Menu

ಕೌಟುಂಬಿಕ ಕಲಹದಿಂದ ನೊಂದು ಹಾಸನದಲ್ಲಿ ತಾಯಿ ಮಗ ಆತ್ಮಹತ್ಯೆ

ಹಾಸನದ ಚನ್ನರಾಯಪಟ್ಟಣ ತಾಲೂಕಿನ ಕಬ್ಬಳಿ ಗ್ರಾಮದಲ್ಲಿ ಕೌಟುಂಬಿಕ ಕಲಹದಿಂದ ನೊಂದು ತಾಯಿ-ಮಗ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಯಂತಿ (60), ಭರತ್ (35) ಆತ್ಮಹತ್ಯೆ ಮಾಡಿಕೊಂಡ ತಾಯಿ-ಮಗ. ಭರತ್ ಎಂಟು ತಿಂಗಳ ಹಿಂದೆ ಅರಸೀಕೆರೆ ತಾಲೂಕು ಬಾಗೂರನಹಳ್ಳಿ ಗ್ರಾಮದ ಯುವತಿಯನ್ನು ವಿವಾಹವಾಗಿದ್ದರು. ಅತ್ತೆ-ಸೊಸೆ ನಡುವೆ ಹೊಂದಾಣಿಕೆ ಇಲ್ಲದೆ ಜಗಳ ನಡೆಯುತ್ತಿತ್ತು. ಇದೇ ಕಾರಣಕ್ಕೆ ಭರತ್ ಪತ್ನಿ ಮನೆಬಿಟ್ಟು ತವರು ಮನೆಗೆ ಹೋಗಿದ್ದರು. ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಎರಡು ಬಾರಿ ರಾಜಿ

ಹಾಸನದಲ್ಲಿ ಕಟ್ಟಡ ಕುಸಿದು ಬೀದಿ ಬದಿ ವ್ಯಾಪಾರಿ ಮಹಿಳೆಯರು ಸಾವು

ರಾಜ್ಯದ ನಾನಾ ಕಡೆ ಅವಘಡಗಳಿಂದ ಭಾನುವಾರ ಹಲವರು ಪ್ರಾಣ ಕಳೆದುಕೊಂಡಿರುವ ಮಧ್ಯೆ ಹಾಸನದಲ್ಲಿ ಕಟ್ಟಡವೊಂದು ಕುಸಿದು ಮೂವರು ಮಹಿಳೆಯರು ಸ್ಥಳದಲ್ಲೇ ಅಸು ನೀಗಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಪಾಳು ಬಿದ್ದಿದ್ದ ಕಟ್ಟಡ ಕುಸಿದುಬಿದ್ದು ಈ ದುರಂತ ಸಂಭವಿಸಿದೆ. ಬೀದಿ ಬದಿ

ಹಾಸನದಲ್ಲಿ ಪ್ರಿಯಕರನ ಜೊತೆ ಪತ್ನಿ ಪರಾರಿಯಾದಳೆಂದು ಪತಿ ಸುಸೈಡ್‌

ಹಾಸನದ  ಹೊಳೆನರಸೀಪುರ ತಾಲೂಕಿನ ಮಾಕವಳ್ಳಿ ಗ್ರಾಮದ ಬಳಿಪ್ರಿಯಕರನ ಜೊತೆ ಪತ್ನಿ ಪರಾರಿಯಾಗಿದ್ದಕ್ಕೆ ಮನನೊಂದ ಪತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ  ನಡೆದಿದೆ. ಅರಕಲಗೂಡು ತಾಲೂಕಿನ ಹೊನ್ನವಳ್ಳಿ ಗ್ರಾಮದ ರವಿ (38) ಆತ್ಮಹತ್ಯೆ ಮಾಡಿಕೊಂಡವರು.  ರವಿಯ ಪತ್ನಿ ಕೆಲವು ದಿನಗಳ ಹಿಂದೆ

ಹಾಸನ ರೈಲು ನಿಲ್ದಾಣದಲ್ಲಿ ಅಪರಿಚಿತೆಯ ಅತ್ಯಾಚಾರ, ಕೊಲೆ ಆರೋಪಿ ಸೆರೆ

ಹಾಸನದ ರೈಲು ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯ ಅತ್ಯಾಚಾರ ನಡೆಸಿ ತಲೆಗೆ ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ ನೇಪಾಳಿ  ಕೂಲಿಕಾರ್ಮಿಕನನ್ನು  ಅರಸೀಕೆರೆ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ನೇಪಾಳದ ಮೊರಾಂಗ್ ಜಿಲ್ಲೆಯ ಮೌಸಮ್ ಪಹಡಿ(25)ಬಂಧಿತ ಆರೋಪಿ.  ಆತನನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ

ಅರಸೀಕೆರೆಯಲ್ಲಿ ಒಂದೇ ದಿನ ಹೃದಯಾಘಾತದಿಂದ ಉಸಿರು ಚೆಲ್ಲಿದ ಅತ್ತಿಗೆ,ನಾದಿನಿ

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ  ಅತ್ತಿಗೆ ಮತ್ತು ನಾದಿನಿ ಒಂದೇ ದಿನ ಹೃದಯಾಘಾತಕ್ಕೊಳಗಾಗಿ ಮೃತಪಟಟ್ಟಿದ್ದಾರೆ.  ಅರಸೀಕೆರೆ ತಾಲೂಕು ಗಂಗಾಮತಸ್ಥ ಸಂಘದ ಅಧ್ಯಕ್ಷರಾದ ಕೇಶವಮೂರ್ತಿ ಅವರ ಸಹೋದರಿ ಜಾವಗಲ್ ಗ್ರಾಮದ ಪಿಎಸಿಎಸ್ ಹಾಲಿ ನಿರ್ದೇಶಕಿ ಹಾಗೂ ಮಾಜಿ ಅಧ್ಯಕ್ಷೆ, ಗ್ರಾ.ಪಂ ಮಾಜಿ ಸದಸ್ಯೆ

ಕ್ರೀಡಾಂಗಣಗಳು-ಗರಡಿ ಮನೆಗಳು ಹೆಚ್ಚಾಗಿರುವುದು ಆರೋಗ್ಯಕರ ಊರಿನ ಲಕ್ಷಣ: ಕೆವಿಪಿ

ಯಾವುದೇ ಊರಲ್ಲಿ ಆಸ್ಪತ್ರೆ-ಮೆಡಿಕಲ್ ಶಾಪ್ ಗಳಿಗಿಂತ ಕ್ರೀಡಾಂಗಣಗಳು-ಗರಡಿ ಮನೆಗಳು ಹೆಚ್ಚಾಗಿದ್ದರೆ ಅದು ಆರೋಗ್ಯಕರ ಊರಿನ ಲಕ್ಷಣ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದ್ದಾರೆ. ಹಾಸನದ ಅರಕಲಗೂಡಿನಲ್ಲಿ ಶ್ರೀ ರಾಘವೇಂದ್ರ ಯೂತ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ “ಸಿದ್ದರಾಮಯ್ಯ ಕಪ್” ಸೀಸನ್

ಪೊಲೀಸರ ಮೇಲೆ ಕಲ್ಲೆಸೆದ ರೌಡಿ ಕಾಲಿಗೆ ಗುಂಡೇಟು

ಹಾಸನದಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ತಡೆದು ಹಲ್ಲೆ ಮಾಡಿದ್ದ ರೌಡಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಒಂದು ಕೊಲೆ, ಮೂರು ಕೊಲೆ ಯತ್ನ ಪ್ರಕರಣಗಳ ಆರೋಪಿ ಮನುವನ್ನು ಬೆಂಗಳೂರಿನಲ್ಲಿ ಬಂಧಿಸಿ ನಗರ ಠಾಣೆ ಪೊಲೀಸರು ಹಾಸನಕ್ಕೆ ಕರೆ ತರುತ್ತಿದ್ದಾಗ

ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್‌ ತಡೆದು ರೌಡಿಯ ಹುಚ್ಚಾಟ

ಹಾಸನ ಹೊರವಲಯದ ಬೈಪಾಸ್‌ ರಸ್ತೆಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ತಡೆದ ರೌಡಿ ಲಾಂಗ್‌ನಿಂದ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ನಸುಕಿನ ಜಾವ ಬೈಪಾಸ್‌ ರಸ್ತೆಯ ದೇವರಾಯಪಟ್ಟಣದ ಬಳಿ ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್‌ ಸಂಚರಿಸುತ್ತಿತ್ತು. ಈ ಸಂದರ್ಭದಲ್ಲಿ ರೌಡಿ

ಹೊಳೆನರಸೀಪುರದಲ್ಲಿ ರೈಲಿಂದ ನದಿಗೆ ಬಿದ್ದ ವಿದ್ಯಾರ್ಥಿ

ಹಾಸನದ ಹೊಳೆನರಸೀಪುರ ಪಟ್ಟಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ವಿದ್ಯಾರ್ಥಿಯೊಬ್ಬ ನದಿಗೆ ಬಿದ್ದಿದ್ದಾನೆ. ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಮುಜಾಮಿಲ್ ನದಿಗೆ ಬಿದ್ದ ವಿದ್ಯಾರ್ಥಿ. ವಿದ್ಯಾಥಿ ಕೆ.ಆರ್ ನಗರದಿಂದ ಹಾಸನಕ್ಕೆ ಎಕ್ಸ್ಪ್ರೆಸ್ ರೈಲಿನಲ್ಲಿ ತೆರಳುತ್ತಿದ್ದ. ಚಲಿಸುತ್ತಿದ್ದ ರೈಲಿನ ಬೋಗಿಯ ಮೆಟ್ಟಿಲ ಮೇಲೆ ಮುಜಾಮಿಲ್

ಸಕಲೇಶಪುರದಲ್ಲಿ ಶಾಲೆಗೆಂದು ತೆರಳಿದ ಮೂವರು ವಿದ್ಯಾರ್ಥಿಗಳು ನಾಪತ್ತೆ

ಹಾಸನದ ಸಕಲೇಶಪುರ ತಾಲೂಕಿನ ಕುನಿಗನಹಳ್ಳಿ ಗ್ರಾಮದಲ್ಲಿ ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಮೂವರು ಮಕ್ಕಳು ನಾಪತ್ತೆಯಾಗಿದ್ದಾರೆ. ಕುನಿಗನಹಳ್ಳಿ ಗ್ರಾಮದ ಧರ್ಮಪ್ರಕಾಶ್, ಮನು ಹಾಗೂ ಕಿರುಹುಣಸೆ ಗ್ರಾಮದ ಮಹೇಂದ್ರ ಎಂಬವರ ಮಕ್ಕಳಾದ ಶರತ್ (16), ಧನಂಜಯ್ (16), ಮುರುಳಿ (16) ನಾಪತ್ತೆಯಾದವರು.