Menu

ಎಲ್ಲರೂ ಒಟ್ಟಾಗಿ 2028 ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರೋಣ: ಸಿಎಂ ಶಿವಕುಮಾರ್

“ಪಕ್ಷಬೇಧ ಮರೆತು ಎಲ್ಲರನ್ನೂ ಒಟ್ಟಿಗೇ ಕರೆದುಕೊಂಡು ಹೋಗಿ. 2028 ರ ವಿಧಾನಸಭೆ ಚುನಾವಣೆ ಗೆಲ್ಲುವುದು ನಿಮ್ಮ ಗುರಿಯಾಗಿರಲಿ” ಎಂದು ಸಿಎಂ ಡಿ ಕೆ ಶಿವಕುಮಾರ್  ಹೇಳಿದ್ದಾರೆ.

ಮಾಜಿ ಶಾಸಕ ಮಂಜುನಾಥ್ ಹಾಗೂ ಮೈಸೂರು ಮುಖಂಡ, ವಕ್ತಾರ ಲಕ್ಷ್ಮಣ್ ಅವರ ನೇತೃತ್ವದಲ್ಲಿ ಹುಣಸೂರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಕುಮಾರಪಾರ್ಕ್ ಸರಕಾರಿ ಅತಿಥಿ ಗೃಹದಲ್ಲಿ ತಮ್ಮನ್ನು ಅಭಿನಂದಿಸಿದ ಸಂದರ್ಭದಲ್ಲಿ ಶಿವಕುಮಾರ್ ಮಾತನಾಡಿದರು.

ಹಿಂದೆ ಆಗಿದ್ದು, ದ್ವೇಷ, ಅಸೂಯೆ, ಪ್ರತೀಕಾರ ಎಂಬುದನ್ನು ಮರೆಯಿರಿ. ಕೆಲವೊಮ್ಮೆ ತಪ್ಪು ಮಾಹಿತಿ, ಅಭಿಪ್ರಾಯಗಳಿಂದ ಯಡವಟ್ಟು ಆಗಿರಬಹುದು. ಆದರೆ ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಭವಿಷ್ಯದ ಗುರಿ ಮರೆಯಬೇಡಿ ಎಂದರು.

ಇವತ್ತು ಬಂದಿರುವ ಸಿಎಂ ಹುದ್ದೆ ನನ್ನದಲ್ಲ. ನಿಮ್ಮದು, ರಾಜ್ಯದ ಜನರದು. ನೀವು ಇಲ್ಲ ಅಂದ್ರೆ ನಾನು ಇಲ್ಲ. ನನಗೆ ಬಂದಿರುವ ಈ ಹುದ್ದೆ ಹಿಂದೆ ನಿಮ್ಮ ಪರಿಶ್ರಮ, ಪ್ರೀತಿ, ವಿಶ್ವಾಸ, ಹೋರಾಟ ಕೆಲಸ ಮಾಡಿದೆ. ನಿಮ್ಮ ಸಹಕಾರವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.

ಈಗ ಯಾವುದೇ ಕಾರಣಕ್ಕೂ ಮೈ ಮರೆಯಬೇಡಿ. ಎಸ್ ಐ ಆರ್ ಸಂಚಿಗೆ ನಿಮ್ಮ ಮತ ಬಲಿ ಆಗಲು ಬಿಡಬೇಡಿ. ಎಚ್ಚರಿಕೆಯಿಂದ ಇರಿ. ನಿಮ್ಮ ಮತಗಳನ್ನು ಕಾಪಾಡಿಕೊಳ್ಳಿ ಎಂದರು.

Related Posts

Leave a Reply

Your email address will not be published. Required fields are marked *