ಜಿಲ್ಲಾ ಸುದ್ದಿ
ನಿಶ್ಚಿತಾರ್ಥ ಮುಗಿಸಿ ವಾಪಸಾಗುತ್ತಿದ್ದಾಗ ಹನೂರಿನಲ್ಲಿ ಬಸ್ ಪಲ್ಟಿಯಾಗಿ ವ್ಯಕ್ತಿ ಸಾವು
ಚಾಮರಾಜನಗರದ ಹನೂರು ತಾಲೂಕಿನ ಬಂಡಳ್ಳಿ ಹೊರ ವಲಯದ ತೆಳ್ಳನೂರು ರಸ್ತೆಯಲ್ಲಿ ಭಾನುವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಉರುಳಿ ಬಿದ್ದು ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ನವೀನ್(38) ಮೃತಪಟ್ಟವರು. ಘಟನೆಯಲ್ಲಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಶಾಗ್ಯ ಗ್ರಾಮದ ಜನರು ನಿಶ್ಚಿತಾರ್ಥಕ್ಕೆಂದು ಬಸ್ನಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹಳ್ಳಿಗೆ ಹೋಗಿದ್ದವರು ಕಾರ್ಯಕ್ರಮ ಮುಗಿಸಿ ಗ್ರಾಮಕ್ಕೆ ಹಿಂತಿರುಗು ತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ
ಕರೆದಾಗ ಬರಲಿಲ್ಲವೆಂದು ಮೂರು ವರ್ಷದ ಮಗುವಿನ ಕೈ ಮುರಿದ ಚಿಕ್ಕಪ್ಪ
ಮೈಸೂರಿನ ಹುಣಸೂರು ತಾಲೂಕು ಬೀರನಹಳ್ಳಿ ಗ್ರಾಮದಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಮಗು ತಾನು ಕರೆದಾಗ ಬರಲಿಲ್ಲವೆಂದು ಚಿಕ್ಕಪ್ಪನೊಬ್ಬ ಮಗುವಿನ ಮೇಲೆ ಹಲ್ಲೆ ಮಾಡಿ ಕೈ ಮುರಿದಿದ್ದಾನೆ. ಚಿಕ್ಕಪ್ಪ ಆನಂದ್ ಎಂಬಾತ ಮಗುವಿಗೆ ದೊಣ್ಣೆಯಿಂದ ಹೊಡೆದು ಎರಡು ಕೈಮುರಿದಿದ್ದು ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಚಿನ್ನಾಭರಣವಿದ್ದ ಬ್ಯಾಗ್ ಹಿಂತಿರುಗಿಸಿದ ತುಮಕೂರಿನ ಆಟೋ ಚಾಲಕ
ತುಮಕೂರು ನಗರದಲ್ಲಿ ಆಟೋ ಚಾಲಕರೊಬ್ಬರು ಚಿನ್ನಾಭರಣವಿದ್ದ ಬ್ಯಾಗ್ ಅನ್ನು ಪ್ರಯಾಣಿಕರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದು ಸುದ್ದಿಯಾಗಿದ್ದಾರೆ. ತುಮಕೂರಿನ ಹನುಮಂತಪುರ ನಿವಾಸಿ ರವಿಕುಮಾರ್ ಅವರ ಆಟೋದಲ್ಲಿ ಪ್ರಯಾಣಿಕರು 4 ಲಕ್ಷ ಬೆಲೆ ಬಾಳುವ ಒಡವೆ ಇದ್ದ ಬ್ಯಾಗ್ ಬಿಟ್ಟು ಹೋಗಿದ್ದರು. ಅರಸೀಕೆರೆ ಮೂಲದ
ಮುಡಾಗೆ ವಾಪಸ್ ಮಾಡಿರೋ ಸೈಟ್ ಪಾರ್ವತಿ ಮತ್ತೆ ಕೇಳಲಿದ್ದಾರೆ: ಶಾಸಕ ಯತೀಂದ್ರ
ಮುಡಾದಿಂದ ಅಕ್ರಮವಾಗಿ ಸೈಟುಗಳನ್ನು ಪಡೆದ ಆರೋಪ ಕೇಳಿ ಬಂದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಬಿಎಂ ಪಾರ್ವತಿ ಸೈಟ್ಗಳನ್ನು ವಾಪಸ್ ಮಾಡಿದ್ದರು. ಈ ಸೈಟ್ಗಳನ್ನು ಅವರು ಮತ್ತೆ ಕ್ಲೈಮ್ ಮಾಡಲಿದ್ದಾರೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ
ಅಭಿವೃದ್ಧಿಯೇ ನಮ್ಮ ತಂದೆ ತಾಯಿ, ಗ್ಯಾರಂಟಿಗಳೇ ಬಂಧು ಬಳಗ: ಡಿ.ಕೆ.ಶಿವಕುಮಾರ್
“ಕಾಯಕದಲ್ಲಿಯೇ ದೇವರನ್ನು ಕಾಣಬೇಕು. ನಮಗೆ ಅಭಿವೃದ್ಧಿಯೇ ತಾಯಿ ತಂದೆ, ಗ್ಯಾರಂಟಿಗಳೇ ಬಂಧು ಬಳಗ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಕನಕಪುರ ಭೂಹಳ್ಳಿ ಹೊಸಕೆರೆ ಬಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, “ನನ್ನ ಕ್ಷೇತ್ರಕ್ಕೆ ಸುಮಾರು ರೂ.400 ಕೋಟಿಗಳಷ್ಟು ಅನುದಾನ
ರಾಜಕೀಯದವರನ್ನು ಒಳಗೆ ಬಿಟ್ಟುಕೊಳ್ಳದಿದ್ದರೆ ಶಿಕ್ಷಣ ಸಂಸ್ಥೆಗಳು ಬೆಳೆಯುತ್ತವೆ: ಡಿಸಿಎಂ
“ಶಿಕ್ಷಣ ಸಂಸ್ಥೆಯ ಒಳಗೆ ರಾಜಕೀಯದವರನ್ನು ಸೇರಿಸಬೇಡಿ. ಆಗ ಮಾತ್ರ ಆ ಶಿಕ್ಷಣ ಸಂಸ್ಥೆಗಳು ಉನ್ನತ ಮಟ್ಟಕ್ಕೆ ಬೆಳೆಯುತ್ತವೆ. ಇಲ್ಲದಿದ್ದರೇ ಶಿಕ್ಷಣದ ಗುಣಮಟ್ಟ ಹಾಳಾಗುತ್ತದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮಳವಳ್ಳಿಯಲ್ಲಿ ಬಿಎಂ ಎಜುಕೇಶನ್ ಟ್ರಸ್ಟ್ ವತಿಯಿಂದ ನಿರ್ಮಾಣವಾಗಿರುವ ಬಿಎಂ ಪಬ್ಲಿಕ್ ಶಾಲಾ
ಮೈಸೂರು ರೈಲು ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ!
ಮೈಸೂರು: ಇಲ್ಲಿನ ಕೇಂದ್ರ ರೈಲು ನಿಲ್ದಾಣಕ್ಕೆ ಭಾನುವಾರ ಬಾಂಬ್ ಇಟ್ಟಿರುವುದಾಗಿ ಅನಾಮಧೇಯ ಕರೆ ಬಂತು ಆತಂಕ ಸೃಷ್ಟಿಸಿತ್ತು. ಆರ್ಪಿಎಫ್ ಹಾಗೂ ಬಾಂಬ್ ನಿಷ್ಕಿçಯ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ರೈಲ್ವೆ ನಿಲ್ದಾಣದಲ್ಲಿ ತೀವ್ರ ತಪಾಸಣೆ ನಡೆಸಿದ ಬಳಿಕ ಹುಸಿ ಬಾಂಬ್ ಕರೆ
ಹಾಸನದಲ್ಲಿ ಕಟ್ಟಡ ಕುಸಿದು ಬೀದಿ ಬದಿ ವ್ಯಾಪಾರಿ ಮಹಿಳೆಯರು ಸಾವು
ರಾಜ್ಯದ ನಾನಾ ಕಡೆ ಅವಘಡಗಳಿಂದ ಭಾನುವಾರ ಹಲವರು ಪ್ರಾಣ ಕಳೆದುಕೊಂಡಿರುವ ಮಧ್ಯೆ ಹಾಸನದಲ್ಲಿ ಕಟ್ಟಡವೊಂದು ಕುಸಿದು ಮೂವರು ಮಹಿಳೆಯರು ಸ್ಥಳದಲ್ಲೇ ಅಸು ನೀಗಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಪಾಳು ಬಿದ್ದಿದ್ದ ಕಟ್ಟಡ ಕುಸಿದುಬಿದ್ದು ಈ ದುರಂತ ಸಂಭವಿಸಿದೆ. ಬೀದಿ ಬದಿ
ಮೈಸೂರು ರೈಲು ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ
ಅನಾಮಿಕ ವ್ಯಕ್ತಿಯೊಬ್ಬ ಮೈಸೂರು ರೈಲು ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದಾನೆ. ಬೆದರಿಕೆ ಕರೆಯು ಆಂಧ್ರ ಪ್ರದೇಶದಿಂದ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಬಾಂಬ್ ಇಡುವಂತೆ ತಿಳಿಸಿದ್ದಾರೆ ಎಂದು ಕರೆ ಮಾಡಿದ
ಚಿತ್ರದುರ್ಗದಲ್ಲಿ ಕಾರು ಲಾರಿ ಡಿಕ್ಕಿಯಾಗಿ ಐವರ ಸಾವು
ಚಿತ್ರದುರ್ಗ ತಾಲೂಕಿನ ಸಿಬಾರಾ ಗ್ರಾಮದ ಬಳಿ ಲಾರಿ-ಇನ್ನೋವಾ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಐವರು ಅಸು ನೀಗಿದ್ದಾರೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಸಿಬಾರ ಗ್ರಾಮದ ಹೋಟೆಲ್ವೊಂದರ ಬಳಿ ಬೆಂಗಳೂರು ಮೂಲದ ಲಾರಿ ಹಾಗೂ ಕಾರು ಡಿಕ್ಕಿಯಾಗಿ ದುರಂತ ಸಂಭವಿಸಿದೆ. ಗಾಯಗೊಂಡ ಓರ್ವನ