ಜಿಲ್ಲಾ ಸುದ್ದಿ
ಆಕಸ್ಮಿಕವಾಗಿ ಗುಂಡು ಹಾರಿ ಬೆಳಗಾವಿಯ ಯೋಧ ಸಾವು
ಕರ್ತವ್ಯದ ವೇಳೆ ಆಕಸ್ಮಿಕವಾಗಿ ಗುಂಡು ಹಾರಿ ನೌಕಾಪಡೆಯ ಯೋಧರೊಬ್ಬರು ಚೆನ್ನೈನಲ್ಲಿ ಮೃತಪಟ್ಟಿದ್ದಾರೆ. ಮೃತ ಯೋಧನನ್ನು ಬೆಳಗಾವಿ ಜಿಲ್ಲೆಯ ಮೂಡಲಗಿಯ ಕಲ್ಲೋಳಿ ಗ್ರಾಮದ ಪ್ರವೀಣ್ ಸುಭಾಷ್ ಖಾನಗೌಡರ ಎಂದು ಗುರುತಿಸಲಾಗಿದೆ. ಅವರು ಚೆನ್ನೈನ ನೌಕಾನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಬಂದೂಕಿನಿಂದ ಆಕಸ್ಮಿಕವಾಗಿ ಸಿಡಿದು ಅವರ ತಲೆಗೆ ತಗುಲಿ ಅಸು ನೀಗಿದ್ದಾರೆ. ಸಾಯುವುದಕ್ಕೂ ಒಂದು ಗಂಟೆ ಮೊದಲು ತಾಯಿಯ ಜೊತೆ ಅವರು ಮಾತನಾಡಿದ್ದರು. 2020ರಲ್ಲಿ ಪ್ರವೀಣ್ ಸುಭಾಷ್ ಖಾನಗೌಡರ ನೌಕಾಪಡೆಗೆ ಸೇರಿದ್ದರು. ಸೇವೆಗೆ ಸೇರಿದ್ದ
ತುಮಕೂರು ಖಾಸಗಿ ಆಸ್ಪತ್ರೆಯಲ್ಲಿ ಬಾಣಂತಿ ಸಾವು: ಶವವಿಟ್ಟು ಕುಟುಂಬದ ಪ್ರತಿಭಟನೆ
ತುಮಕೂರಿನ ಚಿಕ್ಕನಾಯಕನಹಳ್ಳಿ ಪಟ್ಟಣದ ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ 2 ತಿಂಗಳ ಬಾಣಂತಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಸಂಬಂಧಿಕರು ತಡರಾತ್ರಿ ಆಸ್ಪತ್ರೆ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದರು. ಕುದ್ದೂರು ಗ್ರಾಮದ ದೀಪಕ್ ಎಂಬವರ ಪತ್ನಿ ಸಿಂಧು (28) ಹೊಟ್ಟೆ ನೋವಿಗೆ ಚಿಕಿತ್ಸೆ
ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ ಇನ್ನಿಲ್ಲ
ಪದ್ಮಶ್ರೀ ಪುರಸ್ಕೃತೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಡಗೇರಿ ಗ್ರಾಮದ ಸುಕ್ರಿ ಬೊಮ್ಮ ಗೌಡ (88) ನಿಧನರಾಗಿದ್ದಾರೆ. ಸುಕ್ರಜ್ಜಿ ಎಂದೇ ಅವರು ಜನಪ್ರಿಯರಾಗಿದ್ದರು. 5000 ಕ್ಕೂ ಹೆಚ್ಚು ಹಾಲಕ್ಕಿ ಹಾಡು ಕಂಠಪಾಠ ಮಾಡಿಕೊಂಡಿದ್ದ ಅವರು ಹಾಲಕ್ಕಿ ಹಾಡುಗಳ ಕೋಗಿಲೆ ಎಂದು
ಅಪಘಾತದಲ್ಲಿ ಗಾಯಗೊಂಡಿದ್ದ ಮಂತ್ರಾಲಯ ಮಠದ ವಿದ್ಯಾರ್ಥಿ ಸಾವು
ಕಳೆದ ತಿಂಗಳು ಸಿಂಧನೂರು ಬಳಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಮಂತ್ರಾಲಯರಾಯರ ಮಠದ ಸಂಸ್ಕೃತ ವಿದ್ಯಾರ್ಥಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾನೆ. ಜಯಸಿಂಹ (23) ಮೃತ ವಿದ್ಯಾರ್ಥಿ. ಸಿಂಧನೂರಿನಲ್ಲಿ ನಡೆದ ಅಪಘಾತದಲ್ಲಿ ಜಯಸಿಂಹನ ತಲೆ, ಬೆನ್ನು, ಶಾಸ್ವಕೋಶ ಸೇರಿ ದೇಹದ ಹಲವೆಡೆ
ಮೈಸೂರು ಗಲಭೆ: ಪೊಲೀಸರ ಸಮಯಪ್ರಜ್ಞೆಗೆ ಡಿಕೆ ಶಿವಕುಮಾರ್ ಅಭಿನಂದನೆ
ಮೈಸೂರು: ಮೈಸೂರಿನ ಉದಯಗಿರಿ ಗಲಭೆ ಪ್ರಕರಣದಲ್ಲಿ ಪೊಲೀಸರ ಸಮಯ ಪ್ರಜ್ಞೆಯ ಕಾರ್ಯವೈಖರಿಗೆ ಅಭಿನಂದನೆ ಸಲ್ಲಿಸುವುದಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ಉದಯಗಿರಿ ಪೊಲೀಸ್ ಠಾಣೆಯ ಕಲ್ಲು ತೂರಾಟ ವಿಚಾರದಲ್ಲಿ ಯಾರೇ ತಪ್ಪು ಮಾಡಿದ್ದರು ಕಠಿಣ ಕ್ರಮ ಆಗುತ್ತದೆ.
ಶೀಘ್ರದಲ್ಲೇ ಕೆಪಿಸಿಸಿ ಅಧ್ಯಕ್ಷರ ನೇಮಕ: ಮಲ್ಲಿಕಾರ್ಜುನ ಖರ್ಗೆ ಸುಳಿವು
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಶೀಘ್ರದಲ್ಲೇ ನಡೆಯಲಿದೆ ಎಂಬ ಸುಳಿವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ್ದಾರೆ. ಕಲಬುಗರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ೮ ದಿನದಲ್ಲಿ ಎಲ್ಲವೂ ಪೂರ್ಣಗೊಳ್ಳಲಿದೆ ಎಂದರು. ಈಗಾಗಲೇ ಒಡಿಶಾದಲ್ಲಿ
ಭೀಮಾ ತೀರದ ಹಂತಕ ಬಾಗಪ್ಪನ ಕೊಚ್ಚಿ ಹಾಕಿದ ಗ್ಯಾಂಗ್
ವಿಜಯಪುರ ನಗರದ ರೇಡಿಯೋ ಕೇಂದ್ರದ ಬಳಿ ಭೀಮಾತೀರದ ಹಂತಕ, ನಟೋರಿಯಸ್ ಎಂದೇ ಕುಖ್ಯಾತಿ ಪಡೆದಿರುವ ಬಾಗಪ್ಪ ಹರಿಜನ್‌ನನ್ನು ಗುಂಪೊಂದು ಬರ್ಬರವಾಗಿ ಕೊಚ್ಚಿ ಹಾಕಿದೆ. ಮಾರಾಕಾಸ್ತ್ರಗಳನ್ನು ಹಿಡಿದು ಬಂದಿದ್ದ ದುಷ್ಕರ್ಮಿಗಳು ಮುಖ, ತಲೆ ಮಾರ್ಮಾಂಗ ಸೇರಿದಂತೆ ಮನಬಂದಂತೆ ಕೊಚ್ಚಿ ಹಾಕಿ ಪರಾರಿಯಾಗಿದ್ದಾರೆ. ಭೀಮಾತೀರದ
ಜ್ಯೋತಿಷಿ ಹೇಳಿದನೆಂದು ನಿಧಿಗಾಗಿ ಕಾರ್ಮಿಕನ ಹತ್ಯೆಗೈದು ಬಲಿ
ನಿಧಿ ಪಡೆಯಬೇಕೆಂಬ ದುರಾಸೆಯಿಂದ ಜ್ಯೋತಿಷಿ ಹೇಳಿದ ಮಾತು ನಂಬಿ ವ್ಯಕ್ತಿಯೊಬ್ಬ ಚಪ್ಪಲಿ ಹೊಲೆಯುವ ಕಾರ್ಮಿಕನನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಪರಶುರಾಂಪುರದಲ್ಲಿ ನಡೆದಿದೆ. ಜೆಜೆ ಕಾಲೋನಿ ನಿವಾಸಿ ಪ್ರಭಾಕರ್ ಹತ್ಯೆಯಾದ ವ್ಯಕ್ತಿ. ಜ್ಯೋತಿಷಿ ರಾಮಕೃಷ್ಣನ ಮಾತು
ಎತ್ತಿನಗಾಡಿಗೆ ಬೈಕ್ ಡಿಕ್ಕಿ ಹೊಡೆದು ಮೂವರು ಯುವಕರ ದುರ್ಮರಣ
ಎತ್ತಿನಬಂಡಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಮೃತಪಟ್ಟ ದಾರುಣ ಘಟನೆ ಹಾವೇರಿ ಜಿಲ್ಲೆಯಲ್ಲಿ ಸಂಭವಿಸಿದೆ. ಮೈಲಾರ ಜಾತ್ರೆಗೆ ಒಂದೇ ಬೈಕ್ ನಲ್ಲಿ ಹೊರಟ್ಟಿದ್ದ ಮೂವರು ರಾಣೆಬೆನ್ನೂರು ತಾಲೂಕಿನ ಗುಡಗೂರು ಕ್ರಾಸ್ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಶಶಿಕುಮಾರ್ ಉಪ್ಪಾರ
ಧರ್ಮದ ಅವಹೇಳನೆಯ ಪೋಸ್ಟ್: ಮೈಸೂರಿನಲ್ಲಿ ಘರ್ಷಣೆ
ಮೈಸೂರು: ರಾಜಕೀಯ ನಾಯಕರ ಅರೆ ಬೆತ್ತಲೆ ಚಿತ್ರದ ಮೇಲೆ ಒಂದು ಧರ್ಮದ ಕುರಿತು ಅವಹೇಳನಕಾರಿ ಪದಗಳ ಬಳಸಿದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಹಿನ್ನೆಲೆಯಲ್ಲಿ ಉದಯಗಿರಿಯಲ್ಲಿ ಘರ್ಷಣೆ ನಡೆದಿರುವ ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ. ನಿನ್ನೆ ರಾತ್ರಿ ವ್ಯಕ್ತಿಯೊಬ್ಬರೂ ರಾಷ್ಟ್ರೀಯ ರಾಜಕೀಯ ನಾಯಕರ




