ಜಿಲ್ಲಾ ಸುದ್ದಿ
ಮಗುವಿನ ರೇಪ್ ಆರೋಪಿ ಕಾಲಿಗೆ ಪೊಲೀಸ್ ಗುಂಡೇಟು
ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಮಂಜುನಾಥ್ (26) ಮೇಲೆ ಬಳ್ಳಾರಿಯ ತೋರಣಗಲ್ ಪೊಲೀಸರು ಗುರುವಾರ ಬೆಳಗ್ಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿ ತಪ್ಪಿಸಲು ಯತ್ನಿಸಿದ್ದರಿಂದ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಮೂರು ದಿನದ ಹಿಂದೆ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ತನಿಖೆಗೆ ಪೊಲೀಸರು ತಂಡ ರಚಿಸಿ. ಕೊಪ್ಪಳದ ಹುಲಗಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ಪಂಚಾನಾಮೆಗೆ ಹೋದಾಗ ಆತ ಹೆಡ್ ಕಾನ್ಸ್ಟೇಬಲ್ ರಘುಪತಿ ಮೇಲೆ ಹಲ್ಲೆ
ತನ್ನದೇ ಗನ್‌ನಿಂದ ಆಕಸ್ಮಿಕವಾಗಿ ಹಾರಿದ ಗುಂಡಿಗೆ ವ್ಯಕ್ತಿ ಬಲಿ
ಮಡಿಕೇರಿ ತಾಲೂಕಿನ ಚೇರಂಬಾಣೆ ಗ್ರಾಮದಲ್ಲಿ ತನ್ನದೇ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಪೊನ್ನಚೆಟ್ಟಿರ ಮಿತ್ರ ಚಂಗಪ್ಪ (49) ಎಂದು ಗುರುತಿಸಲಾಗಿದೆ. ಬಂದೂಕು ಕೆಳಕ್ಕೆ ಬಿದ್ದು ಗುಂಡು ಹಾರಿರುವ ಶಂಕೆ ವ್ಯಕ್ತವಾಗಿದೆ. ಚಂಗಪ್ಪ ಅವರು ಚೇರಂಬಾಣೆ ಪಟ್ಟಣದಲ್ಲಿ
ಮುಡಾ ಅಕ್ರಮ ತನಿಖೆ ಸಿಬಿಐಗೆ ವಹಿಸಿ: ಅರ್ಜಿಯ ವಿಚಾರಣೆ ಜ.27ಕ್ಕೆ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನದಲ್ಲಿ ನಡೆದಿರುವ ಅಕ್ರಮ ನಿವೇಶನ ಹಂಚಿಕೆ ಹಗರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಜ.27ಕ್ಕೆ ಮುಂದೂಡಿದೆ. ಲೋಕಾಯುಕ್ತ ತನಿಖೆಯಿಂದ ಸತ್ಯ ಹೊರ ಬರುವುದಿಲ್ಲ, ಹೀಗಾಗಿ ತನಿಖೆಯನ್ನು
ಚಿಕ್ಕಮಗಳೂರಲ್ಲಿ ಮತ್ತೆ ಮಂಗನ ಕಾಯಿಲೆ ಭೀತಿ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಂಗನ ಕಾಯಿಲೆಯ ಭೀತಿ ಎದುರಾಗಿದ್ದು, ಆರೋಗ್ಯ ಇಲಾಖೆ ಅಲರ್ಟ್ ಘೋಷಿಸಿದೆ. ಹಗಲಲ್ಲಿ ರಣ ಬಿಸಿಲು, ಸಂಜೆಯಾಗುತ್ತಿದ್ದಂತೆ ಭಾರೀ ಚಳಿಯ ಹವಾಮಾನ ವೈಪರೀತ್ಯದಿಂದಲೂ ಜನರ ಆರೋಗ್ಯ ಹದಗೆಡುತ್ತಿರುವ ಮಧ್ಯೆ ಮಂಗನ ಕಾಯಿಲೆ ಜನರ ನಿದ್ದೆಗೆಡಿಸಿದೆ. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ
ಶ್ರೀನಿವಾಸಪುರದಲ್ಲಿ ರಮೇಶಕುಮಾರ್ ಅವರಿಂದ ಅರಣ್ಯ ಭೂಮಿ ಒತ್ತುವರಿ: ಜಂಟಿ ಸರ್ವೆ
ಎರಡು ದಶಕಗಳಿಂದ ವಿವಾದದ ಕೇಂದ್ರವಾಗಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅರಣ್ಯ ಭೂಮಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ (ಇಂದು) ಜಂಟಿ ಸರ್ವೆ ನಡೆಯಲಿದೆ. ಕಳೆದ ಎರಡು ತಿಂಗಳಲ್ಲಿ ಮೂರು ಬಾರಿ ಜಂಟಿ ಸರ್ವೆ ಕಾರ್ಯ ಮುಂದೂಡಲಾಗಿತ್ತು. ಇಂದು ಜಂಟಿ ಸರ್ವೆ
ಕುಕ್ಕೆ, ಧರ್ಮಸ್ಥಳಗಳಲ್ಲಿ ಉಚಿತ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾ.24ರಂದು ಸರಳ ಸಾಮೂಹಿಕ ವಿವಾಹ ನಡೆಯಲಿದೆ. ವಿವಾಹವಾಗಲು ಬಯಸುವವರು ದೇವಳದ ಕಚೇರಿಯಿಂದ ಅರ್ಜಿ ಫಾರಂ ಪಡೆದು ನಿಗದಿಪಡಿಸಿದ ದಾಖಲೆಗಳೊಂದಿಗೆ ಫೆ.20ರ ಒಳಗೆ ಸಲ್ಲಿಸಬಹುದು. ಮಾ.24 ರಂದು ಬೆಳಗ್ಗೆ 11.00 ರಿಂದ 12.00ರ ವರೆಗೆ ವೃಷಭ ಲಗ್ನದಲ್ಲಿ ವಿವಾಹ
ಕರ್ತವ್ಯನಿರತ ಯೋಧ ಬಾಗಲಕೋಟೆಯ ಚನ್ನಯ್ಯ ರೇಷ್ಮೆ ಹೃದಯಾಘಾತಕ್ಕೆ ಬಲಿ
ರಾಜಸ್ಥಾನದಲ್ಲಿ ಕರ್ತವ್ಯನಿರತರಾಗಿದ್ದ ಬಾಗಲಕೋಟೆಯ ಯೋಧ ಮಾಗೊಂಡಯ್ಯ ಚನ್ನಯ್ಯ ರೇಷ್ಮೆ (37) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದ ಯೋಧ ಕರ್ತವ್ಯದಲ್ಲಿ ಇದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಳೆದ 14 ವರ್ಷದಿಂದ ಇವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಬೆಳಗಾವಿ ಮರಾಠಾ ಇನ್‌ಫೆಂಟ್ರಿ
ಮದ್ಯ ಸೇವಿಸಿ ಬಟ್ಟೆ ಬಿಚ್ಚಿ ರಸ್ತೆಯಲ್ಲೇ ಶ್ರೀ ಶಾಂತಲಿಂಗ ಶಿವಾಚಾರ್ಯರ ರಂಪಾಟ
ಅಫಜಲ್ಪುರ ತಾಲೂಕಿನ ಉಡಚಾಣ ಗ್ರಾಮದ ಶ್ರೀ ಶಾಂತಲಿಂಗ ಶಿವಾಚಾರ್ಯರು ಸಾರಾಯಿ ಕುಡಿದು ರಸ್ತೆಯಲ್ಲೇ ರಂಪಾಟ ಮಾಡಿದ್ದು, ಈ ನಡವಳಿಕೆಗಳಿಗೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡಚಾಣ ಗ್ರಾಮದ ಶ್ರೀ ಶಂಕರಲಿಂಗೇಶ್ವರ ಸಂಸ್ಥಾನ ಹಿರೇಮಠದ ಮಠಾಧಿಪತಿ ಶ್ರೀ ಶಾಂತಲಿಂಗ ಶಿವಾಚಾರ್ಯರು ಇತ್ತೀಚೆಗೆ ಇಂಡಿ ತಾಲೂಕಿನ
ಪತ್ನಿಯ ಕಿರುಕುಳಕ್ಕೆ ಬೇಸತ್ತು ಗಂಡ ಆತ್ಮಹತ್ಯೆ
ಧಾರವಾಡದ ಬೇಲೂರು ಗ್ರಾಮದಲ್ಲಿ ಪತ್ನಿಯ ಕಿರುಕುಳದಿಂದ ಬೇಸತ್ತು ಗಂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಶಿವರಾಜ್ ಎತ್ತಿನಗುಡ್ಡ (35) ಆತ್ಮಹತ್ಯೆ ಮಾಡಿಕೊಂಡವರು. ಶಿವರಾಜ್ ಎತ್ತಿನಗುಡ್ಡ ಕಳೆದ ನವೆಂಬರ್ ನಲ್ಲಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಪೊಲೀಸರು ಅಸಹಜ ಸಾವು ಎಂದು ಪ್ರಕರಣ
4 ಮಕ್ಕಳನ್ನು ಕಾಲುವೆಗೆ ಎಸೆದು ಕೊಂದ ತಾಯಿ: ತಾಯಿ ರಕ್ಷಣೆ
ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೆನಾಳ ಗ್ರಾಮದ ಆಲಮಟ್ಟಿ ಎಡದಂತೆ ಕಾಲುವೆ ಮೇಲೆ ಈ ಘಟನೆ ನಡೆದಿದೆ. 13 ತಿಂಗಳ ಮಗು, 5 ವರ್ಷದ ತನು,