅನುದಾನದ ದಾಖಲೆಗಳು, ಕಾಮಗಾರಿಗಳ ವಿವರಗಳು ಮತ್ತು ಇತರ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಿದೆ. ನಗರಸಭೆಯ ಜೂನಿಯರ್ ಇಂಜಿನಿಯರ್ ಸೋಮಲಿಂಗಪ್ಪ, ಕಂದಾಯ ಅಧಿಕಾರಿ ಉಜ್ಜಲ್, ಗುತ್ತಿಗೆದಾರರಾದ ಶಕೀಲ್ ಪಟೇಲ್ ಮತ್ತು ಪ್ರವೀಣ್ ಕಂದಾರಿ ಅವರ ಮನೆಗಳ ಮೇಲೂ ದಲೋಕಾಯುಕ್ತ ದಾಳಿಯಾಗಿದೆ. ಇವರೆಲ್ಲ 2023-24ನೇ ಸಾಲಿನ
ಪಾಲಿಕೆಯೇ ಪಾಪರ್ ಆಗಿರುವಾಗ ಹೊಸದಾಗಿ ಇಂಜಿನಿಯರ್ಗಳನ್ನು ಹೇಗೆ ನೇಮಿಸುತ್ತಾರೆ: ಆರ್.ಅಶೋಕ
ಕಾಂಗ್ರೆಸ್ ಬಂದ ನಂತರ ಪಾಲಿಕೆಯನ್ನು ಐದು ಹೋಳು ಮಾಡಲಾಗಿದೆ. 198 ವಾರ್ಡ್ಗೆ 90% ನಷ್ಟು ಇಂಜಿನಿಯರ್ ಇಲ್ಲ. ಪಾಲಿಕೆಯೇ ಪಾಪರ್ ಆಗಿರುವ ಸಮಯದಲ್ಲಿ ಹೊಸದಾಗಿ ಇಂಜಿನಿಯರ್ಗಳನ್ನು ಹೇಗೆ ನೇಮಿಸುತ್ತಾರೆ? ಒಂದು ಸಾವಿರಕ್ಕೂ ಅಧಿಕ ನೇಮಕಾತಿ ಮಾಡಿದರೆ ಹಣ ಎಲ್ಲಿಂದ ತರುತ್ತಾರೆ? ಬಹಳ
ಬೀದರ್ನಲ್ಲಿ ಮಹಡಿಯಿಂದ ಮಗುವನ್ನು ತಳ್ಳಿ ಕೊಂದ ಮಲತಾಯಿ
ಬೀದರ್ ನಗರದ ಆದರ್ಶ ಕಾಲೋನಿಯಲ್ಲಿ ಮೂರನೇ ಮಹಡಿಯಿಂದ ಏಳು ವರ್ಷದ ಮಗುವನ್ನು ತಳ್ಳಿ ಮಲತಾಯಿ ಕೊಂದಿರುವ ಘಟನೆ ಇತ್ತೀಚೆಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಾನವಿ ಮೃತ ಬಾಲಕಿ. ಆಗಸ್ಟ್ 27ರಂದು ಘಟನೆ ನಡೆದಿದ್ದು, ಶಾನವಿ ಮಹಡಿಯಿಂದ ಆಯತಪ್ಪಿ ಬಿದ್ದು ಮೃತಪಟ್ಟಿರುವುದಾಗಿ
ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಎಸ್ಐಟಿಗೆ ಹೈಕೋರ್ಟ್ ನೋಟಿಸ್
ಧರ್ಮಸ್ಥಳ ಪರಿಸರದಲ್ಲಿ ಶವಗಳ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶವ ಹೂತ ಜಾಗ ಗುರುತಿಸಲು ಹಾಗೂ ಉತ್ಖನನ ನಡೆಸಲು ಇಬ್ಬರು ಸ್ಥಳೀಯರು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಸಮ್ಮತಿಸಿದೆ. ನ್ಯಾಯಮೂರ್ತಿ ನಾಗಪ್ರಸನ್ನ ಪೀಠ ರಿಟ್ ಅರ್ಜಿಯನ್ನು ಕೈಗೆತ್ತಿಕೊಂಡು ಎಸ್ಐಟಿಗೆ
ರಾಜಕೀಯವಾಗಿ ಬದುಕಿದ್ದೇನೆ ಎಂದು ತೋರಿಸಿಕೊಳ್ಳುವ ಪ್ರಯತ್ನದಲ್ಲಿ ಪ್ರತಾಪ್ ಸಿಂಹ: ಡಿಕೆ ಶಿವಕುಮಾರ್
“ಪ್ರತಾಪ್ ಸಿಂಹರಿಗೆ ಅವರ ಪಕ್ಷದಲ್ಲಿ ಟಿಕೆಟ್ ಕೊಟ್ಟಿಲ್ಲ. ಹೀಗಾಗಿ ತಾನು ರಾಜಕೀಯವಾಗಿ ಬದುಕಿದ್ದೇನೆ ಎಂದು ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದವರು, ನಾಡಹಬ್ಬ ದಸರಾ ಉದ್ಘಾಟನೆಗೆ
ನೂತನವಾಗಿ ನಗರ ವಿನ್ಯಾಸ ಕಾಲೇಜು ಪ್ರಾರಂಭಕ್ಕೆ ಚಿಂತನೆ: ಡಿಸಿಎಂ
“ಕೆಂಪೇಗೌಡರು ಕಟ್ಟಿದ ಈ ಬೆಂಗಳೂರಿನಲ್ಲಿ ನೂತನವಾಗಿ ನಗರ ವಿನ್ಯಾಸ (ಟೌನ್ ಪ್ಲಾನಿಂಗ್) ಕಾಲೇಜು ಪ್ರಾರಂಭ ಮಾಡಬೇಕು ಎನ್ನುವ ಆಲೋಚನೆ ಮಾಡಲಾಗಿದೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ದಿ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ವತಿಯಿಂದ ನಡೆದ 58ನೇ ಅಭಿಯಂತರ ದಿನ
ಯು ಟ್ಯೂಬ್ ಚಾನಲ್ಗಳಿಗೆ ಪರವಾನಗಿ ನಿಗದಿ ಪರಿಶೀಲನೆ: ಸಿಎಂ ಸಿದ್ದರಾಮಯ್ಯ
ಯು ಟ್ಯೂಬ್ ಚಾನಲ್ ಗಳ ಹಾವಳಿ ತಡೆಯಲು ಲೈಸೆನ್ಸ್ ಕಡ್ಡಾಯಗೊಳಿಸಬೇಕು ಎಂಬ ಬೇಡಿಕೆ ಬಗ್ಗೆ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟಿಸಿ, ಲೋಗೋ ಬಿಡುಗಡೆ ಮಾಡಿ ಮಾತನಾಡಿದರು. ಮೊದಲು ನೀವೆಲ್ಲಾ ಊಹಾ ಪತ್ರಿಕೋದ್ಯಮವನ್ನು
ನೇಪಾಳದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಶಪಥ ಮಾಡಿದ ಸುಶೀಲಾ ಕರ್ಕಿ
ನೇಪಾಳವನ್ನು ಪೀಡಿಸಿರುವ ಮಹಾಭ್ರಷ್ಟಾಚಾರವನ್ನು ನೂತನ ಪ್ರಧಾನಿ ಕರ್ಕಿ ಅವರು ಬಹುಶೀಘ್ರವಾಗಿ ನಿರ್ಮೂಲನೆ ಮಾಡುವುದಾಗಿ ಶಪಥ ತೊಟ್ಟಿದ್ದಾರೆ. ಅವರ ಪ್ರಜಾ ನ್ಯಾಯ ಕಾಪಾಡುವ ಮತ್ತು ದೇಶದ ಕ್ಷೇಮವನ್ನು ಕಾಪಾಡುವ ಶಪಥ ಈಡೇರಲಿ ಎಂಬುದೇ ಭಾರತದ ಆಶಯ. ಭಾರತದ ನೆರೆಯ ದೇಶದಲ್ಲೀಗ ಪ್ರಜಾತಂತ್ರದ ಮರುಸ್ಥಾಪನೆ.
ಯುವ ಜನರಲ್ಲಿ ನಾಯಕತ್ವ ಗುಣ ಬೆಳೆಸಲು ‘ನನ್ನ ಮತ ನನ್ನ ಹಕ್ಕು’ ಕಾರ್ಯಕ್ರಮ: ಡಿಸಿಎಂ
“ವಿದ್ಯಾರ್ಥಿ, ಯುವ ಜನರಲ್ಲಿ ನಾಯಕತ್ವ ಗುಣವನ್ನು ಬೆಳೆಸಬೇಕಿದೆ. ಮತದಾನ, ಪ್ರಜಾಪ್ರಭುತ್ವದ ಮೌಲ್ಯವನ್ನು ಅರಿತುಕೊಳ್ಳಲು ‘ನನ್ನ ಮತ, ನನ್ನ ಹಕ್ಕು’ ಕಾರ್ಯಕ್ರಮ ರೂಪಿಸಲಾಗಿದೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ವಿಧಾನಸೌಧದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೇಪಾಳದಲ್ಲಿ ಸುಶೀಲಾ ಕರ್ಕಿ ಮೇಲೂ Gen-Z ಕೆಂಗಣ್ಣು
ನೇಪಾಳದಲ್ಲಿ Gen-Z ಆಕ್ರೋಶ, ಹಿಂಸಾಚಾರ, ಕೆಪಿ ಒಲಿ ಶರ್ಮಾ ಪದಚ್ಯುತಿ ಬಳಿಕ ಪ್ರತಿಭಟನೆ ಕೊನೆಗೊಂಡ ನಂತರ ಸುಶೀಲಾ ಕರ್ಕಿ ಅವರನ್ನು ಚುನಾಯಿತ ನಾಯಕಿಯಾಗಿ ಆಯ್ಕೆ ಮಾಡಿದ್ದಲ್ಲದೆ, ಭಾನುವಾರ ಅವರು ಮಧ್ಯಂತರ ಪ್ರಧಾನಿಯಾಗಿ ಅಧಿಕಾರ ಕೂಡ ವಹಿಸಿಕೊಂಡರು. ಆದರೆ ಸುಶೀಲಾ ಕರ್ಕಿ ಅಧಿಕಾರ