ಜಿಲ್ಲಾ ಸುದ್ದಿ
ಸಂಸದ ಬಿವೈ ರಾಘವೇಂದ್ರ ಕಾರಿಗೆ ಡಿಕ್ಕಿ ಹೊಡೆದ ಮೊತ್ತೊಂದು ಕಾರು
ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಅವರ ಕಾರಿಗೆ ಮತ್ತೊಂದು ಕಾರು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ. ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಕುಂಚೇನಹಳ್ಳಿ ಗ್ರಾಮದ ಸಮೀಪ ಸಂಸದರ ಕಾರು ಚಲಿಸುತ್ತಿದ್ದಾಗ ಹಿಂದಿನಿಂದ ಬಂದ ಬೊಲೇರೊ ಕಾರು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರುಗಳಿಗೆ ಹಾನಿಯಾಗಿದೆ. ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಕಾರಿನಲ್ಲಿದ್ದ ಸಂಸದರ ಕಚೇರಿ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ. ಅಪಾಯದಿಂದ ಪಾರಾದ ಸಂಸದರು ಎಸ್ಕಾರ್ಟ್
ತರೀಕೆರೆಯಲ್ಲಿ ಮದುವೆಗೆ ಮೊದಲೇ ತಾಯಿಯಾದ ಮೊಮ್ಮಗಳು: ಹುಟ್ಟಿದ ಕೂಡಲೇ ಮಗು ಸಾಯಿಸಿದ ಅಜ್ಜಿ
ಚಿಕ್ಕಮಗಳೂರು ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ಮದುವೆಗೆ ಮೊದಲೇ ಮೊಮ್ಮಗಳಿಗೆ ಹುಟ್ಟಿದ ಗಂಡು ಮಗುವನ್ನು ಜನಿಸಿದ ಒಂದೇ ನಿಮಿಷಕ್ಕೆ ಅಜ್ಜಿ ಕತ್ತು ಹಿಚುಕಿ ಸಾಯಿಸಿರುವ ಘಟನೆ ಬಹಿರಂಗಗೊಂಡಿದೆ. ಮದುವೆಯಾಗದ ಮೊಮ್ಮಗಳು ಮಗುವಿಗೆ ಜನ್ಮ ನೀಡಿರುವುದು ಹೊರಗೆ ತಿಳಿದರೆ ಕುಟುಂಬದ ಮರ್ಯಾದೆ ಹೋಗುವುದೆಂಬ ಭಯಕ್ಕೆ
ಎಳನೀರಿಗಾಗಿ ಸ್ನೇಹಿತನ ಮರಹತ್ತಿಸಿ ಬಿದ್ದು ಮೂಳೆ ಮುರಿದಾಗ ಕೆರೆಯಲ್ಲಿ ಮುಳುಗಿಸಿ ಕೊಂದರು
ಮದ್ಯಕ್ಕೆ ಬೆರೆಸಲು ಎಳನೀರಿಗಾಗಿ ಸ್ನೇಹಿತನನ್ನು ತೆಂಗಿನ ಮರ ಹತ್ತಿಸಿ ಆತ ಬಿದ್ದು ಬೆನ್ನು ಮೂಳೆಗೆ ಗಂಭೀರ ಏಟಾದ ಬಳಿಕ ಚಿಕಿತ್ಸೆಗೆ ಲಕ್ಷಗಟ್ಟಲೆ ಖರ್ಚು ಆಗುವುದೆಂದು ಕೆರೆಯಲ್ಲಿ ಮುಳುಗಿಸಿ ಕೊಲೆಗೈದು ಎಸೆದಿರುವ ಭಯಾನಕ ಘಟನೆಯೊಂದು ಮಾಗಡಿಯಲ್ಲಿ ನಡೆದಿದೆ. ರಾಮನಗರದ ಮಾಗಡಿ ತಾಲೂಕಿನ ವಾಜರಹಳ್ಳಿ
ಹರತಾಳು ಗ್ರಾಮದಲ್ಲಿ ವಿಜಯನಗರ ಕಾಲದ ಗರುಡ ಶಿಲ್ಪದ ಮಾಸ್ತಿಕಲ್ಲು ಪತ್ತೆ
ಶಿವಮೊಗ್ಗ ದ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಹರತಾಳು ಗ್ರಾಮದ ಶಶಿಧರ ಭಟ್ಟರ ತೋಟದಲ್ಲಿ ಅಪರೂಪದ ಗರುಡ ಶಿಲ್ಪ ಹೊಂದಿರುವ ಮಾಸ್ತಿಕಲ್ಲು ಪತ್ತೆಯಾಗಿದೆ. ವಿಜಯನಗರ ಕಾಲಘಟ್ಟಕ್ಕೆ ಸೇರಿದ ಈ ಶಾಸನವು ಇತಿಹಾಸ ಹಾಗೂ ಪುರಾತತ್ವದ ದೃಷ್ಟಿಯಿಂದ ಮಹತ್ವ ಪಡೆದಿದೆ. ಈ ಮಾಸ್ತಿಕಲ್ಲು
ಶ್ರೀ ಮಾದಾರ ಚನ್ನಯ್ಯ ಗುರುಪೀಠ ಆವರಣದಲ್ಲಿ ಶ್ರೀ ಮಾತಂಗೇಶ್ವರಿ ದೇಗುಲಕ್ಕೆ ಭೂಮಿ ಪೂಜೆ
ಚಿತ್ರದುರ್ಗನಗರ ಹೊರವಲಯದ ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಆವರಣದಲ್ಲಿ 4 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುವ ಆದಿಶಕ್ತಿ ಶ್ರೀ ಮಾತಂಗೇಶ್ವರಿ ದೇಗುಲದ ಭೂಮಿ ಪೂಜೆಯನ್ನು ಸಂಸದರಾದ ಮೈಸೂರಿನ ಯದುವೀರ ಕೃಷ್ಣದತ್ತ ಒಡೆಯರ್ ನೆರವೇರಿಸಿದರು. ಬಳಿಕ ಮಾತನಾಡಿದ ಯದುವೀರ್, ಮಠದ ಆಶ್ರಯದಲ್ಲಿ ದೇವಾಲಯ ನಿರ್ಮಾಣ ಮಾಡುತ್ತಿರುವುದು
ಕೊಪ್ಪಳದಲ್ಲಿ 27 ವರ್ಷಗಳಿಂದ ಅತಿ ಕಡಿಮೆ ದರದಲ್ಲಿ ಶ್ರಮಿಕರ ಹೊಟ್ಟೆ ತುಂಬಿಸುವ ರವಿ ಹೋಟೆಲ್
-ಬಸವರಾಜ ಕರುಗಲ್ ಇಪ್ಪತ್ತು ರೂಪಾಯಿ ಕೊಟ್ಟರೂ ಒಂದು ಕಪ್ ಚಹಾ ದೊರಕದ ಕಾಲವಿದು. ಸಾಮಾನ್ಯ ಹೊಟೇಲ್‌ಗೆ ಹೊಕ್ಕರೆ ಒಬ್ಬರಿಗೆ ಕನಿಷ್ಠವೆಂದರೂ ನೂರು ರೂಪಾಯಿ ಬಿಲ್ ಆಗುವ ಈ ದಿನಗಳಲ್ಲಿ ಹತ್ತು ರೂಪಾಯಿಗೆ ಹೊಟ್ಟೆ ತುಂಬುವಷ್ಟು ಉಪಹಾರ ಕೊಪ್ಪಳದಲ್ಲಿರುವ ಈ ರವಿ
ಭದ್ರಾ ಜಲಾಶಯದಿಂದ ತುಂಗ-ಭದ್ರಾ ನದಿಗೆ ನೀರು: ಸಾರ್ವಜನಿಕರಿಗೆ ಎಚ್ಚರಿಕೆ
ವಿಜಯನಗರದ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ವಾರ್ಷಿಕ ಕಾರ್ಣಿಕೋತ್ಸವ ಪ್ರಯುಕ್ತ ಜ.20 ರಿಂದ ಜ. 30ರವರೆಗೆ ಪ್ರತಿ ದಿನ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ 500 ಕ್ಯೂಸೆಕ್ ನಂತೆ ಒಟ್ಟು 0.50 ಟಿ.ಎಂ.ಸಿ ನೀರನ್ನು ಹರಿಸಲಾಗುವುದು. ಈ
ಮಾಲೂರಿನಲ್ಲಿ ಅಮಾವಾಸ್ಯೆ ಪೂಜೆ ಮುಗಿಸಿ ಬರುತ್ತಿದ್ದ ಮಾಟ-ಮಂತ್ರ ಪೂಜಾರಿಯ ಹತ್ಯೆ
ಮಾಲೂರಿನಲ್ಲಿ ಕಾಳಿ ದೇವಿಯ ಆರಾಧಿಸುತ್ತ ಜನರ ದೆವ್ವ, ಗಾಳಿ ಬಿಡಿಸುವ ಕೆಲಸ, ಮಾಟ-ಮಂತ್ರ ಮಾಡಿಕೊಂಡಿದ್ದ ಪೂಜಾರಿ ಸೋಮವಾರ ಪುಷ್ಯ ಅಮಾವಾಸ್ಯೆಯ ಪೂಜೆ ಮುಗಿಸಿಕೊಂಡು ಬರುವಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಹತ್ಯೆ ಮಾಡಿದ್ದಾರೆ. ಮಾಲೂರು ತಾಲೂಕಿನ ಹರಳೇರಿ ಬಳಿ ಘಟನೆ ನಡೆದಿದ್ದು, ಆಂಜಿ ಅಲಿಯಾಸ್
ಶಿವಮೊಗ್ಗ ಭದ್ರಾ ನಾಲೆಯಲ್ಲಿ ತಾಯಿ, ಮಗ, ಮಗಳು, ಅಳಿಯ ನೀರುಪಾಲು
ಶಿವಮೊಗ್ಗದ ಹೊಳೆಹೊನ್ನೂರು ಸಮೀಪದ ಅರಬಿಳಚಿ ಗ್ರಾಮದಲ್ಲಿ ಬಟ್ಟೆ ತೊಳೆಯಲೆಂದು ಭದ್ರಾ ನಾಲೆಗೆ ತೆರಳಿದ್ದ ಒಂದೇ ಕುಟುಂಬದ ನಾಲ್ವರು ಕಾಲು ಜಾರಿ ನೀರುಪಾಲಾಗಿದ್ದಾರೆ. ತಾಯಿ ಮತ್ತು ಮಗಳು ಮೊದಲು ನಾಲೆಗೆ ಬಿದ್ದಿದ್ದು, ಅವರನ್ನು ರಕ್ಷಿಸಲು ಹೋದ ಮಗ ಮತ್ತು ಅಳಿಯ ಕೂಡ ನೀರಿನಲ್ಲಿ
ಆನಗೋಡು ಮೃಗಾಲಯದಲ್ಲಿ ನಾಲ್ಕು ಜಿಂಕೆಗಳ ಸಾವು
ಆನಗೋಡು ಗ್ರಾಮದ ಬಳಿ ಇರುವ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ನಾಲ್ಕು ಚುಕ್ಕಿ ಜಿಂಕೆಗಳು ನಿಗೂಢವಾಗಿ ಮೃತಪಟ್ಟಿವೆ. ಮೂರು ದಿನಗಳಲ್ಲಿ ನಾಲ್ಕು ಚುಕ್ಕಿ ಜಿಂಕೆಗಳು ಮೃತಪಟ್ಟಿದ್ದು, ಮೃಗಾಯಲದಲ್ಲಿ ಹೆಮರಾಜಿಕ್ ಸೆಫ್ಟಿಸೆಮಿಯಾ ಎಂಬ ಸಾಂಕ್ರಾಮಿಕ ರೋಗ ಹರಡಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ. ಮೃಗಾಲಯದಲ್ಲಿ




